ಪಾಲಿಕೆಯಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ

| Published : Nov 29 2024, 01:00 AM IST

ಸಾರಾಂಶ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ, ಕನ್ನಡ ಪರ ಸಂಘಟನೆಗಳು ಹಾಗೂ ಪತ್ರಕರ್ತರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ಬೆಳಿಗ್ಗೆ ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಗಣ್ಯರಿಂದ ಧ್ವಜಾರೋಹಣ ಕಾರ್ಯಕ್ರಮ, ಭುವನೇಶ್ವರಿ ತಾಯಿಯ ಮೆರವಣಿಗೆಯು ಜಾನಪದ ಕಲಾ ತಂಡಗಳು, ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ ನಡೆಯಿತು.

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ, ಕನ್ನಡ ಪರ ಸಂಘಟನೆಗಳು ಹಾಗೂ ಪತ್ರಕರ್ತರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ಬೆಳಿಗ್ಗೆ ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಗಣ್ಯರಿಂದ ಧ್ವಜಾರೋಹಣ ಕಾರ್ಯಕ್ರಮ, ಭುವನೇಶ್ವರಿ ತಾಯಿಯ ಮೆರವಣಿಗೆಯು ಜಾನಪದ ಕಲಾ ತಂಡಗಳು, ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ ನಡೆಯಿತು.

ಯುವ ಉದ್ಯಮಿ ಸಮರ್ಥ ಮಲ್ಲಿಕಾರ್ಜುನ ಶಾಮನೂರು ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ತಾಯಿಗೆ ಪುಷ್ಪ ಅರ್ಪಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಸಾಹಿತಿ ಕುಂ.ವಿರಭದ್ರಪ್ಪ, ಮಹಾಪೌರರಾದ ಕೆ.ಚಮನ್‌ಸಾಬ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮೇಯರ್ ಸೋಗಿ ಶಾಂತಕುಮಾರ, ಪಾಲಿಕೆ ಆಯುಕ್ತರಾದ ರೇಣುಕ, ಪಾಲಿಕೆ ಅಭಿಯಂತರರುಗಳು, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಸವಿತಾ ಗಣೇಶ ಹುಲ್ಮನಿ, ಉರ್‌ಬಾನು (ಪಂಡಿತ್), ಡಿ.ಎಸ್.ಆಶಾ, ಸುಧಾ ಮಂಜುನಾಥ ಇಟ್ಟಿಗುಡಿ, ವಿಪಕ್ಷ ನಾಯಕ ಪ್ರಸನ್ನಕುಮಾರ, ಸದಸ್ಯರಾದ ಎ.ನಾಗರಾಜ, ಮಂಜುನಾಥ ಗಡಿಗುಡಾಳ, ಅಬ್ದುಲ್ ಲತೀಫ್, ಕೆ.ಎಂ.ವೀರೇಶ, ಎಸ್.ಟಿ.ವೀರೇಶ, ಪಾಮೇನಹಳ್ಳಿ ನಾಗರಾಜ, ಆಶಾ ಉಮಾಶಂಕರ, ವೀಣಾ ನಂಜಪ್ಪ, ಶಿವಾನಂದ, ಶಿವಲೀಲ ಕೊಟ್ರಯ್ಯ, ಸೈಯದ್ ಚಾರ್ಲಿ, ಜೆ.ಡಿ.ಪ್ರಕಾಶ, ಎಲ್‌ಎಂಎಚ್ ಸಾಗರ್, ಎಸ್.ಮಲ್ಲಿಕಾರ್ಜುನ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜ, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಕನ್ನಡಪರ ಹೋರಾಟಗಾರರಾದ ಟಿ.ಶಿವಕುಮಾರ, ಕೆ.ಜಿ.ಶಿವಕುಮಾರ, ಸೋಮಶೇಖರ, ನಾಗೇಂದ್ರ ಬಂಡೀಕರ, ಶಾಂತಮ್ಮ, ವಿ.ಅವಿನಾಶ, ಸಂತೋಷ ದೊಡ್ಡಮನಿ, ಎನ್.ಎಚ್.ಹಾಲೇಶ, ದ್ರಾಕ್ಷಾಯಣಮ್ಮ ಮಲ್ಲಿಕಾರ್ಜುನಯ್ಯ, ಕಾವ್ಯ, ಶುಭಮಂಗಳ, ಮಂಗಳೂರಿನ ವಿಶ್ವಪರ್ಯಟನಾಗಾರ ಮಹಮ್ಮದ್ ಸಿನಾನ್ ಸೇರಿದಂತೆ ಕನ್ನಡಪರ ಹೋರಾಟಗಾರರು, ಪಾಲಿಕೆ ಸಿಬ್ಬಂದಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಮಹಿಳೆಯರು, ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.

ಜಾನಪದ ಕಲಾ ತಂಡಗಳ ಮೆರಗು:ಮೆರವಣಿಗೆಯಲ್ಲಿ ಎರಡು ಡಿಜೆಗಳು, ನಾದಸ್ವರ, ಬ್ರಾಸ್ ಬ್ಯಾಂಡ್, ಮಂಗಳೂರು ಬೆಳ್ತಂಗಡಿಯ ಕಲಾವಿದರ ತಂಡ, ಜಾನಪದ ಕಲಾ ಗೊಂಬೆಗಳು, ಬಸಾಪುರದ ಬಸವ ಕಲಾಲೋಕದ ನಂದಿಕೋಲು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಹಾಗೂ ನಗರದ ವಿವಿಧ ಶಾಲೆಗಳ ಮಕ್ಕಳಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವಿದ್ಯಾರಣ್ಯ, ಹಕ್ಕಬುಕ್ಕರು ಅನೇಕ ದಾರ್ಶನಿಕರ ಟ್ಯಾಬ್ಲೋಗಳು ಮೆರವಣಿಗೆಗೆ ಮೆರಗು ನೀಡಿದವು.