ರಾಮನಗರ: ಇನ್ಮುಂದೆ ಮಹಿಳೆಯರು ಮತ್ತು ಮಕ್ಕಳು ಯಾವುದಾದರೂ ಅಪಾಯದಲ್ಲಿ ಸಿಲುಕಿದರೆ ಹೆದರುವ ಅವಶ್ಯಕತೆ ಇಲ್ಲ. ಯಾಕೆಂದರೆ ಇಂತವರ ನೆರವಿಗೆ ಅಂತಲೇ ಅಕ್ಕಪಡೆ ರಸ್ತೆಗಿಳಿದಿದೆ.
ರಾಮನಗರ: ಇನ್ಮುಂದೆ ಮಹಿಳೆಯರು ಮತ್ತು ಮಕ್ಕಳು ಯಾವುದಾದರೂ ಅಪಾಯದಲ್ಲಿ ಸಿಲುಕಿದರೆ ಹೆದರುವ ಅವಶ್ಯಕತೆ ಇಲ್ಲ. ಯಾಕೆಂದರೆ ಇಂತವರ ನೆರವಿಗೆ ಅಂತಲೇ ಅಕ್ಕಪಡೆ ರಸ್ತೆಗಿಳಿದಿದೆ. ಹೌದು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ರೇಷ್ಮೆನಾಡು ರಾಮನಗರ (ಜಿಲ್ಲಾ ಕೇಂದ್ರ)ದಲ್ಲಿ ಅಕ್ಕಪಡೆಯನ್ನು ಜಾರಿಗೆ ತರಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಮಹಿಳಾ ಗೃಹ ರಕ್ಷಕರನ್ನು ಒಳಗೊಂಡು ಈ ಅಕ್ಕ ಪಡೆಯನ್ನು ರಚಿಸಲಾಗಿದೆ.
ರಾಮನಗರದಲ್ಲಿನ ಜಿಲ್ಲಾ ಪೊಲೀಸ್ ಕಚೇರಿ ಸಂಕೀರ್ಣದ ಆವರಣದಲ್ಲಿ ಸೋಮವಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ದಿನೇಶ್, ಡಿವೈಎಸ್‌ಪಿ ಶ್ರೀನಿವಾಸ, ಜಿಲ್ಲಾ ನಿರೂಪಣಾಧಿಕಾರಿ ಡಾ. ಲಕ್ಷ್ಮೀ ದೇವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಜನಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕ್ಯಾಪ್ಟನ್ ಡಾ. ಲಕ್ಷ್ಮೀ ಅವರು ಅಕ್ಕಪಡೆ ವಾಹನಕ್ಕೆ ಹಸಿರು ನಿಶಾನೆ ತೋರಿಸಿದರು.ಈ ಮೊದಲು ಬೀದರ್‌ನಲ್ಲಿ ಪ್ರಾಯೋಗಿಕವಾಗಿ ಗೃಹ ಇಲಾಖೆಯಿಂದ ಅಕ್ಕಪಡೆ ರಚಿಸಲಾಗಿತ್ತು. ಅದು ಯಶಸ್ಸು ಪಡೆದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಕ್ಕಪಡೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಸ್ತರಿಸಿದೆ. ಅದರಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರ ರಾಮನಗರದಲ್ಲಿಯೂ ಚಾಲನೆ ಸಿಕ್ಕಿದ್ದು, ಪ್ರಮುಖವಾಗಿ ರಾಜ್ಯ ಮಹಿಳಾ ಗೃಹ ರಕ್ಷಕರನ್ನು ಒಳಗೊಂಡಂತೆ ಅಕ್ಕಪಡೆ ಕಾರ್ಯನಿರ್ವಹಿಸಲಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು :ಈ ಅಕ್ಕ ಪಡೆಗೆ ಒಂದು ವಾಹನ ನೀಡಲಾಗಿದ್ದು, ಅಕ್ಕ ಪಡೆ ಯೋಜನೆಯ ತಂಡದವರು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಮಹಿಳೆಯರು ಮತ್ತು ಮಕ್ಕಳು ಸಂಕಷ್ಟದಲ್ಲಿರುವವರ ಕರೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಾರೆ. ಪ್ರಮುಖವಾಗಿ ಹೆಣ್ಣು ಮಕ್ಕಳು , ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಶಾಲೆಗಳು, ಕಾಲೇಜುಗಳು, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ನಿಯಮಿತವಾಗಿ ಗಸ್ತು ನಡೆಸಲಿದ್ದಾರೆ.
ಲಿಂಗ ಸಮಾನತೆ, ಮಕ್ಕಳ ರಕ್ಷಣೆ, ಕಾನೂನು ಹಕ್ಕುಗಳ ಸಹಾಯವಾಣಿಗಳು ಮತ್ತು ವರದಿ ಮಾಡುವ ಕಾರ್ಯವಿಧಾನಗಳಂತಹ ವಿಷಯಗಳ ಕುರಿತು ಶಾಲೆ, ಮಾರುಕಟ್ಟೆ ಮತ್ತು ನೆರೆಹೊರೆಗಳಲ್ಲಿ ಕಾನೂನು ಅರಿವು ಅಭಿಯಾನಗಳನ್ನು ನಡೆಸಲಿದೆ. ಅಲ್ಲದೆ, ಸಮುದಾಯದಲ್ಲಿ ಸ್ನೇಹಪರ ಮತ್ತು ವಿಶ್ವಾಸಾರ್ಹ ಸ್ಥಿತಿಯನ್ನು ಸ್ಥಾಪಿಸುವುದು, ಸಂತ್ರಸ್ಥೆಯರಿಗೆ ಯಾವುದೇ ಭಯವಿಲ್ಲದೆ ಕಾನೂನು ಸಹಾಯ ಪಡೆಯಲು ಈ ಪಡೆ ಪ್ರೋತ್ಸಾಹಿಸುತ್ತದೆ.ಸಿಬ್ಬಂದಿ ನಿಯೋಜನೆ :
ಗೃಹರಕ್ಷಕ ದಳದ ನಾಲ್ವರು ಮಹಿಳಾ ಸಿಬ್ಬಂದಿಯನ್ನು ಅಕ್ಕಪಡೆಗೆ ನಿಯೋಜಿಸಲಾಗಿದೆ. ಅದರಂತೆ ರಾಮನಗರದಲ್ಲಿಯೂ ನೇಮಕಗೊಂಡಿರುವ ನಾಲ್ವರಲ್ಲಿ ತಲಾ ಒಬ್ಬರು ಎರಡು ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ, ಮಧ್ಯಾಹ್ನ 2 ರಿಂದ ರಾತ್ರಿ 8ರವರೆಗೆ ಎರಡು ಪಾಳಿಗಳನ್ನು ಸೃಜಿಸಲಾಗಿದೆ.ಗೃಹ ರಕ್ಷಕ ದಳದ ಮಹಿಳಾಸಿಬ್ಬಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೇ ಸಂಬಂಳ ಪಾವತಿಸಲಿದೆ. ಇವರೊಂದಿಗೆ ತಲಾ ಒಬ್ಬ ಚಾಲಕ ಮತ್ತು ಮಹಿಳಾ ಪೊಲೀಸ್ ಪೇದೆಯನ್ನು ಪೊಲೀಸ್ ಇಲಾಖೆ ನಿಯೋಜಿಸಿದೆ.
ಕೋಟ್ ........ಅಕ್ಕಪಡೆ ಪ್ರಾರಂಭಿಕವಾಗಿ ರಾಮನಗರದಲ್ಲಿ ಕಾರ್ಯಾಚರಣೆ ನಡೆಸಿ, ನಂತರ ತನ್ನ ವ್ಯಾಪ್ತಿಯನ್ನು ಹಂತ ಹಂತವಾಗಿ ಜಿಲ್ಲಾದ್ಯಂತ ವಿಸ್ತರಿಸಲಿದೆ. ಅಕ್ಕಪಡೆ ಆರೈಕೆ ಮತ್ತು ರಕ್ಷಣೆಯ ಅಗತ್ಯ ಇರುವವರಿಗೆ ತಕ್ಷಣ ಸ್ಪಂದಿಸಲಿದೆ.
- ದಿನೇಶ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂ.ದಕ್ಷಿಣ ಜಿಲ್ಲೆಕೋಟ್ ...
ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ರಾಮನಗರದಲ್ಲಿ ಅಕ್ಕಪಡೆ ಸ್ಥಾಪಿಸಿ, ವಾಹನ ಸಂಚಾರ ಪ್ರಾರಂಭಿಸಿದೆ. ಅಕ್ಕಪಡೆ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸಲಿದೆ.- ಶ್ರೀನಿವಾಸ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂ.ದಕ್ಷಿಣ ಜಿಲ್ಲೆ.
ಬಾಕ್ಸ್..............ಅಕ್ಕಪಡೆಯ ಜವಾಬ್ದಾರಿಗಳೇನು ?
- ಮಹಿಳಾ ಕಿರುಕುಳ ಪ್ರಕರಣಗಳ ಬಗ್ಗೆ ಪೊಲೀಸ್ ಠಾಣೆಗೆ ವರದಿ ನೀಡುವುದು- ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಜಾಗೃತಿ ಮೂಡಿಸುವುದು
- ಪೋಕ್ಸೊ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಣೆ ಬಗ್ಗೆ ಅರಿವು ಮೂಡಿಸುವುದು.- ಶಾಲಾ ಕಾಲೇಜುಗಳು, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳ ಆವರಣದಲ್ಲಿ ದುಷ್ಕರ್ಮಿಗಳ ಬಗ್ಗೆ ನಿಗಾ ವಹಿಸುವುದು
- ಸಿಗ್ನಲ್ ಬಳಿ ಮಕ್ಕಳಿಂದ ಭಿಕ್ಷಾಟನೆ ತಡೆಗಟ್ಟುವುದು- ಸಹಾಯವಾಣಿಗಳಿಂದ ಬರುವ ಎಲ್ಲ ತುರ್ತು ಕರೆಗಳಿಗೂ ಸ್ಪಂದಿಸುವುದು, ಸೂಕ್ತ ಶಿಷ್ಟಾಚಾರದೊಂದಿಗೆ ಸಂತ್ರಸ್ತೆಯರನ್ನು ರಕ್ಷಿಸುವುದು.
5ಕೆಆರ್ ಎಂಎನ್ 5.ಜೆಪಿಜಿರಾಮನಗರದ ಜಿಲ್ಲಾ ಪೋಲಿಸ್ ಕಚೇರಿ ಸಂಕೀರ್ಣದ ಆವರಣದಲ್ಲಿ ಅಕ್ಕಪಡೆ ವಾಹನಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಚಂದ್ರಪ್ಪ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ದಿನೇಶ್ ಹಸಿರು ನಿಶಾನೆ ತೋರಿಸಿದರು.