ಸಮ್ಮೇಳನಕ್ಕೆ ತಾಳಿಕೋಟೆಯಲ್ಲಿ ಭರದ ಸಿದ್ಧತೆ

| Published : Sep 30 2024, 01:18 AM IST

ಸಾರಾಂಶ

ತಾಳಿಕೋಟೆ: ಅ.೧ ರಂದು ಜರುಗಲಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಳಿಕೋಟೆ ಸನ್ನದ್ದವಾಗಿದೆ. ಪಟ್ಟಣದಲ್ಲೆಲ್ಲ ಸ್ವಾಗತ ಕೋರುವ ಬ್ಯಾನರ್‌ಗಳು, ಕಟೌಟ್‌ಗಳು ರಾರಾಜಿಸುತ್ತಿದ್ದು, ಸಂಗಮೇಶ್ವರ ಸಭಾಭವನವು ಕೂಡ ಸಜ್ಜಾಗುತ್ತಿದೆ. ಭವನದ ಮುಂಭಾಗದಲ್ಲಿ ಬೃಹತ್ ಆಕಾರದ ಮೈದಾನದ ಎಡ-ಬಲದಲ್ಲಿ ವಿವಿಧ ನಮೂನೆಯ ಪುಸ್ತಕ ಸೇರಿದಂತೆ ವಸ್ತುಗಳ ಮಾರಾಟ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ.

ತಾಳಿಕೋಟೆ: ಅ.೧ ರಂದು ಜರುಗಲಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಳಿಕೋಟೆ ಸನ್ನದ್ದವಾಗಿದೆ. ಪಟ್ಟಣದಲ್ಲೆಲ್ಲ ಸ್ವಾಗತ ಕೋರುವ ಬ್ಯಾನರ್‌ಗಳು, ಕಟೌಟ್‌ಗಳು ರಾರಾಜಿಸುತ್ತಿದ್ದು, ಸಂಗಮೇಶ್ವರ ಸಭಾಭವನವು ಕೂಡ ಸಜ್ಜಾಗುತ್ತಿದೆ. ಭವನದ ಮುಂಭಾಗದಲ್ಲಿ ಬೃಹತ್ ಆಕಾರದ ಮೈದಾನದ ಎಡ-ಬಲದಲ್ಲಿ ವಿವಿಧ ನಮೂನೆಯ ಪುಸ್ತಕ ಸೇರಿದಂತೆ ವಸ್ತುಗಳ ಮಾರಾಟ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಚಿತ್ರಕಲಾ ಮಳಿಗೆ ಹಾಗೂ ರೈತರಿಗೆ ಮಾಹಿತಿ ನೀಡುವಂತಹ ಕೃಷಿಗೆ ಸಂಭಂದಿತ ಮಳಿಗೆಗಳು ಸಹ ನಿರ್ಮಾಣಗೊಳ್ಳುತ್ತಿವೆ. ಅಲ್ಲದೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಉದ್ದೇಶಿಸಿದ್ದು, ಮಳಿಗೆಗಳನ್ನು ಸ್ಥಳಕ್ಕೆ ಭೇಟಿ ನೀಡಿ ವಿಜಯಪುರ ಮತ್ತು ಬಾಗಲಕೋಟೆಯ ನಿಗಮದ ಅಧಿಕಾರಿ ವಿ.ವೊ.ಕಾಮತ ಪರಿಶೀಲಿಸಿದರು.

ಶಾಲಾ ಕಾಲೇಜುಗಳಿಗೆ ರಜೆ: ತಾಳಿಕೋಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಅಂದು ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವದರೊಂದಿಗೆ ಸಮ್ಮೇಳನದ ಯಶಸ್ವಿಗೆ ಸಹಕರಿಸಲು ಶಿಕ್ಷಣ ಇಲಾಖೆ ಈಗಾಗಲೇ ನಿರ್ದೇಶನ ನೀಡಿದೆ.ತಾಳಿಕೋಟೆ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿಯೂ ಜಿಲ್ಲಾ ಮಟ್ಟದ ಸಮ್ಮೇಳನದ ರೀತಿಯಲ್ಲಿ ಸಿದ್ದತೆಗಳು ನಡೆದಿರುವದು ಸಂತಸ ತಂದಿದೆ ತಾಲೂಕಿನ ಜನ ಸಮ್ಮೇಳನದ ಯಶಸ್ಸಿಗೆ ಮುಂದೆ ಬಂದು ಉತ್ಸಾಹದಿಂದ ತೊಡಗಿಕೊಂಡಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸೀಂಫಿರಾ ವಾಲಿಕಾರ ಹೇಳಿದರು.________