ಸಾರಾಂಶ
ರಾಜ್ಯದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಪರದಾಟ, ಆಕ್ರೋಶದ ನಡುವೆ ನೆರೆಯ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಯೂರಿಯಾ ರಸಗೊಬ್ಬರ ಲಾರಿಯನ್ನು ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ವಶಪಡಿಸಿಕೊಂಡಿದ್ದಾರೆ.
ಗುಂಡ್ಲುಪೇಟೆ: ರಾಜ್ಯದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಪರದಾಟ, ಆಕ್ರೋಶದ ನಡುವೆ ನೆರೆಯ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಯೂರಿಯಾ ರಸಗೊಬ್ಬರ ಲಾರಿಯನ್ನು ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ವಶಪಡಿಸಿಕೊಂಡಿದ್ದಾರೆ.
ನಂಜನಗೂಡಲ್ಲಿ ರಸಗೊಬ್ಬರ ತುಂಬಿಕೊಂಡು ಕೇರಳ ನೋಂದಣಿಯ ಕೆಎಲ್ 71ಡಿ 1699 ನಂಬರಿನ ಲಾರಿ ಮೂಲೆಹೊಳೆ ಚೆಕ್ ಪೋಸ್ಟ್ ಬಳಿ ತೆರಳುವಾಗ ಕೃಷಿ ಸಹಾಯಕ ನಿರ್ದೇಶಕ ಶಶಿಧರ್, ಕೃಷಿ ಜಾಗೃತ ದಳದ ರಮೇಶ್ ಖಚಿತ ಮಾಹಿತಿ ಮೇರೆಗೆ ಲಾರಿ ತಡೆದು ತಪಾಸಣೆ ನಡೆಸಿದಾಗ ರಸಗೊಬ್ಬರ ಸಿಕ್ಕಿದೆ. ರಸಗೊಬ್ಬರ ಸಮೇತ ಲಾರಿಯನ್ನು ವಶ ಪಡಿಸಿಕೊಂಡ ಬಳಿಕ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು, ಪೊಲೀಸರಿಗೆ ಕೃಷಿ ಸಹಾಯಕ ನಿರ್ದೇಶಕರು ದೂರು ನೀಡಿದ್ದಾರೆ.ವಶಪಡಿಸಿಕೊಂಡ ರಸಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ಬಳಿಕ ರಸಗೊಬ್ಬರವನ್ನು ರೈತರಿಗೆ ಹಂಚಲು ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ದಾಳಿಯಲ್ಲಿ ಕೃಷಿ ಅಧಿಕಾರಿ ಕಿರಣ್ ಕುಮಾರ್, ಪೊಲೀಸ್, ಕೃಷಿ ಇಲಾಖೆ ಸಿಬ್ಬಂದಿ ಇದ್ದರು.