ಕನ್ನಡಪ್ರಭ ವಾರ್ತೆ ಬೆಳಗಾವಿ ಅನ್ನೋತ್ಸವದಿಂದ ಸಂಗ್ರಹವಾದ ಹಣವನ್ನು ಸಾರ್ವಜನಿಕ ಶೌಚಾಲಯಗಳು, ಸ್ಲೀಪಿಂಗ್ ಚಿಲ್ಡ್ರನ್ ಅರೌಂಡ್ ದಿ ವರ್ಲ್ಡ್ ಮತ್ತು ಸಮಾಜದ ಏಳಿಗೆಗಾಗಿ ಬಳಸುತ್ತಿರುವ ರೋಟರಿ ಕ್ಲಬ್‌ನ ಕಾರ್ಯವೈಖರಿ ಶ್ಲಾಘನೀಯ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಅರುಣ ಭಂಡಾರೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅನ್ನೋತ್ಸವದಿಂದ ಸಂಗ್ರಹವಾದ ಹಣವನ್ನು ಸಾರ್ವಜನಿಕ ಶೌಚಾಲಯಗಳು, ಸ್ಲೀಪಿಂಗ್ ಚಿಲ್ಡ್ರನ್ ಅರೌಂಡ್ ದಿ ವರ್ಲ್ಡ್ ಮತ್ತು ಸಮಾಜದ ಏಳಿಗೆಗಾಗಿ ಬಳಸುತ್ತಿರುವ ರೋಟರಿ ಕ್ಲಬ್‌ನ ಕಾರ್ಯವೈಖರಿ ಶ್ಲಾಘನೀಯ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಅರುಣ ಭಂಡಾರೆ ಹೇಳಿದರು.ಅಂಗಡಿ ಕಾಲೇಜು ಮೈದಾನದಲ್ಲಿ ಶುಕ್ರವಾರ ಆರಂಭವಾದ ಅನ್ನೋತ್ಸವ-2026ಕ್ಕೆ ಚಾಲನೆ ನೀಡಿ ಮಾತನಾಡಿದರು.ದೀಪಾ ಸಿದ್ನಾಳ್ ಮಾತನಾಡಿ, ಬೆಳಗಾವಿಯ ಜನರು ವರ್ಷವಿಡೀ ಕಾಯುವ ಆಹಾರ ಸಂಭ್ರಮದ ನಿರಂತರತೆಯನ್ನು ಅಭಿನಂದಿಸಿದರು.
ಈ ಮೇಳವು ಭಾರತಾದ್ಯಂತ ವಿವಿಧ ಆಹಾರ ಮಳಿಗೆಗಳನ್ನು ಹೊಂದಿದ್ದು, ಮೊಘಲಾಯಿ ಖಾದ್ಯಗಳು, ಕರಾವಳಿಯ ಸೀಫುಡ್ ಮತ್ತು ದೇಶದ ವಿವಿಧ ಭಾಗಗಳಿಂದ ವೈವಿಧ್ಯಮಯ ಸಂಗ್ರಹ ಇಲ್ಲಿದೆ ಎಂದರು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರುಶಾಂತ್ ಅವರಿಂದ ಸೂಫಿ ರೆಟ್ರೋ ಪ್ರದರ್ಶನ ಜರುಗಿತು. ಮುಂಬರುವ ದಿನಗಳಲ್ಲಿ ಬಾಲಿವುಡ್ ಮತ್ತು ಹಾಲಿವುಡ್ ಶೈಲಿಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಈ ಆಹಾರ ಮೇಳವು ಮುಂದಿನ ಹತ್ತು ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅಧ್ಯಕ ವಿನಾಯಕ್ ನಾಯಕ್ ಮತ್ತು ಮನೋಜ್ ಮೈಕೆಲ್ ಮನವಿ ಮಾಡಿದರು. ಟಿಕೆಟ್‌ಗಳು ಕ್ಯೂಆರ್ ಕೋಡ್ ಮೂಲಕ ಆನ್‌ಲೈನ್‌ನಲ್ಲಿ ಲಭ್ಯವಿವೆ.
ರಾಜೇಶ್ ಕುಮಾರ್ ತಳೆಗಾಂವ್, ಕಾರ್ಯದರ್ಶಿ ಡಾ.ಸಂತೋಷ್ ಪಾಟೀಲ್, ಕಮ್ಯುನಿಟಿ ಸರ್ವಿಸ್ ನಿರ್ದೇಶಕ ಮುಕುಂದ ಬಂಗ್ ಮತ್ತು ಅನ್ನೋತ್ಸವ ಅಧ್ಯಕ್ಷ ಮನೋಜ್ ಮೈಕೆಲ್ ಉಪಸ್ಥಿತರಿದ್ದರು.