ಸಾರಾಂಶ
ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲಾಪೂರದಲ್ಲಿ ಇತ್ತೀಚೆಗೆ ಕೊಲೆಯಾದ ದಲಿತ ಮಹಿಳೆ ಸಾವಿಗೆ ನ್ಯಾಯ ಕೊಡಿಸುವುದಕ್ಕಾಗಿ ಅ.20ರಂದು ಬೃಹತ್ ಸಮಾವೇಶ ನಡೆಸಲು ಜಿಲ್ಲಾ ದಲಿತ, ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟ ಸಮಿತಿ ನಿರ್ಧರಿಸಿದೆ.
ಜಿಲ್ಲಾ ದಲಿತ, ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟ ಸಮಿತಿ ತೀರ್ಮಾನ
ಕನ್ನಡಪ್ರಭ ವಾರ್ತೆ ಕನಕಗಿರಿ
ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲಾಪೂರದಲ್ಲಿ ಇತ್ತೀಚೆಗೆ ಕೊಲೆಯಾದ ದಲಿತ ಮಹಿಳೆ ಸಾವಿಗೆ ನ್ಯಾಯ ಕೊಡಿಸುವುದಕ್ಕಾಗಿ ಅ.20ರಂದು ಬೃಹತ್ ಸಮಾವೇಶ ನಡೆಸಲು ಜಿಲ್ಲಾ ದಲಿತ, ದಮನಿತರ ದೌರ್ಜನ್ಯಗಳ ವಿರೋಧಿ ಒಕ್ಕೂಟ ಸಮಿತಿ ನಿರ್ಧರಿಸಿದೆ.ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸಂಚಾಲಕ ದಲಿತ ಮುಖಂಡ ಬಸವರಾಜ ಶಿಲವಂತರ ಮಾತನಾಡಿ, ಯಲಬುರ್ಗಾ ತಾಲೂಕಿನ ಸಂಗನಹಾಳದಲ್ಲಿ ದಲಿತ ಯುವಕನ
ಹತ್ಯೆ ನಡೆದಿದ್ದು, ಈ ಕುರಿತು ಸೆ.17 ಹಾಗೂ 18ರಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಸಂಗನಹಾಳದವರೆಗೆ ಪಾದಯಾತ್ರೆ ಮೂಲಕ ಸ್ವಾಭಿಮಾನ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸೆ.19ರಂದು ವಿಠಲಾಪೂರ ಗ್ರಾಮದಿಂದ ಗಂಗಾವತಿ ಡಿವೈಎಸ್ಪಿ ಪೊಲೀಸ್ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಿ, ದಲಿತ ಮಹಿಳೆಯ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ನಂತರ ಪ್ರಗತಿಪರ ಸಂಘಟನೆಯ ತಾಲೂಕು ಅಧ್ಯಕ್ಷ ಪಾಮಣ್ಣ ಅರಳಿಗನೂರು ಮಾತನಾಡಿ, ಅ.20ರಂದು ಗಂಗಾವತಿ ತಾಲೂಕಿನ ವಿಠಲಾಪೂರ ಗ್ರಾಮದಲ್ಲಿ ಜಿಲ್ಲೆಯ ದೌರ್ಜನ್ಯ ಪ್ರಕರಣಗಳ ಸಭೆ ಹಮ್ಮಿಕೊಂಡಿದ್ದು, ಇದರಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಕೆ. ವೆಂಕಟೇಶ ನಿರ್ಲೂಟಿ, ಟಿ.ರತ್ನಾಕರ. ಎಚ್.ಎನ್. ಬಡಿಗೇರ, ಸಣ್ಣ ಹನುಮಂತ ಹುಲಿಹೈದರ, ಮರಿಸ್ವಾಮಿ ಕಂಪ್ಲಿ, ಸಣ್ಣ ಕನಕಪ್ಪ, ಹನುಮಂತ ಬಸರಿಗಿಡದ, ಶೇಷಪ್ಪ ಪೂಜಾರ, ಯಲ್ಲಪ್ಪ ಕಟ್ಟಿಮನಿ, ರಾಜೇಶ್ವರಿ ಮಡಿವಾಳ, ವಿಜಯರಾಣಿ, ಶೋಭಾ ರಾಂಪುರ್, ಶಾಂತಪ್ಪ ಬಸರಿಗಿಡ, ಬೇನಾಳಪ್ಪ ಪೂಜಾರಿ, ಉಮೇಶ್ ಮ್ಯಾಗಡೆ, ವೆಂಕಟೇಶ್ ಪೂಜಾರ್, ಮಂಜುನಾಥ್ ಮ್ಯಾಗಡೆ, ಕನಕಪ್ಪ ಜವಳಗೇರಾ, ಕನಕಪ್ಪ ಮ್ಯಾಗಡೆ, ಅಂಬರೀಶ ಕಡಗದ, ಮಲ್ಲಪ್ಪ ಮ್ಯಾಗಡೆ, ಪರಶುರಾಮ ಹುಲಿಹೈದರ, ಕೆಂಚಪ್ಪ ಹಿರೇಖೇಡ, ರಮೇಶ ಅಂಗಡಿ, ಶಶಿ ಕೋರಿ, ದುರುಗಪ್ಪ ದೊಡ್ಮನಿ ಇತರರಿದ್ದರು.;Resize=(128,128))
;Resize=(128,128))
;Resize=(128,128))