ಸಾರಾಂಶ
ಶಿಕ್ಷಕರಿಗೆ ಶಿಸ್ತುಬದ್ದತೆ, ವೃತ್ತಿ ಗೌರವದ ಜತೆ ಏಕಾಗ್ರತೆ ಇರಬೇಕು. ಕಲಿತ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು.
ಅಂಕೋಲಾ: ಶಿಕ್ಷಕರ ತರಬೇತಿ ಕೇವಲ ಅಂಕಗಳಿಗೆ ಸೀಮಿತವಾಗಿರದೇ ವಿದ್ಯಾರ್ಥಿಗಳ ಸರ್ವತೋಮುಖ ಬದಲಾವಣೆಗೆ ಬಳಸಬೇಕು. ವೃತ್ತಿ, ಶಿಕ್ಷಣ, ಜೀವನ ಎಲ್ಲದರಲ್ಲಿಯೂ ಧನಾತ್ಮಕ ಮನೋಭಾವ, ಬೆಳೆಸಿಕೊಂಡು ಕ್ರೀಡೆ, ಸಾಂಸ್ಕೃತಿಕ ಮತ್ತು ಜೀವನಾನುಭವದಲ್ಲಿ ಶಿಕ್ಷಣ ಪಡೆಯಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾದ ಉಪನಿರ್ದೇಶಕ ಎನ್.ಜಿ. ನಾಯಕ ತಿಳಿಸಿದರು.
ಸ್ಥಳೀಯ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಎನ್ಎಸ್ಎಸ್ ಘಟಕದ ಉದ್ಘಾಟನೆ, ರ್‍ಯಾಂಕ್ ವಿಜೇತರಿಗೆ ಸನ್ಮಾನ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೆಎಲ್ಇ ಸ್ಥಳೀಯ ಸಂಸ್ಥೆಗಳ ಸಂಯೋಜಕ ಆರ್. ನಟರಾಜ ಮಾತನಾಡಿ, ಶಿಕ್ಷಕರಿಗೆ ಶಿಸ್ತುಬದ್ದತೆ, ವೃತ್ತಿ ಗೌರವದ ಜತೆ ಏಕಾಗ್ರತೆ ಇರಬೇಕು. ಕಲಿತ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಡಾ. ಡಿ.ಎಲ್. ಭಟ್ಕಳ ಅವರು, ಶಿಕ್ಷಕರು ಸಂವಹನ ಕೌಶಲ್ಯ, ಜ್ಞಾನ, ಆತ್ಮವಿಶ್ವಾಸ, ಕುತೂಹಲ ತಣಿಸುವ, ಸಮಸ್ಯೆ ಪರಿಹಾರದ ಗುಣ ಬೆಳೆಸಿಕೊಳ್ಳಬೇಕು ಎಂದರು.ಕವಿತಾ ಸಂಗಡಿಗರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ ಸ್ವಾಗತಿಸಿದರು. ಉಪನ್ಯಾಸಕಿ ಪೂರ್ವಿ ಹಳ್ಗೇಕರ ಪರಿಚಯಿಸಿದರು. ಕಾರ್ಯಾದ್ಯಕ್ಷ ಅಮ್ರಿನಾಜ ಶೇಖ್ ಕ್ರಿಯಾ ವರದಿ ವಾಚಿಸಿದರು.
ಕಾಲೇಜಿನ ರ್‍ಯಾಂಕ್ ವಿಜೇತರಾದ ಶೈಝೀನ್ ಬಾನು ಮೀರಮ್ ಸಾಬ್, ದೀಪಾಲಿ ನಾಯಕ, ಸುಲಕ್ಷಾ ನಾಯ್ಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಡಾ. ಮೀನಲ್ ನಾರ್ವೇಕರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಪನಿರ್ದೇಶಕ ಎನ್.ಜಿ. ನಾಯಕ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಮಂಜುನಾಥ ಇಟಗಿ ರ್‍ಯಾಂಕ್ ವಿಜೇತರನ್ನು ಪರಿಚಯಿಸಿದರು. ಚೈತ್ರಾ ಆಚಾರಿ, ತೃಪ್ತಿ ನಾಯ್ಕ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವೈಡೂರ್ಯ ನಾಯಕ ವಂದಿಸಿದರು.