ಮನುಷ್ಯನಿಗೆ ಹಣ, ಐಶ್ವರ್ಯ, ಅಧಿಕಾರ ಬಂದರೆ ತಲೆ ನಿಲ್ಲುವುದಿಲ್ಲ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಮನುಷ್ಯನಿಗೆ ಹಣ, ಐಶ್ವರ್ಯ, ಅಧಿಕಾರ ಬಂದರೆ ತಲೆ ನಿಲ್ಲುವುದಿಲ್ಲ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿದರು.ತಾಲೂಕಿನ ನಂದಿಹಳ್ಳಿ, ತಿಮ್ಮಣ್ಣನ ಪಾಳ್ಯ, ಎಣ್ಣೆಕಟ್ಟೆ ಗೇಟ್, ಚೇಳೂರುಹಟ್ಟಿ, ಸೋಮಲಾಪುರ ಗ್ರಾಮದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ಹಾಗೂ ಹೇಮಾವತಿ ನೀರಾವರಿ ಇಲಾಖೆ ವತಿಯಿಂದ ಸುಮಾರು 3. 73 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಳ್ಳಾರಿಯ ಗಣಿಧಣಿ ಎಂದೇ ಹೆಸರುಮಾಡಿ, ಅವರು ಮಾಧ್ಯಮ ಪ್ರಚಾರದ ಗೀಳಿನಲ್ಲಿ ಮನ ಬಂದಂತೆ ವರ್ತಿಸುವುದು ಸರಿಯಲ್ಲ. ರಸ್ತೆಯಲ್ಲಿ ಬ್ಯಾನರ್ ಹಾಕುವುದಕ್ಕೆ ಇವರ ಅಪ್ಪಣೆ ಏಕೆ ಬೇಕು. ದುಡ್ಡಿನ ಅಹಂನಲ್ಲಿ ಏನು ಬೇಕಾದರೂ ಮಾಡುತ್ತಿದ್ದಾರೆ. ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ವಹಿಸಲಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕರಾದ ನಾವುಗಳು ಯಾವುದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯಾಗದಂತೆ ನಾವು ಪಕ್ಷದ ಪರ ಕಾರ್ಯನಿರ್ವಹಿಸಬೇಕು. ಸಣ್ಣ ನೀರಾವರಿ ಅಭಿವೃದ್ಧಿ ನಿಗಮದ ವತಿಯಿಂದ ಈಗಾಗಲೇ 150ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರಿಸಲಾಗಿದೆ. ಇನ್ನೂ ಬಾಕಿ ಇರುವ ಕೊಳವೆ ಬಾವಿಗಳನ್ನು ತಕ್ಷಣದಲ್ಲೆ ಕೊರೆಸಲಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿದ್ದರಾಜು, ಜಯಮ್ಮ, ಸದಸ್ಯರಾದ ಲಿಂಗರಾಜು, ಯತೀಶ್ ,ರಾಜಣ್ಣ, ಮುಖಂಡರಾದ ಕುಮಾರ್, ವತ್ಸಲ, ಬಸವರಾಜು, ತಿಮ್ಮೇಗೌಡ, ಕೆಂಪರಾಜು, ಪಿಡಿಒ ಯುವರಾಜ್, ಪುಟ್ಟರಾಜ, ಗುತ್ತಿಗೆದಾರರು, ರಾಜಕೀಯ ಮುಖಂಡರು,ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಮತ್ತಿತರರು ಇದ್ದರು.