ಸಾರಾಂಶ
ಹೈನುಗಾರಿಕೆಯನ್ನೆ ಅವಲಂಭಿಸಿರುವ ರೈತರಿಗೆ ಬಹಳಷ್ಟು ಸೌಲಭ್ಯಗಳು ಪಶು ಇಲಾಖೆಯಲ್ಲಿ ಲಭ್ಯವಿದ್ದು ಅವುಗಳ ಸದುಪಯೋಗವಾಗಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಕೋರ್ಟ್ ರಸ್ತೆಯ ಪಶುಆಸ್ಪತ್ರೆ ವಿಸ್ತರಣಾ ಘಟಕ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಹೈನುಗಾರಿಕೆಯನ್ನೆ ಅವಲಂಭಿಸಿರುವ ರೈತರಿಗೆ ಬಹಳಷ್ಟು ಸೌಲಭ್ಯಗಳು ಪಶು ಇಲಾಖೆಯಲ್ಲಿ ಲಭ್ಯವಿದ್ದು ಅವುಗಳ ಸದುಪಯೋಗವಾಗಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಕೋರ್ಟ್ ರಸ್ತೆಯಲ್ಲಿ ಶುಕ್ರವಾರ ಪಶು ಆಸ್ಪತ್ರೆ ವಿಸ್ತರಣಾ ಘಟಕ ಉದ್ಘಾಟಿಸಿ ಮಾತನಾಡಿದರು. ಬಹು ದಿನ ಗಳಿಂದ ಪಟ್ಟಣದಲ್ಲಿ ಮತ್ತೊಂದು ಪಶು ಆಸ್ಪತ್ರೆ ಬೇಕೆಂಬ ಬೇಡಿಕೆಯಿತ್ತು. ಇಲ್ಲಿ ಮೊದಲು ಆಸ್ಪತ್ರೆ ಇತ್ತಾದರೂ ನಂತರ ಅದನ್ನು ಕಾರ್ಮಿಕ ಇಲಾಖೆಗೆ ನೀಡಲಾಗಿತ್ತು. ಇದೀಗ ಪಟ್ಟಣದ ದೊಡ್ಡಪೇಟೆ, ಹಳೇ ಪೇಟೆ ರೈತರ ಬೇಡಿಕೆ ಹಿನ್ನೆಲೆಯಲ್ಲಿ ಅದನ್ನು ಮತ್ತೆ ಪಶು ಇಲಾಖೆಗೆ ವಾಪಸ್ಸು ಪಡೆದು ಇಲ್ಲಿ ವಿಸ್ತರಣಾ ಆಸ್ಪತ್ರೆ ಆರಂಭಿಸಲಾಗಿದೆ. ಇದರಿಂದ ಜಾನುವಾರು ಗಳಿಗೆ ಚಿಕಿತ್ಸೆ ದೊರೆಯಲು ಅನುವಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಢಿದರು. ಇದೇ ಸಮಯದಲ್ಲಿ ಪುರಸಭೆ ಹಿರಿಯ ಸದಸ್ಯ ಭಂಡಾರಿ ಶ್ರೀನಿವಾಸ್, ತೋಟಧಮನೆ ಮೋಹನ್, ಪಶು ಇಲಾಖೆ ತಾಲೂಕು ಅದಿಕಾರಿ ಡಾ.ಉಮೇಶ್, ಹೊಗರೇಹಳ್ಳಿ ಶಶಿ, ಶ್ರೀಕಂಠ ಒಡೆಯರ್, ಶಿವೇಗೌಡ, ಮಲ್ಲೇಶ್ವರ ವಸಂತ್ ಕುಮಾರ್. ಕೃಷಿ ಸಹಾಯಕ ನಿರ್ದೇಶಕ ಅಶೋಕ್ ಮತ್ತಿತರರು ಇದ್ದರು. 17ಕೆಕೆಢಿಯು3.ಶಾಸಕ ಕೆ.ಎಸ್.ಆನಂದ್ ಅವರು ಪಟ್ಟಣದ ಕೋರ್ಟ್ ರಸ್ತೆಯಲ್ಲಿ ಪಶು ಆಸ್ಪತ್ರೆ ವಿಸ್ತರಣಾ ಘಟಕ ಉದ್ಘಾಟಿಸಿದರು.
.