ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎ.ಕೆ.ಕುಲದೀಪ್ ನೇತೃತ್ವದ ತಂಡ ಜಯಗಳಿಸಿದೆ.ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಡಿ.ಜೋಸೆಫ್ ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 16 ಮಂದಿ ಕಣದಲ್ಲಿದ್ದರು. ಎಲ್ಲಾ ಸ್ಥಾನ ಗಳಿಗೆ ನೇರ ಹಣಾಹಣಿ ನಡೆದು 8 ಪದಾಧಿಕಾರಿಗಳು ಗೆಲುವು ಸಾಧಿಸಿದರು.
ಅಧ್ಯಕ್ಷರಾಗಿ ಎ.ಕೆ.ಕುಲದೀಪ್ (84 ಮತಗಳು) ಮಹಿಳಾ ಮೀಸಲು ಉಪಾಧ್ಯಕ್ಷರಾಗಿ ಎಂ.ಶಾಂತಿ(87), ಖಜಾಂಚಿ ಆರ್.ರಾಜ್‌ಕುಮಾರ್(85), ರಾಜ್ಯ ಪರಿಷತ್ ಸದಸ್ಯರಾಗಿ ಎಚ್.ಎಂ.ಚೇತನ್(97), ಸಂಘಟನಾ ಕಾರ್ಯದರ್ಶಿ ಎಂ.ಬಿ.ಸುರೇಶ್( 110), ಮಹಿಳಾ ಮೀಸಲು ಸಂಘಟನಾ ಕಾರ್ಯದರ್ಶಿ ಐ.ಓ.ರುದ್ರಾಂಬಿಕ (98), ಕ್ರೀಡಾ ಕಾರ್ಯದರ್ಶಿ ಬಾಲಚಂದ್ರ (103), ಮಹಿಳಾ ಮೀಸಲು ಸಾಂಸ್ಕೃತಿಕ ಕಾರ್ಯದರ್ಶಿ ಎಂ.ಸಿ.ಸೌಮ್ಯ(98) ಆಯ್ಕೆಯಾಗಿದ್ದಾರೆ.ಸಹಾಯಕ ಚುನಾವಣಾಧಿಕಾರಿಯಾಗಿ ಕಡೂರು ತಾಪಂ ಸಹಾಯಕ ನಿರ್ದೇಶಕ ಎನ್.ಎಸ್.ದೇವರಾಜ್, ಚುನಾವಣಾ ಸಹಾಯಕರಾಗಿ ಶಿಕ್ಷಕ ವೀರೇಶ್ ಕೌಲಗಿ ಕರ್ತವ್ಯ ನಿರ್ವಹಿಸಿದರು.--ಕೋಟ್--
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
ಎ.ಕೆ.ಕುಲದೀಪ್, ಅಧ್ಯಕ್ಷರು, ಪಿಡಿಒ, ಜಿಲ್ಲಾ ಘಟಕ