ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ: ಮಧುಬಂಗಾರಪ್ಪ

| Published : Jul 19 2025, 01:00 AM IST

ಸಾರಾಂಶ

ಚನ್ನಪಟ್ಟಣ: ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ, ಕೊರತೆ ಇದೆ. ಆದರೆ ಅದು ನಮ್ಮಿಂದ ಆಗಿದ್ದಲ್ಲ, ಅದು ಹಿಂದಿನ ಸರ್ಕಾರದ ಬಳುವಳಿ. ನಮ್ಮ ಸರ್ಕಾರ ಬಂದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.

ಚನ್ನಪಟ್ಟಣ: ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ, ಕೊರತೆ ಇದೆ. ಆದರೆ ಅದು ನಮ್ಮಿಂದ ಆಗಿದ್ದಲ್ಲ, ಅದು ಹಿಂದಿನ ಸರ್ಕಾರದ ಬಳುವಳಿ. ನಮ್ಮ ಸರ್ಕಾರ ಬಂದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.

ತಾಲೂಕಿನ ಹೊಂಗನೂರು ಗ್ರಾಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಚ್.ಎಂ.ವೆಂಕಟಪ್ಪ ೧೪ ಕೋಟಿ ವೆಚ್ಚದಲ್ಲಿ ಕಣ್ವ ಫೌಂಡೇಷನ್‌ನಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಿಎಸ್‌ಆರ್ ಫಂಡ್‌ನಲ್ಲಿ ದೊಡ್ಡದೊಡ್ಡ ಶಾಲೆಗಳನ್ನ ಮಾಡಬೇಕು ಅನ್ನೋದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸು. ಈ ವರ್ಷ ೫೦೦ ಕೆಪಿಎಸ್ ಶಾಲೆಗಳ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ೨೫೦೦ ಕೋಟಿ ಅನುದಾನವನ್ನ ಮೀಸಲಿರಿಸಿದ್ದೇವೆ ಎಂದು ತಿಳಿಸಿದರು.

ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಶಾಲೆ:

ನಮ್ಮ ಇಲಾಖೆ ಸಮಸ್ಯೆ ಬಾಯಿಬಿಟ್ಟು ಹೇಳಲಿಲ್ಲ ಅಂದರೆ ಅದು ಬಗೆಹರಿಯಲ್ಲ. ಅದಕ್ಕಾಗಿ ಪರೀಕ್ಷೆಯ ವೇಳೆ ವೆಬ್ ಕಾಸ್ಟಿಂಗ್ ತಂದು ಕಾಪಿ ಆಗೋದನ್ನ ತಡೆದಿದ್ದೇವೆ. ಇದರಿಂದ ಸಾಕಷ್ಟು ಮಕ್ಕಳು ಫೇಲ್ ಆದರು. ಅದಕ್ಕಾಗಿ ಮೂರು ಪರೀಕ್ಷಾ ನೀತಿಗಳನ್ನ ತಂದಿದ್ದೇವೆ. ಫೇಲ್ ಆದವರಿಗೆ ಫೀಸ್ ಇಲ್ಲದೇ ಪರೀಕ್ಷೆ ನೀಡುತ್ತಿದ್ದೇವೆ. ನಮ್ಮ ಇಲಾಖೆಯಿಂದ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಶಾಲೆ ಪ್ರಾರಂಭ ಮಾಡಲಾಗುವುದು. ದೇಶದಲ್ಲೇ ಇಂತಹದೊಂದು ಪ್ರಯೋಗ ಇದೇ ಮೊದಲು. .ವೆಂಕಟಪ್ಪರವರು ಎರಡು ಶಾಲೆಗಳನ್ನ ನಮ್ಮ ಇಲಾಖೆಗೆ ಕಟ್ಟಿಸಿಕೊಟ್ಟಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.

ಬಾಕ್ಸ್..................

ಶಿಕ್ಷಣ ಇಲಾಖೆ ಸಿಗಲು ಡಿಕೆಶಿ ಕಾರಣ: ಮಧು

ಈ ಇಲಾಖೆಗೆ ನಾನು ಬರೋದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಹಾಗೂ ಸುರ್ಜೇವಾಲ ಮೂವರು ಚರ್ಚೆ ಮಾಡಿ ನನಗೆ ಬೇರೆ ಇಲಾಖೆ ಕೊಡಲು ನಿರ್ಧಾರ ಮಾಡಿದ್ದರು. ಆದರೆ ಬಳಿಕ ಡಿಕೆಶಿ ಅವರು ನನ್ನ ತಂದೆ ಮೇಲಿನ ಗೌರವಕ್ಕೆ ಒಳ್ಳೆಯ ಖಾತೆ ನೀಡಬೇಕು ಅಂತ ಶಿಕ್ಷಣ ಇಲಾಖೆ ಕೊಟ್ಟರು. ನನ್ನ ಮೇಲೆ ವಿಶ್ವಾಸ ಇಟ್ಟು ಈ ಇಲಾಖೆ ಕೊಟ್ಟಿದ್ದಕ್ಕೆ ಡಿಸಿಎಂ ಸಾಹೇಬ್ರಿಗೆ ಧನ್ಯವಾದಗಳು ಎಂದರು. ಕೋಟ್ .................

ಶಾಲೆಗಳಿಗೆ ಹುಸಿ ಬಾಂಬ್ ಕರೆ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಗೃಹ ಇಲಾಖೆ ಅದನ್ನ ನೋಡಿಕೊಳ್ಳುತ್ತೇವೆ. ಕರೆ ಬಂದಾಗ ಆತಂಕ ಆಗುತ್ತೆ. ಅದನ್ನ ಕಮ್ಮಿಮಾಡುವ ಕೆಲಸ ಗೃಹ ಇಲಾಖೆ ಮಾಡುತ್ತೆ.

-ಮಧುಬಂಗಾರಪ್ಪ, ಶಿಕ್ಷಣ ಸಚಿವ