ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜಾನಪದ ಸಾಹಿತ್ಯ ಬದುಕಲು ಸನ್ಮಾರ್ಗ ತೋರಿಸಿಕೊಟ್ಟಿದೆ. ಮಾನವೀಯ ಮೌಲ್ಯಗಳನ್ನು ಕಾಪಾಡಿದ ಕೀರ್ತಿ ಗ್ರಾಮೀಣರಿಗೆ ಸಲ್ಲುತ್ತದ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ರಮೇಶ ದೇಸಾಯಿ ಹೇಳಿದರು. ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಜಾನಪದ ಚಿಂತನ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು. ಜಾನಪದ ಗೀತೆಗಳು ಬದುಕು ಪರಿವತ೯ನೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಜಾನಪದ ಸಾಹಿತ್ಯ ಎಲ್ಲರ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.ಡಾ.ಸಂಗಮೇಶ ಮೇತ್ರಿ ಮಾತನಾಡಿ, ಮಕ್ಕಳಲ್ಲಿ ಜಾನಪದ ಸಾಹಿತ್ಯ ಅಭಿರುಚಿ ಬೆಳೆಸುವ ಅವಶ್ಯವಿದೆ. ಜಾನಪದ ಸಾಹಿತ್ಯಕ್ಕೆ ಪೂರ್ವಜರ ಕೊಡುಗೆ ಅಪಾರವಾಗಿದ್ದು, ರೈತರು ಹಾಗು ಮಹಿಳೆಯರು ನಿತ್ಯ ಕಾಯಕದಲ್ಲಿ ಹಾಡುಗಳನ್ನು ರಚಿಸಿ ಹಾಡಿದ್ದಾರೆ ಎಂದು ವಿವರಿಸಿದರು. ಜಾನಪದ ವಿದ್ವಾಂಸ ಶಿವಾನಂದ ಮಂಗಾನವರ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅನೇಕ ಗೋಷ್ಠಿಯನ್ನು ಹಾಗು ದತ್ತಿ ನಿಧಿ ಕಾರ್ಯಕ್ರಮ ಮಾಡುವುದರ ಮೂಲಕ ಜಾನಪದ ಸಾಹಿತ್ಯ ಉಳಿಸುವ ಹಾಗು ಬೆಳೆಸುವ ಕಾರ್ಯ ಶ್ಲಾಘನೀಯ ಎಂದರು. ತಾಳಿಕೋಟೆಯ ಜಾನಪದ ವಿದ್ವಾಂಸೆ ಶಿವಲೀಲಾ ಮುರಾಳ ಮಾತನಾಡಿ, ಗರತಿಯ ಜೀವನ ಹಾಡುಗಳಲ್ಲಿ ಹಾಡಿ ಜಾನಪದ ಸಾಹಿತ್ಯದ ಮೌಲ್ಯಗಳನ್ನು ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಜಾನಪದ ಸಾಹಿತ್ಯ ನಮ್ಮೆಲ್ಲರ ಜೀವನದ ಮೌಲ್ಯಯುತ ಸಂದೇಶವಾಗಿದೆ ಎಂದರು.ತತ್ವ ಪದ ವಿದ್ವಾಂಸ ಮಹೆತಾಬ ಕಾಗವಾಡ ಹಾಡಿ ರಂಜಿಸಿದರು. ಉಪ-ಪ್ರಾಚಾರ್ಯ ಪ್ರವೀಣ ಕುಮಾರ ಮಸೂತಿ, ಡಿ.ಜಿ.ಅಳ್ಳಿಕಟ್ಟಿ, ರವಿ ಖೇಡಗಿ, ಸುವರ್ಣಾ ಕತ್ನಳ್ಳಿ, ರೇಷ್ಮಾ ಪೀಸೆ, ಭಾಗ್ಯಜ್ಯೋತಿ, ಅಂಜುರಾ ಇನಾಮದಾರ, ಸುನಿತಾ ಮಠಪತಿ, ಮಂಜುಳಾ ಕಾಳಗಿ, ಅನುರಾಧ ಪೀರಗೊಂಡ, ಪೂಜಾ ಹೀರೆಮನಿ, ಬಿ.ವೈ.ಧನಗೊಂಡ. ವೈ.ಪಿ.ತಳವಾರ, ಬಿ.ಬಿ.ಮಾಳಿ, ಶಿವಾನಂದ ಭಜಂತ್ರಿ, ಮಹಾಂತೇಶ ಭಜಂತ್ರಿ, ಎಂ.ವಿ.ತಾವರಖೇಡ, ಡಿ.ಎಂ.ಮ್ಯಾಗೇರಿ, ವೈ.ಎಂ. ಇಂಡಿಕರ, ಎ.ಬಿ.ನದಾಪ, ಸಿ.ಎ.ಪಾಟೀಲ, ಸಿ.ಎಸ್.ಸಿಡ್ಯಾಳ, ಎಂ.ಬಿ.ಕೌಲಗಿ, ಸಂಜೀವಕುಮಾರ ಸರಸಂಬಿ, ರಿಯಾಜ ರೋಣ, ಎ.ಎಂ.ಲೋಣಿ, ಜಿ.ಬಿ ದೇವರಮನಿ, ಸುರೇಶ ಕಲಘಟಗಿ, ಬೀರು ಕರಂಡೆ, ವಿಶಾಲ ಮೋಗಲಿ, ಜಾಕೀರ ಪಟೇಲ, ಅಮೀತ ಹಾಲಳ್ಳಿ ಮುಂತಾದವರು ಇದ್ದರು.ಶಶಿಕಲಾ ನಾಯ್ಕೋಡಿ ಪ್ರಾರ್ಥಿಸಿದರು. ಬಿ.ಎನ್.ಬಿರಾದಾರ ಸ್ವಾಗತಿಸಿದರು. ಸಿ.ಎಸ್.ಹಿರೇಮಠ ನಿರೂಪಿಸಿದರು. ಜಿ.ಎಸ್.ಸಜ್ಜನ ವಂದಿಸಿದರು.