ರಾಗಿ ಬೆಳೆ ಧ್ವಂಸ ಮಾಡಿರುವ ಆನೆಗಳ ಹಿಂಡು

| Published : Nov 25 2023, 01:15 AM IST

ಸಾರಾಂಶ

ಹಾರೋಹಳ್ಳಿ: ಹೊಲಕ್ಕೆ ದಾಂಗುಡಿ ಇಟ್ಟ ಸುಮಾರು 14 ಆನೆಗಳ ಹಿಂಡು ರಾಗಿ ಬೆಳೆಯನ್ನು ತಿಂದು ತೇಗಿವೆ.ಹಾರೋಹಳ್ಳಿಯ ಮರಳವಾಡಿ ಸಮೀಪದ ಬುಡಗಯ್ಯನದೊಡ್ಡಿ ಗ್ರಾಮದ ಮಾರಕ್ಕ ಎಂಬುವರಿಗೆ ಸೇರಿದ ರಾಗಿ ಮೆದೆಯನ್ನು ತಿಂದಿವೆ.

ಹಾರೋಹಳ್ಳಿ: ಹೊಲಕ್ಕೆ ದಾಂಗುಡಿ ಇಟ್ಟ ಸುಮಾರು 14 ಆನೆಗಳ ಹಿಂಡು ರಾಗಿ ಬೆಳೆಯನ್ನು ತಿಂದು ತೇಗಿವೆ.

ಹಾರೋಹಳ್ಳಿಯ ಮರಳವಾಡಿ ಸಮೀಪದ ಬುಡಗಯ್ಯನದೊಡ್ಡಿ ಗ್ರಾಮದ ಮಾರಕ್ಕ ಎಂಬುವರಿಗೆ ಸೇರಿದ ರಾಗಿ ಮೆದೆಯನ್ನು ತಿಂದಿವೆ. ಮಾರಕ್ಕ ಅವರು 5 ಎಕರೆಯಲ್ಲಿ ರಾಗಿ ಬೆಳೆದಿದ್ದರು. ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದಿದ್ದ ರಾಗಿ ಬೆಳೆಯನ್ನು ಒಂದೆಡೆ ಮೆದೆ ಮಾಡಿದ್ದರು. ಮಾರಕ್ಕ ಬೆಳಿಗ್ಗೆ ಬಂದು ನೋಡಿದಾಗ ಆನೆಗಳು ತಿಂದು ಬಿಟ್ಟ ಅರ್ಧಂಬರ್ಧ ಹುಲ್ಲು ಮಾತ್ರ ಉಳಿದಿತ್ತು. ಘಟನೆಯಿಂದ ಗಾಬರಿಗೊಳಗಾದ ಮಾರಕ್ಕ ಕಣ್ಣೀರು ಹಾಕುತ್ತಾ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಆನೆಗಳ ಹಿಂಡುಗಳನ್ನು ಕಾಡಿಗೆ ಹಿಮ್ಮಟ್ಟಿಸಿದ್ದಾರೆ. ಅಲ್ಲದೇ ಸೂಕ್ತ ಪರಿಹಾರ ಒದಗಿಸುವ ಕೆಲಸವನ್ನೂ ಮಾಡಿದ್ದಾರೆ.