ಮಕ್ಕಳ ಶಿಕ್ಷಣಕ್ಕೆ ಕಲಿಕಾ ಹಬ್ಬ ಸಹಕಾರಿ

| Published : Feb 19 2025, 12:47 AM IST

ಸಾರಾಂಶ

ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕಲಿಕಾ ಹಬ್ಬ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ತಾಲೂಕಿನ 19 ಕ್ಲಸ್ಟರ್‌ಗಳಲ್ಲಿ ಈಗಾಗಲೇ ಕೆಲವು ಕ್ಲಸ್ಟರ್ ಗಳು ಕಾರ್ಯಕ್ರಮ ಮುಗಿದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿಭೆ ಅನಾವರಣ ಮಾಡಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಕ್ಕಳ ಕಲಿಕಾ ಹಬ್ಬ ಎಂಬ ಕಾರ್ಯಕ್ರಮ ಮೂಲಭೂತ ಭಾಷಾ ಸಾಮರ್ಥ್ಯ, ಗಣಿತ ಮತ್ತು ಪರಿಸರ ಅರಿವು ಮೂಡಿಸುವ ಯೋಜನೆಯ ಹಬ್ಬವಾಗಿದೆ. ಸರ್ಕಾರ ಇಂತಹ ಶಿಕ್ಷಣ ಹಬ್ಬಗಳನ್ನು ಅನುಷ್ಠಾನಕ್ಕೆ ತಂದಿರುವುದು ಮಕ್ಕಳ ಕಲಿಕೆಗೆ ಲಾಭದಾಯಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ತಿಳಿಸಿದರು.ತಾಲೂಕಿನ ಎಸ್ ಗೊಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಗೊಲ್ಲಹಳ್ಳಿ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಇಂತಹ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದರು.

ಕಲಿಕಾ ಹಬ್ಬದಲ್ಲಿ ಪಾಲ್ಗೊಳ್ಳಿಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪದ್ಮ ಮಾತನಾಡಿ, ತಾಲೂಕಿನ 19 ಕ್ಲಸ್ಟರ್‌ಗಳಲ್ಲಿ ಈಗಾಗಲೇ ಕೆಲವು ಕ್ಲಸ್ಟರ್ ಗಳು ಕಾರ್ಯಕ್ರಮ ಮುಗಿದಿದೆ. ಇನ್ನೂ ಕೆಲವು ಕ್ಲಸ್ಟರ್ ಇಂದು ಮತ್ತು ನಾಳೆ ಕಲಿಕಾ ಹಬ್ಬ ನಡೆಯುತ್ತಿದೆ. ಪ್ರತಿ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ನಿಮ್ಮ ಸೂಕ್ತವಾದ ಪ್ರತಿಭೆ ಅನಾವರಣ ಮಾಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕಾಂತಮ್ಮ, ಸದಸ್ಯರಾದ ಸುನಿಲ್, ರವಿ, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಮುರಳಿ, ಎಸ್ ಗೊಲ್ಲಹಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ. ಎನ್, ಬಡ್ತಿ ಮುಖ್ಯಶಿಕ್ಷಕರಾದ ರಾಮಚಂದ್ರ ರೆಡ್ಡಿ, ನಳಿನಿ.ಕೆ, ಶ್ರೀಮೂರ್ತಿ, ವಿಶಾಲವತಿ, ಲತಾ , ಸುಮ, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತಿತರರು ಇದ್ದರು.