ಕಡೂರುತಾಲೂಕಿನ ಸಿಂಗಟಗೆರೆ ಹೋಬಳಿಯ ಕೆರೆಸಂತೆ ಶ್ರೀ ಮಹಾಲಕ್ಷೀ ದೇವಿ ಮಹಾರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಸಡಗರ ಸಂಭ್ರಮದಿಂದ ಕೆರೆಸಂತೆಯ ಗ್ರಾಮಸ್ಥರು, ವಕ್ಕಲುಗಳ ಸಹಕಾರದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಸಿಂಗಟಗೆರೆ ಹೋಬಳಿಯ ಕೆರೆಸಂತೆ ಶ್ರೀ ಮಹಾಲಕ್ಷೀ ದೇವಿ ಮಹಾರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಸಡಗರ ಸಂಭ್ರಮದಿಂದ ಕೆರೆಸಂತೆಯ ಗ್ರಾಮಸ್ಥರು, ವಕ್ಕಲುಗಳ ಸಹಕಾರದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಬೆಳ್ಳಿ, ಬಂಗಾರದ ಕವಚಗಳಿಂದ ಶೃಂಗಾರಗೊಂಡ ಮಹಾಲಕ್ಷ್ಮಿ ದೇವಿ ನೂತನ ರಥಕ್ಕೆ ಕೂರಿಸಲಾಯಿತು. ರಥಕ್ಕೆ ವಿವಿಧ ಬಣ್ಣಗಳಿಂದ ಹೂ, ಹಾರಗಳಿಂದ ಬಾಳೆ ಕಂದುಗಳಿಂದ ಅಲಂಕರಿಸಿ ರಥೋತ್ಸವಕ್ಕೆ ಬಂದಿದ್ದ ಹೇಮಗಿರಿ ಶ್ರೀ ಮಲ್ಲಿಕಾರ್ಜುನಸ್ವಾಮಿ,ಶ್ರೀ ಲಬೈರವೇಶ್ವರಸ್ವಾಮಿ, ಶ್ರೀಶಂಭುಲಿಂಗೇಶ್ವರಸ್ವಾಮಿ, ಶ್ರೀಜನಾರ್ಧನಸ್ವಾಮಿ ದೇವರ ರಥದ ಮುಂದೆ ಸಾಗಿದಂತೆ ಭಕ್ತರ ಹರ್ಷೋದ್ಗಾರಗಳೊಂದಿಗೆ ರಥ ಎಳೆಯಲಾಯಿತು. ಭಕ್ತರು ಬಾಳೆಹಣ್ಣುಗಳನ್ನು ರಥಕ್ಕೆ ಎಸೆದು ನೂತನ ರಥಕ್ಕೆ ನಮಸ್ಕರಿಸಿ ಪುನೀತರಾದರು. ಇದೇ ಸಂಧರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕರಿಬಡ್ಡೆ ಶ್ರೀನಿವಾಸ್ ಮಾತನಾಡಿ, ಶುಭ ಶುಕ್ರವಾರ ದೇವಿ ರಥೋತ್ಸವ ಸುಗಮವಾಗಿ ನಡೆದಿದ್ದು.ಶ್ರೀ ಮಹಾಲಕ್ಷೀ ದೇವಿ ರಥೋತ್ಸವ ಹೊಯ್ಸಳ ಸಾಮ್ರಾಟ ವಿಷ್ಣುವರ್ಧನ ಮಹಾರಾಜ ಹಾಗೂ ಪಟ್ಟದರಾಣಿ ಶಾಂತಲೆ ಅಣತಿಯಂತೆ ಕ್ರಿ.ಶ 1118ನೇ ಶ್ರೀ ಹೇವಿಳಂಬಿ ನಾಮ ಸಂವತ್ಸರದಲ್ಲಿ ಪ್ರಾರಂಭಿಸಿ ನೂರಾರು ವರ್ಷಗಳ ಕಾಲ ರಥೋತ್ಸವ ನಡೆದಿದೆ. ಕಾಲ ಬದಲಾದಂತೆ ರಥ ಶಿಥಿಲಗೊಂಡು ರಥೋತ್ಸವ ಸ್ಥಗಿತಗೊಂಡಿತ್ತು. ಕೇವಲ ಕಾರ್ತಿಕ ದೀಪೋತ್ಸವ ಮಾತ್ರ ನಡೆಯುತ್ತಿದ್ದು ಭಕ್ತರು ಹಾಗೂ ಸಮಿತಿಯವರು ಇದೀಗ 908ನೇ ವರ್ಷದ ವಿಷ್ಣು ಕಾರ್ತಿಕ ದಿಪೋತ್ಸವ ಮತ್ತು ರಥೋತ್ಸವವನ್ನು ಅದ್ಧೂರಿಯಾಗಿ ಮಾಡಿದ್ದಾರೆ ಎಂದರು. ಕಡೂರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಕಂದಾಯ ಅಧಿಕಾರಿ ರವಿ,ದೇವಾಲಯ ಸಮಿತಿ ಉಪಾಧ್ಯಕ್ಷ ಟ್ಯಾಂಕರ್ ಸ್ವಾಮಿ, ಕೆ.ಎಲ್.ಹೇಮರಾಜ್, ಪುರ ಬಸವರಾಜ್, ಸತ್ಯನಾರಾಯಣ ಮತ್ತು ಇಂದಿರಾ ಹೇಮರಾಜ್ ಸೇರಿದಂತೆ ಸಾವಿರಾರು ಭಕ್ತರು ಇದ್ದರು. 5ಕೆಕೆಡಿಯು1

ಕಡೂರು ತಾಲೂಕಿನ ಕೆರೆಸಂತೆ ಶ್ರೀ ಮಹಾಲಕ್ಷ್ಮೀ ದೇವಿ ಅವರ ರಥೋತ್ಸವ ಅದ್ಧೂರಿಯಾಗಿ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೇರವೇರಿತು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಸಮಿತಿ ಅಧ್ಯಕ್ಷರು ಭಕ್ತರು ಇದ್ದರು.