ಸಾರಾಂಶ
ಪ್ರವಾದಿ ಮಹಮ್ಮದ ಸುಂದರ ಸಮಾಜ ನಿರ್ಮಾಣಕ್ಕೆ ನೀಡಿದ ತತ್ವ, ಸಂದೇಶಗಳು ಮಾರ್ಗದರ್ಶಿ
ರೋಣ: ಪ್ರೀತಿ, ವಿಶ್ವಾಸ, ಭಾತೃತ್ವತೆ, ಪರಸ್ಪರ ಸಾಮರಸ್ಯದ ಜೀವನ ಸಾಗಿಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಈ ದಿಶೆಯಲ್ಲಿ ನಾವೆಲ್ಲರೂ ಮನಸ್ಸನ್ನು ಶುದ್ಧೀಕರಿಸಿಕೊಳ್ಳಬೇಕು ಎಂದು ಪುರಸಭೆ ಸದಸ್ಯೆ ವಿದ್ಯಾ ದೊಡ್ಡಮನಿ ಹೇಳಿದರು.
ಅವರು ಭಾನುವಾರ ಲಕ್ಷ್ಮೀ ನಗರದಲ್ಲಿ ಶ್ರೀಲಕ್ಷ್ಮೀದೇವಿ ಯುವಕರ ಸಂಘದ ಆಶ್ರಯದಲ್ಲಿ ಹಜರತ್ ಮುಹಮ್ಮದ ಮುಸ್ತಫಾ ಜನ್ಮದಿನೋತ್ಸವ ಅಂಗವಾಗಿ ಶಾಲಾ ಮಕ್ಕಳ ಧಾರ್ಮಿಕ ಹಾಗೂ ಭಾವೈಕ್ಯತಾ ಕಾರ್ಯಕ್ರಮದಲ್ಲಿ ಮಾತನಾಡಿದರು.ನಾವೆಲ್ಲರೂ ಒಳ್ಳೆಯದನ್ನು ಮಾಡೋಣ ಮತ್ತು ಪ್ರತಿಯಾಗಿ ಒಳ್ಳೆಯದನ್ನು ಸ್ವೀಕರಿಸೋಣ ಎಂದು ಸಾರಿದ ಪ್ರವಾದಿ ಮಹಮ್ಮದ ಸಂದೇಶವನ್ನು ನಾವೆಲ್ಲರೂ ಪಾಲಸಬೇಕು. ಪ್ರವಾದಿ ಮಹಮ್ಮದ ಸುಂದರ ಸಮಾಜ ನಿರ್ಮಾಣಕ್ಕೆ ನೀಡಿದ ತತ್ವ, ಸಂದೇಶಗಳು ಮಾರ್ಗದರ್ಶಿಯಾಗಿವೆ. ಮಕ್ಕಳಲ್ಲಿ ಸಹನೆ,ಸದ್ವುಚಾರ, ಸದ್ಗುಣ ಬೆಳೆಸಬೇಕು ಎಂದರು.
ಕಾರ್ಯಕ್ರಮವನ್ನು ಹಿರಿಯ ಮುಖಂಡ ಮಾಬುಸಾಬ ಮುಲ್ಲಾ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ನಾಗೇಶ ಗಡಗಿ, ಅಬ್ದುಲಾಜೀಜ ತರಪದಾರ, ರಾಮಣ್ಣ ಘಾಟಿಗೆ, ಗೌಸಯಸಾಹೇಬ, ಕಳಕಪ್ಪ, ರಜಾಕ್, ಫಕ್ರುಸಾಬ್, ಇಸ್ಮೈಲ, ಜಾವೀದ್ ,ಯಲ್ಲಪ್ಪ, ಹುಸೇನಸಾಬ್, ರಾಜೇಸಾಬ್ , ನಂದಿಶ ಮುಂತಾದವರು ಉಪಸ್ಥಿತರಿದ್ದರು. ಗೀತಾ ಮಾಳಗಿ ನಿರೂಪಿಸಿದರು. ವೀರಣ್ಣ ಮಾಳಗಿ ಸ್ವಾಗತಿಸಿ, ವಂದಿಸಿದರು.