ತಾಯಿ-ಮಕ್ಕಳ ಆಸ್ಪತ್ರೆ ಬಹುದಿನದ ಕನಸು ಶೀಘ್ರ ನನಸು: ತಿಮ್ಮಾಪೂರ

| Published : Sep 18 2025, 01:12 AM IST

ತಾಯಿ-ಮಕ್ಕಳ ಆಸ್ಪತ್ರೆ ಬಹುದಿನದ ಕನಸು ಶೀಘ್ರ ನನಸು: ತಿಮ್ಮಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಮುಧೋಳ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಅಂದಾಜು ₹20 ಕೋಟಿ ವೆಚ್ಚದಲ್ಲಿ 50 ಹಾಸಿಗೆಯ ತಾಯಿ ಮಕ್ಕಳ ನೂತನ ಆಸ್ಪತ್ರೆಯ ಕಟ್ಟಡದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮುಧೋಳ ತಾಲೂಕಿಗೆ ತೀರಾ ಅತೀ ಅವಶ್ಯವಿದ್ದ ತಾಯಿ-ಮಕ್ಕಳ ಆಸ್ಪತ್ರೆಯ ಬಹುದಿನದ ಬೇಡಿಕೆ ಇಂದು ಈಡೇರಿಸಿದ್ದು, ಬಡವರ ಕಾಳಜಿಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸಲು ಸಿದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಅಂದಾಜು ₹20 ಕೋಟಿ ವೆಚ್ಚದಲ್ಲಿ 50 ಹಾಸಿಗೆಯ ತಾಯಿ ಮಕ್ಕಳ ನೂತನ ಆಸ್ಪತ್ರೆಯ ಕಟ್ಟಡದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಆಸ್ಪತ್ರೆಯ ಮುಖ್ಯ ಕಟ್ಟಡದಲ್ಲಿ ಎರಡು ಮಹಡಿ ಹೊಂದಿದೆ. ಆಂತರಿಕ ನೀರು ಸರಬರಾಜು ಮತ್ತು ನೈರ್ಮಲೀಕರಣ, ಆಂತರಿಕ ವಿದ್ಯುದ್ಧೀಕರಣ, ಫೈರ್ ಫೈಟಿಂಗ್, ಲಿಫ್ಟ್‌, ಸಿಸಿಟಿವಿ, ಟೆಲಿಫೋನ್, ನೆಟವರ್ಕ್, ಟಿವಿ, ಯುಪಿಎಸ್ ಸಿಸ್ಟಂ ಅಳವಡಿಕೆ, ಮೆಡಿಕಲ್ ಗ್ಯಾಸ್ ಪೈಪಲೈನ್, ಶಸ್ತ್ರ ಚಿಕಿತ್ಸಾ ಕೋಣೆ, ಬಾಹ್ಯ ವಿದ್ಯುದ್ಧೀಕರಣ, ಡಿಜಿ ಸೆಟ್, ಬಾಹ್ಯ ನೀರು ಸರಬರಾಜು, ಒಳಚರಂಡಿ, ಸಂಪ ಟ್ಯಾಪ್, ಕೊಳವೆ ಭಾವಿ, 20 ಕೆ.ಎಲ್.ಡಿ ಒಳಚರಂಡಿ, 5 ಕೆ.ಎಲ್.ಡಿ ನೀರು ಸಂಸ್ಕರಣಾ ಘಟಕ, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೆಕ ಶೌಚಾಲಯ, ಆಂತರಿಕ ರಸ್ತೆ, ಹೆರಿಗೆ ಮತ್ತು ಶಸ್ತ್ರ ಚಿಕಿತ್ಸಾ ವಿಭಾಗ ಸೇರಿದಂತೆ ಇತರೆ ಸೌಲಭ್ಯಗಳನ್ನು ಮಾಡಲಾಗುವುದೆಂದು ತಿಳಿಸಿದರು.

ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ತಾಯಿ ಮಕ್ಕಳ ಆಸ್ಪತ್ರೆಯಿಂದ ಈ ಭಾಗದ ಜನರಿಗೆ ಸಾಕಷ್ಟು ರೀತಿಯ ಅನುಕೂಲಕರವಾಗಲಿದೆ, ಕೇವಲ ಒಂದು ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದ ಅವರು ಮುಧೋಳ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ತಾವು ಶ್ರಮಿಸುವುದಾಗಿ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಸಚಿವ ತಿಮ್ಮಾಪೂರ ಅವರ ಪತ್ನಿ ಶಶಿಕಲಾ, ಸಹೋದರಿ ಕವಿತಾ, ಕಾಂಗ್ರೆಸ್ ಮುಖಂಡರಾದ ಮುದಕಣ್ಣ ಅಂಬಿಗೇರ, ದಾನೇಶ ತಡಸಲೂರ, ವೈದ್ಯರಾದ ವ್ಹಿ.ಎನ್. ನಾಯಿಕ, ಉದಯ ನಾಯಿಕ, ಅಶೋಕ ಸೂರ್ಯವಂಶಿ, ಡಿಎಚ್ಒ ಡಾ.ಮಂಜುನಾಥ, ತಾ.ಪಂ ಇಒ ಮಲ್ಲಿಕಾರ್ಜುನ ಅಂಬಿಗೇರ, ಟಿಎಚ್ಒ ಡಾ.ವೆಂಕಟೇಶ ಮಲಘಾಣ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಬಸವರಾಜ ಪಾಟೀಲ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.

ಸಚಿವ ತಿಮ್ಮಾಪೂರ ಅವರು ಹುಟ್ಟುಹಬ್ಬದ ನಿಮಿತ್ತ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ವಿತರಿಸಿ, ಆರೋಗ್ಯ ವಿಚಾರಿಸಿದರು.

ರವಿ ಹೊಸಗೌಡ್ರ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಲಕ್ಷ್ಮೀಬಾಯಿ ಬೀಳಗಿ ಸಂಗಡಿಗರು ಪ್ರಾರ್ಥಿಸಿದರು. ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು.