ಕವಿತಾಳದಲ್ಲಿ ಸಂವಿಧಾನ ಜಾಗೃತಿ ಜಾಥಕ್ಕೆ ಅದ್ದೂರಿ ಸ್ವಾಗತ

| Published : Feb 05 2024, 01:47 AM IST

ಕವಿತಾಳದಲ್ಲಿ ಸಂವಿಧಾನ ಜಾಗೃತಿ ಜಾಥಕ್ಕೆ ಅದ್ದೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಕವಿತಾಳ ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕನ್ನಡಪ್ರಭವಾರ್ತೆ ಕವಿತಾಳ

ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಕಲ್ಮಠದ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಫಾದರ್ ವಿಜಯ ಕುಮಾರ ಹಾಗೂ ಮು ಧರ್ಮಗುರು ಆಜಂ ಉಮ್ರಿ, ಪಟ್ಟಣ ಪಂಚಾಯತ ಸದಸ್ಯರು ಮತ್ತು ಪಟ್ಟಣದ ಪ್ರಮುಖರು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು.

ಜಾಥಾ ನವಚೇತನ ಶಾಲೆಯಿಂದ ಶಿವಯೋಗಿ ಶಿವಪ್ಪ ತಾತ ನವರ ಮಠ, ಅನ್ವರಿ ಕ್ರಾಸ್ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ತಲುಪಿತು. ನಂತರ ಅಲ್ಲಿ ನಾಮಫಲಕಕ್ಕೆ ಗಣ್ಯರು ಮಾಲಾರ್ಪಣೆ ಮಾಡಿದರು. ಗ್ರಾಮ ಆಡಳಿತಾಧಿಕಾರಿ ಸದಾಕ್ ಅಲೀ ಅವರು ಸಂವಿಧಾನದ ಪೀಠಿಕೆ ಬೋಧನೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಶಿಕ್ಷಕ ಅಮರೇಶ ಮಾತನಾಡಿದರು.

ವಿದ್ಯಾರ್ಥಿಗಳು ಈ ಸಮಯದಲ್ಲಿ ಅಂಬೇಡ್ಕರ್ ವೇಷ ಧರಿಸಿದ್ದರು ಮತ್ತು ವಿದ್ಯಾರ್ಥಿನಿಯರು ಕುಂಭ ಕಳಸ ಹೊತ್ತು ಸಾಗಿದರು, ಡೊಳ್ಳು ಕುಣಿತ, ಕೋಲಾಟ, ಗೆಜ್ಜೆ ಕುಣಿತ ಕಾರ್ಯಕ್ರಮಕ್ಕೆ ಮೆರಗು ತಂದವು.

ಪಟ್ಟಣ ಪಂಚಾಯತಿ ಕಂದಾಯ ನಿರೀಕ್ಷಿಕ ಪಯಾಜ್, ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಲಿಂಗರಾಜ್ ಕಂದಗಲ್, ಎಂ. ರಾಘವೇಂದ್ರ, ರುಕ್ಮಿದಿನ್, ಮುಖಂಡರಾದ ತಿಪ್ಪಯ್ಯ ಸ್ವಾಮಿ, ಶರಣಬಸವ ಹಣಗಿ, ಓವಣ್ಣ, ಅಲ್ಲಮಪ್ರಭು, ಈರಣ್ಣ ಕ್ಯಾಡಿಗೇರಿ, ವೆಂಕಟೇಶ್ ಅರಿಕೇರಿ, ಅರಳಪ್ಪ ತುಪ್ಪುದುರ್, ಮೌನೇಶ್ ಹಿರೇ ಕುರುಬರ್, ರಾಜೇಶ ಬನ್ನಿಗಿಡದ, ಕಿರಲಿಂಗಪ್ಪ ಮ್ಯಾಗಳಮನಿ, ಖಾಜಾಪಾಶ. ದೇವರಾಜ್ ರೊಟ್ಟಿ ಮುಗ್ದುಮ್ ಅಲೀ, ದೇವರಾಜ್ ದಿನ್ನಿ, ಯಾಕೂಬ, ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.