ಸಾರಾಂಶ
ದಸರಾ ಮೆರವಣಿಗೆಗೆ ಬ್ರಹ್ಮಶ್ರೀ ಆನಂದ್ ಗುರೂಜಿ ಚಾಲನೆ ನೀಡಿದರು. ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಚಾಮುಂಡೇಶ್ವರಿ ದೇವಿ ಮೆರವಣಿಗೆ ನಡೆಸಲಾಯಿತು. ಬಳಿಕ ನವದುರ್ಗಿಯರ ವಿಸರ್ಜನೆ ನೆರವೇರಿಸಲಾಯಿತು.
ಹಾರೋಹಳ್ಳಿ: ಹಾರೋಹಳ್ಳಿ ದಸರಾ ಆಚರಣಾ ಸಮಿತಿಯಿಂದ 8ನೇ ವರ್ಷದ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಳೆದ 11 ದಿನಗಳಿಂದ ಶ್ರೀ ಅರುಣಾಚಲೇಶ್ವರಸ್ವಾಮಿ ದೇವಾಲಯದಲ್ಲಿ ನವದುರ್ಗಿಯರ ಪ್ರತಿಷ್ಠಾಪನೆ ಸೇರಿದಂತೆ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ, ಮದ್ದುಗುಂಡುಗಳ ಅಮೋಘ ಬಿರಿಸುಬಾಣ, ಮಹಿಳೆಯರಿಂದ ಸಹಸ್ರನಾಮ ಕುಂಕುಮಾರ್ಚನೆ, ನವಮಿ, ಬನ್ನಿಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.ದಸರಾ ಮೆರವಣಿಗೆಗೆ ಬ್ರಹ್ಮಶ್ರೀ ಆನಂದ್ ಗುರೂಜಿ ಚಾಲನೆ ನೀಡಿದರು. ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಚಾಮುಂಡೇಶ್ವರಿ ದೇವಿ ಮೆರವಣಿಗೆ ನಡೆಸಲಾಯಿತು. ಬಳಿಕ ನವದುರ್ಗಿಯರ ವಿಸರ್ಜನೆ ನೆರವೇರಿಸಲಾಯಿತು.
ಪಟ್ಟಣದ ಚಾಮುಂಡೇಶ್ವರಿ, ಪ್ರಸನ್ನಪಾರ್ವತಿ ಹಾಗೂ ಅರುಣಾಚಲೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಡಾ.ಆನಂದ್ ಗುರೂಜಿ, ನವರಾತ್ರಿ ಹಾಗೂ ದಸರಾ ಉತ್ಸವವನ್ನು ವಿಜಯನಗರ ಸಾಮಾಜ್ಯದ ಅರಸರು ಆಚರಿಸಿದರು. ಆ ಸಂಪ್ರದಾಯವನ್ನು ಮೈಸೂರು ಮಹಾರಾಜರು ಅನುವಂಶೀಯವಾಗಿ ಪಾಲಿಸಿಕೊಂಡು ಬಂದಿದ್ದಾರೆ. ಅದೇ ರೀತಿ ಇಂತಹ ದಸರಾ ಆಚರಣೆ ಧಾರ್ಮಿಕ ಸಂಪ್ರದಾಯಗಳನ್ನು ಜಿಲ್ಲೆಯ ಚಿಕ್ಕ ತಾಲೂಕಿನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.ದಸರಾ ಸಮಿತಿ ಪದಾಧಿಕಾರಿಗಳಾದ ಎಂ.ಗೌತಮ್‌ಗೌಡ, ಎಂ.ಮಲ್ಲಪ್ಪ, ಪೊಲೀಸ್ ಮುನಿಯಪ್ಪ, ಹೋಟೆಲ್ ಜಗದೀಶ್, ಮುರಳೀಧರ್, ವಿಜಿಕುಮಾರ್, ಶಿವಾಲಾಲ್, ರಾಘವೇಂದ್ರ, ಯಾಕೂಬ್ ಪಾಷ, ಕೃಷ್ಣಪ್ಪ, ಭೀಮಯ್ಯ, ಕಮಲಮ್ಮ, ಸುಮಿತ್ರಮ್ಮ, ಪದ್ಮಮ್ಮ, ನಾಗರತ್ನ, ಸಹಸ್ರಾರು ಭಕ್ತರು ದಸರಾ ವೈಭವ ಕಣ್ತುಂಬಿಕೊಂಡರು.