ಸಾರಾಂಶ
ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಹಿಂದು ಮಹಾಗಣಪತಿ ಸಮಿತಿಯಿಂದ ಪ್ರತಿಷ್ಟಾಪಿಸಲಾದ ಹಿಂದು ಮಹಾಗಣಪತಿಯ ಅದ್ಧೂರಿ ಶೋಭಾಯಾತ್ರೆ ಹಾಗೂ ವಿಸರ್ಜನಾ ಕಾರ್ಯಕ್ರಮ ಸೆ.೧೬ರಂದು ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ಕಾರ್ಯದರ್ಶಿ ಶ್ರೀಮಂತ ರಾಜು ನವಲದಿ ಜಂಟಿಯಾಗಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಹಿಂದು ಮಹಾಗಣಪತಿ ಸಮಿತಿಯಿಂದ ಪ್ರತಿಷ್ಟಾಪಿಸಲಾದ ಹಿಂದು ಮಹಾಗಣಪತಿಯ ಅದ್ಧೂರಿ ಶೋಭಾಯಾತ್ರೆ ಹಾಗೂ ವಿಸರ್ಜನಾ ಕಾರ್ಯಕ್ರಮ ಸೆ.೧೬ರಂದು ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ಕಾರ್ಯದರ್ಶಿ ಶ್ರೀಮಂತ ರಾಜು ನವಲದಿ ಜಂಟಿಯಾಗಿ ತಿಳಿಸಿದರು.ನಗರದ ಕೋಟೆಯ ಮುಂಭಾಗದಲ್ಲಿ ಸಮಿತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ ೧೦ ಗಂಟೆಗೆ ಹಿಂದು ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅದ್ಧೂರಿ ಶೋಭಾಯಾತ್ರೆಯೂ ಕೋಟೆಯಿಂದ ಪ್ರಾರಂಭವಾಗಿ ನಗರದ ಪ್ರಕಾಶ್ ಏಶಿಯನ್ ಮಾಲ್, ಹುಮನಾಬಾದ್ ಬೇಸ್, ಚೌಕ್ ಪೋಲಿಸ್ ಠಾಣೆ, ಸುಪರ್ ಮಾರ್ಕೇಟ್, ಜಗತ್ ವೃತ್ತ, ಸಂಗೋಳ್ಳಿ ರಾಯಣ್ಣನ ವೃತ್ತದಿಂದ ಅಪ್ಪನ ಕೆರೆಯಲ್ಲಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿಂದು ಮಹಾಗಣಪತಿ ಸಮಿತಿಯ ಉಪಾಧ್ಯಕ್ಷ, ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಜಗದೀಶ್ ಕಟ್ಟಿಮನಿ, ಸಿದ್ದರಾಜ ಬಿರಾದಾರ್, ಸಹ ಕಾರ್ಯದರ್ಶಿ ಸಂತೋಷ್ ಕಾಮತ್, ಡಾ.ಚರಣ ಹೊನ್ನಳ್ಳಿ, ಕೋಶಾಧ್ಯಕ್ಷ ಶ್ರೀಶೈಲ ಮೂಲಗೆ, ಸದಸ್ಯರಾದ ಸಿದ್ಧಯ್ಯ ಸ್ವಾಮಿ, ನಾಗಯ್ಯ ಸ್ವಾಮಿ, ದೀಪಕ್ ಪವಾರ್, ಸಂಜು ರೇವಣಕರ್ , ಶಿವರಾಜ್ ಸಂಗೋಳಗಿ ಸ್ವಾಗತಿಸಿ ಪರಿಚಯಿಸಿದರು.ಶೋಭಾಯಾತ್ರೆಗೆ ದೇಶಿವಾದ್ಯಗಳ ಮೆರುಗು
೨೧ ದಿನಗಳ ಕಾಲದ ಗಣೇಶೋತ್ಸವದಲ್ಲಿ ಪಂಚ್ ಪರಿವರ್ತನೆ ಕುರಿತು ಜಾಗೃತಿ ಮೂಡಿಸಲಾಗಿದ್ದು, ಕಲಿಕಾ ಕೇಂದ್ರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಗೀತ, ಭರತನಾಟ್ಯ, ಕೊಳಲು ವಾದನ, ಭಜನೆ, ತಬಲಾ ವಾದನ ಸೇರಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೆ.೧೬ರ ಬೆಳಿಗ್ಗೆ ೧೦ಗಂಟೆಗೆ ನಡೆಯಲಿರುವ ಹಿಂದು ಮಹಾಗಣಪತಿಯ ಅದ್ಧೂರಿ ಶೋಭಾಯಾತ್ರೆಗೆ ದೇಶಿ ವಾದ್ಯಗಳಾದ ನಾಸಿಕ್ ಡೋಲು, ಪರಳಿಯ ಡೋಲ್ ತಾಷಾ, ಸಿಂದಗಿ ಚಿಟ್ಟಲಗಿ, ಸ್ಥಳೀಯ ಡೋಳ್ಳು, ಹಲಗಿ ಭಜನೆ ಶೋಭಾಯಾತ್ರೆಗೆ ಮತ್ತಷ್ಟು ಮೆರಗು ನೀಡಲಿವೆ ಎಂದು ಸಮಿತಿಯ ಕಾರ್ಯದರ್ಶಿ ರಾಜು ಶ್ರೀಮಂತ ನವಲದಿ ಹೇಳಿದರು.ಇಂದು ಲಕ್ಷ ದೀಪೋತ್ಸವ
ದೇಶದ ಗಡಿ ಕಾಯುವ ಯೋಧ ಹಾಗೂ ಅನ್ನ ನೀಡುವ ರೈತನ ಆರೋಗ್ಯ ಬದುಕು ನೆಮ್ಮದಿಯಿಂದ ಕೂಡಿರಲಿ ಎಂಬ ಸಂಕಲ್ಪದೊಂದಿಗೆ ಹಿಂದು ಮಹಾಗಣಪತಿ ಸಮಿತಿಯಿಂದ ನಗರದ ಕೋಟೆಯ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಲಾದ ಹಿಂದು ಮಹಾಗಣಪತಿ ಎದುರು ಭಾನುವಾರ ಸಂಜೆ ೬ ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ನಗರ ಹಾಗೂ ಜಿಲ್ಲೆಯ ಮಾತೇಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿ ಪದಾಧಿಕಾರಿ ಶಿವರಾಜ್ ಸಂಗೋಳಗಿ ತಿಳಿಸಿದರು.-------
೨೧ ದಿನಗಳ ಕಾಲ ಕುಟುಂಬ ಪ್ರಭೋಧನ, ಪರಿಸರ ಜಾಗೃತಿ, ಸಾಮಾಜಿಕ ಸಾಮರಸ್ಯ, ನಾಗರಿಕ ಶಿಷ್ಟಾಚಾರ ಹಾಗೂ ಸ್ವದೇಶಿ ಜಾಗೃತಿ ಸೇರಿದಂತೆ ಪಂಚ್ ಪರಿವರ್ತನೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆದಿದ್ದು, ಸೆ.೧೬ರ ಹಿಂದು ಮಹಾಗಣಪತಿ ಅದ್ಧೂರಿ ಶೋಭಾಯಾತ್ರೆಗೆ ಜಿಲ್ಲೆಯ ಸಕಲ ನಾಗರಿಕರು ಭಾಗಿಯಾಗುವ ಮೂಲಕ ಯಶಸ್ವಿಗೊಳಿಸೋಣ.-ಸುಮಂಗಲಾ ಚಕ್ರವರ್ತಿ, ಸಹ ಕಾರ್ಯದರ್ಶಿ, ಹಿಂದು ಮಹಾಗಣಪತಿ ಸಮಿತಿ,ಕಲಬುರಗಿ