ಸಾರಾಂಶ
ಇಂಡೋ ಅಮೇರಿಕಾ ಶಾಂತಿ ಸೇವಾ ಪದಕ ಪುರಸ್ಕೃತರು ಹಾಗೂ ಪಂಜಾಬ್ ನ ವಾಘಾ ಬಾರ್ಡ್‌ರ್ ನಲ್ಲಿ ಬಿಎಸ್‌ಎಫ್ ನ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿರುವ ಮಾಯಸಂದ್ರದ ಕೆ.ಶಿವಣ್ಣನವರನ್ನು ತಾಲೂಕಿನ ಲಕ್ಷ್ಮಿದೇವರಹಳ್ಳಿಯ ಯುವಕರು ಆತ್ಮೀಯವಾಗಿ ಗೌರವಿಸಿ ಬೀಳ್ಕೊಡುಗೆ ನೀಡಿದರು.
ಕನ್ನಡಪ್ರಭವಾರ್ತೆ, ತುರುವೇಕೆರೆ
ಇಂಡೋ ಅಮೇರಿಕಾ ಶಾಂತಿ ಸೇವಾ ಪದಕ ಪುರಸ್ಕೃತರು ಹಾಗೂ ಪಂಜಾಬ್ ನ ವಾಘಾ ಬಾರ್ಡ್‌ರ್ ನಲ್ಲಿ ಬಿಎಸ್‌ಎಫ್ ನ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿರುವ ಮಾಯಸಂದ್ರದ ಕೆ.ಶಿವಣ್ಣನವರನ್ನು ತಾಲೂಕಿನ ಲಕ್ಷ್ಮಿದೇವರಹಳ್ಳಿಯ ಯುವಕರು ಆತ್ಮೀಯವಾಗಿ ಗೌರವಿಸಿ ಬೀಳ್ಕೊಡುಗೆ ನೀಡಿದರು. ಕೆ.ಶಿವಣ್ಣ ನವರು ರಜೆಯ ಮೇಲೆ ತಾಲೂಕಿನ ತಮ್ಮ ಸ್ವಗ್ರಾಮವಾದ ಮಾಯಸಂದ್ರಕ್ಕೆ ಆಗಮಿಸಿದ್ದರು. ಅವರು ಇದೇ ತಿಂಗಳ ೨೮ ರಂದು ಪುನಃ ಸೇನೆಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ಪಂದನ ದೀಕ್ಷಾ ಹೆಲ್ತ್ ಕೇರ್ ಫೌಂಡೇಷನ್ ನ ಮುಖ್ಯಸ್ಥ ರವಿಗೌಡ, ವಿಜಯಕುಮಾರ್ ಸೇರಿದಂತೆ ಹಲವಾರು ಗ್ರಾಮಸ್ಥರು ಲಕ್ಷ್ಮೀ ದೇವಸ್ಥಾನದ ಹತ್ತಿರದ ನಡೆದ ಕಾರ್ಯಕ್ರಮದಲ್ಲಿ ಕೆ.ಶಿವಣ್ಣ ನವರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕೆ.ಶಿವಣ್ಣ ನವರು ಇಂಡೋ ಅಮೇರಿಕಾ ಶಾಂತಿ ಸೇವಾ ಪುರಸ್ಕೃತರಾಗಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿ. ಶಿವಣ್ಣನವರ ಸಾಧನೆ ಇಂದಿನ ಯುವಕರಿಗೆ ಸ್ಪೂರ್ತಿಯಾಗಲಿದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡುಪಾಗಿಟ್ಟಿರುವ ಕೆ.ಶಿವಣ್ಣನವರ ಧ್ಯೇಯ ಇತರರಿಗೆ ಮಾದರಿಯಾಗಲಿದೆ ಎಂದು ರವಿಗೌಡ ಹೇಳಿದರು. ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರಾದ ವಿಜಯಕುಮಾರ್, ಮಾವಿನಕೆರೆ ಮಂಜಣ್ಣ, ಭೈರಪ್ಪ, ನವೀನ್ ಕುಮಾರ್, ರಜನೀಗೌಡ, ರಾಮೇಗೌಡ, ನಾಗೇಶ್, ರಘು, ಮಂಜೇಗೌಡ, ನಂಜೇಗೌಡ, ಸಂಜು ಸೇರಿದಂತೆ ಹಲವರು ಇದ್ದರು.