ಅಯೋಧ್ಯೆ ಮಂತ್ರಾಕ್ಷತೆಯ ರಾಮರಥಕ್ಕೆ ಅದ್ಧೂರಿ ಸ್ವಾಗತ

| Published : Jan 08 2024, 01:45 AM IST

ಸಾರಾಂಶ

ಬಸವನಬಾಗೇವಾಡಿ: ಪಟ್ಟಣಕ್ಕೆ ಬೀಳಗಿ, ಕೊಲ್ಹಾರ ಮಾರ್ಗವಾಗಿ ಶನಿವಾರ ರಾತ್ರಿ ಆಗಮಿಸಿದ ಆಂಜನೇಯನ ಮೂರ್ತಿ, ಆಯೋಧ್ಯೆಯ ಶ್ರೀರಾಮಚಂದ್ರನ ಚಿತ್ರವಿರುವ ರಾಮರಥಕ್ಕೆ ಸ್ವಾಗತ ಕೋರಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣಕ್ಕೆ ಬೀಳಗಿ, ಕೊಲ್ಹಾರ ಮಾರ್ಗವಾಗಿ ಶನಿವಾರ ರಾತ್ರಿ ಆಗಮಿಸಿದ ಆಂಜನೇಯನ ಮೂರ್ತಿ, ಆಯೋಧ್ಯೆಯ ಶ್ರೀರಾಮಚಂದ್ರನ ಚಿತ್ರವಿರುವ ರಾಮರಥಕ್ಕೆ ಸ್ವಾಗತ ಕೋರಲಾಯಿತು.

ಭಾನುವಾರ ಬೆಳಗ್ಗೆ ಮಹಾರಾಜರ ಮಠದ ಆವರಣದಲ್ಲಿ ಕರಸೇವಕರಿಂದ ಆಂಜನೇಯನ ಮೂರ್ತಿಗೆ ಹೂವು ಮಾಲೆ ಹಾಕಿ ಪೂಜೆ ಸಲ್ಲಿಸಿದ ನಂತರ ಅದ್ಧೂರಿಯಾಗಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಶಿವಲಿಂಗಯ್ಯ ತೆಗ್ಗಿನಮಠ, ಪಂಚಮಸಾಲಿ, ಸಮಾಜದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಗೊಳಸಂಗಿ, ಡಾ.ಕರುಣಾಕರ ಚೌಧರಿ, ಕರಸೇವಕರಾದ ಸಂಗಮೇಶ ನಾಯ್ಕೋಡಿ, ಈರಣ್ಣ ಚಿಕ್ಕೊಂಡ, ವಿವೇಕ ಬ್ರಿಗೇಡ್‌ನ ವಿನೂತ ಕಲ್ಲೂರ, ಜಿಲ್ಲಾ ಸೇವಾ ಪ್ರಮುಖ ಡಾ. ಬಸವರಾಜ ಚವ್ಹಾಣ, ಮಲ್ಲಣ್ಣ ಕಿಣಗಿ, ಸತೀಶ ಕ್ವಾಟಿ, ರಾವುತ ಮಸಬಿನಾಳ, ಬಸವರಾಜ ಗಚ್ಚಿನವರ, ಚಂದ್ರಶೇಖರ ಬಿರಾದಾರ, ಯುವಬ್ರಿಗೇಡ್ ಇಂಡಿ ತಾಲೂಕು ಸಂಚಾಲಕ ಪ್ರದೀಪ ಪವಾರ, ಶಶಿಕಾಂತ ಇದ್ದರು.