ಸಾವಯವ ಕೃಷಿ: ನಾಳೆ ಬೃಹತ್‌ ಜನಜಾಗೃತಿ ಸಮಾವೇಶ

| Published : May 22 2025, 01:29 AM IST

ಸಾರಾಂಶ

ಪಟ್ಟಣದ ಶ್ರೀ ಪೇಟೆ ಬಸವೇಶ್ವರ ದೇವಾಲಯ ಆವರಣದಲ್ಲಿ ಲಿಂಗೈಕ್ಯ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಸ್ಮರಣಾರ್ಥ ಮೇ 23ರಂದು ರೈತರಿಗಾಗಿ ಸಾವಯವ ಕೃಷಿಯಿಂದಲೇ ಸದೃಢ ಭಾರತ ನಿರ್ಮಾಣ ಧ್ಯೇಯವಾಕ್ಯದೊಂದಿಗೆ ಬೃಹತ್‌ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಪೇ. ಬ.ದೇ. ಟ್ರಸ್ಟ್‌ ಅಧ್ಯಕ್ಷ ಯಲಬುರ್ಗಿ ಸಂತೋಷಕುಮಾರ್‌ ತಿಳಿಸಿದ್ದಾರೆ.

ನ್ಯಾಮತಿ: ಪಟ್ಟಣದ ಶ್ರೀ ಪೇಟೆ ಬಸವೇಶ್ವರ ದೇವಾಲಯ ಆವರಣದಲ್ಲಿ ಲಿಂಗೈಕ್ಯ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಸ್ಮರಣಾರ್ಥ ಮೇ 23ರಂದು ರೈತರಿಗಾಗಿ ಸಾವಯವ ಕೃಷಿಯಿಂದಲೇ ಸದೃಢ ಭಾರತ ನಿರ್ಮಾಣ ಧ್ಯೇಯವಾಕ್ಯದೊಂದಿಗೆ ಬೃಹತ್‌ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಪೇ. ಬ.ದೇ. ಟ್ರಸ್ಟ್‌ ಅಧ್ಯಕ್ಷ ಯಲಬುರ್ಗಿ ಸಂತೋಷಕುಮಾರ್‌ ತಿಳಿಸಿದ್ದಾರೆ.

ಶ್ರೀ ಪೇಟೆ ಬಸವೇಶ್ವರ ಸಮುದಾಯ ಭವನದ ಎರಡನೇ ಹಂತದ ಕಟ್ಟಡ ಕಾರ್ಯಕ್ಕೆ ಜೀವಾಮೃತ, ಸಾವಯವ ಸಂವಾದ, ಕಾನೂನು ಸುವ್ಯವಸ್ಥಿತ ಪರಿಪಾಲನಾ ಜಾಥಾ ಹಾಗೂ ಪ್ರಶಸ್ತಿ ಪ್ರದಾನ ಸಾಂಸ್ಕೃತಿಕ ಸಮಾರೋಪ ಸಮಾರಂಭ ನಡೆಯಲಿದೆ. ಬೆಳಗ್ಗೆ 6ರಿಂದ 9 ಗಂಟೆವರೆಗೆ ಮಹಿಳಾ ಘಟಕ ನೇತೃತ್ವದಲ್ಲಿ ದಿ।। ಇಂದ್ರಮ್ಮ ಕುಂಬಾರ ಸ್ಮರಣಾರ್ಥ ರಂಗೋಲಿ ಸ್ಪರ್ಧೆ, ಬೆಳಗ್ಗೆ 10 ಗಂಟೆಗೆ ಶ್ರೀ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಯ್ಯಪ್ಪಸ್ವಾಮಿ ದೇಗುಲದಿಂದ ಶ್ರೀ ಪೇಟೆ ಬಸವೇಶ್ವರ ದೇಗುಲದವರೆಗೆ ರೈತಪರ ಸಂಘಟನೆ. ಸಾರ್ವಜನಕರು, ರೈತರು, ರೈತ ಮಿತ್ರರೊಂದಿಗೆ ಸಾವಯವ ಕೃಷಿಯಿಂದಲೇ ಸದೃಢ ಭಾರತ ನಿರ್ಮಾಣ ಜನಜಾಗೃತಿ ಜಾಥಾ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 7.30 ಗಂಟೆಗೆ ನಡೆಯಲಿದೆ. ನ್ಯಾಮತಿ ಮತ್ತು ಸುತ್ತಮುತ್ತಲಿನ ಆಯ್ದ ಪ್ರತಿಭೆಗಳಿಗೆ ತಮ್ಮ ಕಲೆ ಪ್ರದರ್ಶಿಸುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಪ್ರತಿಭೆಗಳು ತಮ್ಮ ಕಲೆಯ ಬಗ್ಗೆ ಡೆಮೋ, ವಿಡಿಯೋವನ್ನು ಈ ಕೆಳಗಿನ ವಿಳಾಸಕ್ಕೆ ವಾಟ್ಸಾಫ್‌ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.63624- 61913, 77950- 73148, 94486- 39737 ಹಾಗೂ 95383-86443 ಇಲ್ಲಿಗೆ ಸಂಪರ್ಕಿಸಬಹುದು.