ಕಾನೂನು ವಿದ್ಯಾರ್ಥಿ ದಿನಕ್ಕೆ 6 ಗಂಟೆ ಓದಬೇಕು

| Published : Jan 11 2025, 12:49 AM IST

ಕಾನೂನು ವಿದ್ಯಾರ್ಥಿ ದಿನಕ್ಕೆ 6 ಗಂಟೆ ಓದಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ವಿದ್ಯಾರ್ಥಿಗಳು ದಿನದ ನಾಲ್ಕುರಿಂದ ಅರು ಗಂಟೆ ಓದಲಿಕ್ಕೆ ತಮ್ಮ ಸಮಯ ಮೀಸಲಿಡಬೇಕು, ಕಾನೂನು ವಿದ್ಯಾಭ್ಯಾಸ ಯಾವುದಕ್ಕೂ ತೊಡಕಗಾವುದಿಲ್ಲ, ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೂ ಕಾನೂನು ವಿದ್ಯಾಭ್ಯಾಸದಿಂದ ಸಹಾಯವಾಗಲಿದೆ. ವಿದ್ಯಾಭ್ಯಾಸ ಮಾಡಿದ ಶಾಲೆ ಕಾಲೇಜುಗಳಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರಕಾನೂನು ವಿದ್ಯಾಭ್ಯಾಸವನ್ನು ವಿದ್ಯಾರ್ಥಿಗಳು ಗಮನವಿಟ್ಟು ಓದಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎ.ಮಂಜುನಾಥ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತಾಲೂಕಿನ ಅರಹಳ್ಳಿ ಸರ್ಕಾರಿ ಕಾನೂನು ಕಾಲೇಜಿನಲ್ಲಿ ವೆಂಕಟಮ್ಮ ವಿ.ಕೊಂಡಪ್ಪ ಚಾರಿಟಬಲ್ ಟ್ರಸ್ಟ್‌ನಿಂದ ನಿರ್ಮಾಣವಾದ ಸಭಾಂಗಣದ ವೇದಿಕೆ ಉದ್ಘಾಟಿಸಿ ಮಾತನಾಡಿದರು.ಓದಿದ ಶಾಲೆಗೆ ಕೊಡುಗೆ

ಇದೇ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಪ್ರಶಾಂತ್ ವಿ.ಕೆ ತಾವು ಓದಿದ ಕಾಲೇಜಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ತಂದೆತಾಯಿ ಹೆಸರಲ್ಲಿ ಸಭಾಂಗಣಕ್ಕೆ ಗುಣಮಟ್ಟದ ವೇದಿಕೆ ಕಟ್ಟಿಸಿಕೊಟ್ಟಿದ್ದಾರೆ, ಕಟ್ಟಡಕ್ಕೆ ಬಣ ಬಳಿದು ಕೊಟ್ಟಿದ್ದಾರೆ ಎಂದು ತಿಳಿಸಿದರು. ಕಾನೂನು ವಿದ್ಯಾರ್ಥಿಗಳು ದಿನದ ನಾಲ್ಕುರಿಂದ ಅರು ಗಂಟೆ ಓದಲಿಕ್ಕೆ ತಮ್ಮ ಸಮಯ ಮೀಸಲಿಡಬೇಕು, ಕಾನೂನು ವಿದ್ಯಾಭ್ಯಾಸ ಯಾವುದಕ್ಕೂ ತೊಡಕಗಾವುದಿಲ್ಲ, ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೂ ಕಾನೂನು ವಿದ್ಯಾಭ್ಯಾಸದಿಂದ ಸಹಾಯವಾಗಲಿದೆ ಎಂದು ಹೇಳಿದರು. ಕೈಲಾದ ಸಹಾಯ ಮಾಡಿ

ಡಿ.ಎಲ್‌ಎಸ್.ಎ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮುನಿ ಮಾತನಾಡಿ, ತಾವು ವಿದ್ಯಾಭ್ಯಾಸ ಮಾಡಿದ ಶಾಲೆ ಕಾಲೇಜುಗಳಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು. ಪ್ರಶಾಂತ್ ವಿ.ಕೆ ಅಲುಮಿನಿ ಆಧ್ಯಕ್ಷರಾಗಿ ಕಾಲೇಜಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ತಮ್ಮ ಕಾರ್ಯ ಮುಂದುವರೆಸಲಿ ಎಂದರು.ಈ ಸಂದರ್ಭದಲ್ಲಿ ಡಾ.ಪದ್ಮಲತಾ.ಆರ್, ಡಾ.ಚಿದಾನಂದ ಸ್ವಾಮಿ, ಡಾ.ರಂಗನಾಥಯ್ಯ, ಅಲುಮಿನಿ ಸಂಘದ ಉಪಾಧ್ಯಕ್ಷ ಜಾಕೀರ್ ಹುಸೇನ್, ಖಜಾಂಚಿ ಕೆ.ಎಂ.ಚೌಡೇಗೌಡ, ಕಾನೂನು ಕಾಲೇಜ್ ಪ್ರಾಂಶುಪಾಲ ಡಾ.ಅಂಬೇಡ್ಕರ್ ಎನ್.ಎಸ್, ಕಾಲೇಜ್ ಅದೀಕ್ಷಕ ಬಾಲಕೃಷ್ಣ, ಲಲಿತಾ ಬಾಯಿ, ಪದ್ಮ ಇದ್ದರು.