ಗುಣಮಟ್ಟದ ಜೀವನ ನಡೆಸಲು ಮನೆ ಅವಶ್ಯ: ಡಾ.ಪುಷ್ಪಲತಾ ವೈದ್ಯ

| Published : Apr 03 2025, 12:30 AM IST

ಗುಣಮಟ್ಟದ ಜೀವನ ನಡೆಸಲು ಮನೆ ಅವಶ್ಯ: ಡಾ.ಪುಷ್ಪಲತಾ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮನೆ ಎಲ್ಲರ ಕನಸಾಗಿದೆ. ಪ್ರತಿ ಕುಟುಂಬ ಗುಣಮಟ್ಟದ ಜೀವನ ನಡೆಸಲು ಮನೆಯ ಅಗತ್ಯವಿದೆ.

ಭಟ್ಕಳ: ತಾಲೂಕಿನ ಬೈಲೂರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ನೂತನವಾಗಿ ನಿರ್ಮಿಸಲ್ಪಟ್ಟ ವಾತ್ಸಲ್ಯ ಮನೆಯ ಹಸ್ತಾಂತರವನ್ನು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಪುಷ್ಪಲತಾ ವೈದ್ಯ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನೆ ಎಲ್ಲರ ಕನಸಾಗಿದೆ. ಪ್ರತಿ ಕುಟುಂಬ ಗುಣಮಟ್ಟದ ಜೀವನ ನಡೆಸಲು ಮನೆಯ ಅಗತ್ಯವಿದೆ. ಮಹಿಳೆಯರ ಸಬಲೀಕರಣ ಕಾರ್ಯದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಇದರಿಂದಾಗಿ ಸಾವಿರಾರು ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಪಾರಂಪಾರಿಕ ನಾಟಿ ವೈದ್ಯ ದೇವೇಂದ್ರ ನಾಯ್ಕ, ಸಂಘದ ಜಿಲ್ಲಾ ಜನಜಾಗೃತಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಶೇಟ್ ಮಾತನಾಡಿದರು.

ವಾತ್ಸಲ್ಯ ಮನೆ ಯೋಜನೆಯ ಫಲಾನುಭವಿಗಳಾದ ಮಾದೇವಿ ಪುಟ್ಟಪ್ಪ ಹಸ್ಲರ್ ಕುಟುಂಬದವರಿದ್ದರು. ಬೈಲೂರು ಪಿಡಿಒ ನಾಗರಾಜ, ಸದಸ್ಯರಾದ ಗಣಪತಿ, ಹೇಮಾವತಿ ಮೊಗೇರ, ಒಕ್ಕೂಟದ ಅಧ್ಯಕ್ಷೆ ಗಂಗಾ, ಸಂಘದ ಯೋಜನಾಧಿಕಾರಿ ಲತಾ ಬಂಗೇರ, ಸಮನ್ವಯಾಧಿಕಾರಿ ವಿನೋಧ ಬಾಲಚಂದ್ರ, ಮೇಲ್ವಿಚಾರಕ ಅಶೋಕ ಮುಂತಾದವರಿದ್ದರು.

ಭಟ್ಕಳದ ಬೈಲೂರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಜ್ಞಾನವಿಕಾಸ ಯೋಜನೆಯಡಿ ನಿರ್ಮಿಸಲಾದ ವಾತ್ಸಲ್ಯ ಮನೆಯನ್ನು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಪುಷ್ಪಲತಾ ವೈದ್ಯ ಹಸ್ತಾಂತರಿಸಿದರು.