ಇಂದು ದೇಶದಲ್ಲಿ ಹಿಂದೂ ಧರ್ಮಕ್ಕೆ ಸವಾಲುಗಳು ಎದುರಾಗುತ್ತಿವೆ. ಈ ಸವಾಲುಗಳನ್ನು ಎದುರಿಸಬೇಕಾದರೆ ಹಿಂದೂಗಳು ಒಂದಾಗಲೇಬೇಕು ಹಿಂದೂಗಳು ಒಂದಾದರೆ ಮಾತ್ರ ನಾವೆಲ್ಲರೂ ಈ ದೇಶದಲ್ಲಿ ಸುಖವಾಗಿ, ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ಕನ್ನಡಪ್ರಭ ವಾರ್ತೆ ಸಿರವಾರ

ಪಟ್ಟಣದ ಸಜ್ಜಲಶ್ರೀ ವಿದ್ಯಾ ಸಂಸ್ಥೆಯ ಆವರಣದಲ್ಲಿ ವೀರ ಸಾವರ್ಕರ್ ಯುವ ಸೇನೆ ವತಿಯಿಂದ ಆಯೋಜಿಸಿದ್ದ 5ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಅವರು ದಿಕ್ಸೂಚಿ ಭಾಷಣ ಮಾಡಿದರು.

ಧರ್ಮ ರಕ್ಷಣೆಗೆ ನಿಂತಿರುವ ಯುವಕರ ಆರಾಧ್ಯ ದೈವವೇ ಗಣೇಶ ಆದರೆ ಇಂದು ಗಣೇಶನ ಪ್ರತಿಷ್ಠಾಪನೆಗೂ ರಾಜ್ಯ ಸರ್ಕಾರ ನಾನಾ ಕಾನೂನುಗಳನ್ನು, ನಿರ್ಬಂಧಗಳನ್ನು ಹೇರುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ ಹಿಂದೂ ಹಬ್ಬಗಳ ಮೇಲೆ ಮಾತ್ರ ಸರ್ಕಾರದ ಕಣ್ಣು ಬೀಳುತ್ತಿದೆ ಇದನ್ನು ನಾವು ಸಹಿಸುವುದಿಲ್ಲ ಎಂದರು.

ಮುಂದೆ ರಾಜ್ಯದಲ್ಲಿ ಖಂಡಿತವಾಗಿಯೂ ಹಿಂದೂ ಧರ್ಮದ ಸರ್ಕಾರವೇ ರಚನೆಯಾಗುತ್ತದೆ ಆಗ ಗಣೇಶೋತ್ಸವ ವನ್ನು ರಾಷ್ಟ್ರೀಯ ಹಬ್ಬವಾಗಿ ಘೋಷಣೆ ಮಾಡಲಾಗುತ್ತದೆ ಅದಕ್ಕಾಗಿ ಇಂದು ಸೇರಿರುವ ಯುವಕರು ಮುಂದಿನ ಚುನಾವಣೆಯಲ್ಲಿ ಹಿಂದೂ ಬೆಂಬಲಿತ ಸರ್ಕಾರ ರಚಿಸಲು ಈಗಿಂದಲೇ ತಯಾರಾಗಬೇಕು ಎಂದು ಕರೆ ನೀಡಿದರು.

ನವಲಕಲ್ಲು ಬೃಹನ್ಮಠದ ಅಭಿನವಶ್ರೀ ಸೋಮನಾಥ ಶಿವಾಚಾರ್ಯರು, ಸಜ್ಜಲಗುಡ್ಡದ ದೊಡ್ಡಬಸವಾರ್ಯ ಸ್ವಾಮಿಗಳು, ಸೇನೆ ಅಧ್ಯಕ್ಷ ನಾಗರಾಜ ನಾಯಕ, ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಸಂಸದ ಬಿ.ವಿ.ನಾಯಕ ಸೇರಿ ಮೂರು ಸಾವಿರಕ್ಕೂ ಹೆಚ್ಚು ಜನರು ಇದ್ದರು.

---

30ಕೆಪಿಎಸ್ಡಬ್ಲ್ಯೂಆರ್ 01: ಬಸನಗೌಡ ಪಾಟೀಲ ಯತ್ನಾಳ್.