, ಗರಡಿಮನೆಯಲ್ಲಿ ಸ್ಥಳೀಯರ ಸಹಾಯದಿಂದ ಜಿಮ್ ಪರಿಕರಗಳನ್ನು ತಂದಿಟ್ಟಿದ್ದಾರೆ. ಜಿಮ್ ಇಷ್ಟಪಡುವವರು ಜಿಮ್ ಜೊತೆಗೆ ಗರಡಿಮನೆಯಲ್ಲೂ ಕಸರತ್ತು ಮಾಡಲು ಅವಕಾಶವಿದೆ. ಯುವಕರು ಜಿಮ್ ಕಡೆ ಹೊರಳುತ್ತಿರುವ ಕಾರಣ ಗರಡಿಮನೆಯಲ್ಲೇ ಜಿಮ್ ಉಪಕರಣ ಇಡಲಾಗಿದೆ.
ಕನ್ನಡಪ್ರಭ ವಾರ್ತೆ ಕೋಲಾರ
ಇಂಟರ್‌ನೆಟ್ ಯುಗದಲ್ಲಿ ಯುವಜನರು ದೈಹಿಕ ಆರೋಗ್ಯಕ್ಕಾಗಿ ಮಲ್ಟಿಜಿಮ್, ಅತ್ಯಾಧುನಿಕ ಫಿಟ್‌ನೆಸ್ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಕೆಲವು ಹುಡುಗರು ಇಂದಿಗೂ ಗರಡಿಮನೆಯಲ್ಲಿ ಕಸರತ್ತು ಮಾಡುತ್ತಿದ್ದು, ಐತಿಹಾಸಿಕ ಪರಂಪರೆ ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ಮಂಜುನಾಥ್ ತಿಳಿಸಿದರು.ನಗರದ ಟೇಕಲ್ ವೃತ್ತದ ಕೋಲಾರ ವ್ಯಾಯಾಮ ಶಾಲೆಯಲ್ಲಿ ಕ್ರೀಡಾ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಜಿಲ್ಲೆಯಲ್ಲಿ ಗರಡಿ ಮನೆ ಸಂಸ್ಕೃತಿ ಎಂದಿಗೂ ಅಳಿಯುವುದಿಲ್ಲ. ಇಲ್ಲಿಯ ಐತಿಹಾಸಿಕ ಹಿನ್ನೆಲೆ ಗಮನದಲ್ಲಿಟ್ಟುಕೊಂಡು ಗರಡಿಮನೆಗಳಿಗೆ ಸರ್ಕಾರದ ಸಹಾಯಹಸ್ತ ಬೇಕಾಗಿದೆ ಎಂದು ಹೇಳಿದರು.
ಜಯಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ತ್ಯಾಗರಾಜ್ ಮಾತನಾಡಿ, ಗರಡಿಮನೆಯಲ್ಲಿ ಸ್ಥಳೀಯರ ಸಹಾಯದಿಂದ ಜಿಮ್ ಪರಿಕರಗಳನ್ನು ತಂದಿಟ್ಟಿದ್ದಾರೆ. ಜಿಮ್ ಇಷ್ಟಪಡುವವರು ಜಿಮ್ ಜೊತೆಗೆ ಗರಡಿಮನೆಯಲ್ಲೂ ಕಸರತ್ತು ಮಾಡಲು ಅವಕಾಶವಿದೆ. ಯುವಕರು ಜಿಮ್ ಕಡೆ ಹೊರಳುತ್ತಿರುವ ಕಾರಣ ಗರಡಿಮನೆಯಲ್ಲೇ ಜಿಮ್ ಉಪಕರಣ ಇಡಲಾಗಿದೆ ಎಂದು ಹೇಳಿದರು.ಇದೇ ವೇಳೆ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾದ ಬಜರಂಗದಳ ಬಾಬು, ಹೃತ್ವೀಕ್, ತರಬೇತುದಾರರಾದ ಶಿವಕುಮಾರ್, ವಸಂತ್‌ರನ್ನು ಸನ್ಮಾನಿಸಿದರು.
ನಗರಸಭೆ ಮಾಜಿ ಸದಸ್ಯ ಮೋಹನ್ ಪ್ರಸಾದ್ ಬಾಬು, ಕುಸ್ತಿಪಟು ಶ್ರೀನಿವಾಸ್, ಅಗ್ನಿ ಶಾಮಕದಳ ಆನಂದ್, ರಮೇಶ್, ಗೋಪಾಲ್, ಮುಕೇಶ್, ಕೀಲುಕೋಟೆ ಹರೀಶ್, ಶಿವು, ಹರ್ಷ, ಶರತ್ ತರಬೇತುದಾರ ಯಶವಂತ್, ಧೀರಜ್, ಸರ್ವೇಶ್, ಪ್ರವೀಣ್, ನಾಗರಾಜ್, ಗಣೇಶ್, ಮಂಜು, ಸುರೇಶ್ ಬಾಬು ಇದ್ದರು.