ಸಾರಾಂಶ
ಉಜಿರೆ ಸಮೀಪದ ಗಾಂಧಿ ನಗರ ತಿರುವು ಬಳಿ ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಲಾರಿ ಹರಿದಿದೆ. ಇಬ್ಬರೂ ಲಾರಿಯಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬೆಳ್ತಂಗಡಿ: ಬಸ್‌ಗೆ ಕಾಯುತ್ತಿದ್ದ ಅಮಾಯಕರಿಬ್ಬರು ಲಾರಿ ಚಾಲಕನ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಗೆ ಸಿಲುಕಿ ಬಲಿಯಾದ ಘಟನೆ ಉಜಿರೆ ಸಮೀಪ ಗಾಂಧಿನಗರದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಉಜಿರೆ ಸಮೀಪದ ಗಾಂಧಿ ನಗರ ತಿರುವು ಬಳಿ ಬಸ್‌ಗಾಗಿ ಕಾಯುತ್ತಿದ್ದವರ ಮೇಲೆ ಲಾರಿ ಹರಿದಿದೆ. ಇಬ್ಬರೂ ಲಾರಿಯಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಜಿರೆ ಗಾಂಧೀನಗರ ನಿವಾಸಿ ಕೃಷ್ಣಪ್ಪ (52) ಹಾಗೂ ಕುಂಟಿನಿ ನಿವಾಸಿ ಮೋಹಿನಿ (56) ಮೃತಪಟ್ಟವರು.ರಸ್ತೆ ಬದಿಯಲ್ಲಿ ಇದ್ದವರ ಮೇಲೆ ಹರಿದ ಲಾರಿ ಮುನ್ನುಗ್ಗಿ, ವಿದ್ಯುತ್ ಕಂಬಕ್ಕೆ ಹಾಗೂ ಸಮೀಪದ ಕಟ್ಟಡಕ್ಕೆ ಡಿಕ್ಕಿಹೊಡೆದಿದೆ. ಹೊಡೆತದ ರಭಸಕ್ಕೆ ಐದು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ ಸಮೀಪದ ಕಟ್ಟಡಕ್ಕೂ ಹಾನಿಯಾಗಿದೆ. ಘಟನೆಯಿಂದ ಸ್ಥಳದಲ್ಲಿ 4-5 ಗಂಟೆ ಟ್ರಾಫಿಕ್ ಜಾಮ್ ಉಂಟಾಯಿತು.
ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬಸ್ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಯುವಕ ಸಾವು
ಬೆಳ್ತಂಗಡಿ: ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕ ಮಂಜೊಟ್ಟಿ ಸಮೀಪದ ಪರಾರಿ ನಿವಾಸಿ ಉಮೇಶ್ ಪೂಜಾರಿಯವರ ಮಗ ಧರಣೇಂದ್ರ ಪೂಜಾರಿ (24) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಕಡೆಯಿಂದ ತನ್ನ ಮನೆ ಮಂಜೊಟ್ಟಿಗೆ ಮಧ್ಯಾಹ್ನ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ವೇಳೆ ಬೆಳ್ತಂಗಡಿ ಕಡೆಗೆ ಅತೀ ವೇಗದಲ್ಲಿ ಬರುತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ಬಸ್ಸಿನಡಿ ಸಿಲುಕಿದ್ದು ಸ್ಥಳೀಯರು ಹರಸಾಹಸ ಪಟ್ಟು ಹೊರತೆಗೆದು ಉಜಿರೆ ಖಾಸಗಿ ಆಸ್ಪತ್ರೆಗೆ ಕೊಂಡುಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡುವ ಮಾರ್ಗದ ಮಧ್ಯೆ ಅಸುನೀಗಿದ್ದಾನೆ. ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತಿದ್ದ ಧರಣೇಂದ್ರ ಪೂಜಾರಿ ತಂದೆ ವಿಕಲಚೇತನರಾಗಿದ್ದು ಕುಟುಂಬದ ಜೀವನ ನಿರ್ವಹಣೆ ಇವರ ದುಡಿಮೆಯಲ್ಲೇ ಸಾಗುತ್ತಿತ್ತು. ಬೆಳ್ತಂಗಡಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.