ತಾಯಿ ಮತ್ತು ಮಕ್ಕಳ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಹಮ್ಮಿಕೊಳ್ಳಬೇಕಾಗದ ಅಗತ್ಯವಿದೆ. ಎಲ್ಲ ತಾಯಂದಿರು ವಿವಿಧ ರೀತಿಯ ಊಟವನ್ನು ಶಾಲೆಯ ಆವರಣದಲ್ಲಿ ಜಾತಿ ಮತ ಎಂಬ ಭೇದಭಾವವಿಲ್ಲದೆ ಎಲ್ಲಾ ಮಕ್ಕಳಿಗೆ ಕೈತುತ್ತು ಉಣಿಸುವ ಮೂಲಕ ಜಾತ್ಯತೀತತೆ ಮೆರೆದಿದ್ದಾರೆ. ಇದೇ ಮಾತೃ ಭೋಜನದ ಪ್ರಮುಖ ಆಶಯ.
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಮಕ್ಕಳಿಗೆ ಮಾತೃ ಪ್ರೇಮದ ಸವಿತುತ್ತು ಉಣಿಸುವುದರಿಂದ ತಾಯಿ ಮತ್ತು ಮಕ್ಕಳ ಬಾಂಧವ್ಯ ಮತ್ತುಷ್ಟು ಗಟ್ಟಿಗೊಳಿಸುತ್ತಲ್ಲದೆ. ಐಕ್ಯತೆ ಭಾವನೆ, ಸಂಸ್ಕಾರ, ನಮ್ಮ ಸಂಸ್ಕೃತಿಯನ್ನು ಬಾಲ್ಯದಿಂದಲ್ಲೇ ಮೂಡಿಸುತ್ತದೆ ಎಂದು ಅದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಂದನಾಥ ಸ್ವಾಮೀಜಿ ತಿಳಿಸಿದರು.ಪಟ್ಟಣದ ಬಿಜಿಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಮಾತೃ ಭೋಜನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕೈತುತ್ತು ತಿನ್ನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಯಿ ಮತ್ತು ಮಕ್ಕಳ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಹಮ್ಮಿಕೊಳ್ಳಬೇಕಾಗದ ಅಗತ್ಯವಿದೆ ಎಂದರು.
ಜಾತ್ಯತೀತತೆ ಮೆರೆದ ಮಾತೃಭೋಜನಎಲ್ಲ ತಾಯಂದಿರು ವಿವಿಧ ರೀತಿಯ ಊಟವನ್ನು ಶಾಲೆಯ ಆವರಣದಲ್ಲಿ ಜಾತಿ ಮತ ಎಂಬ ಭೇದಭಾವವಿಲ್ಲದೆ ಎಲ್ಲಾ ಮಕ್ಕಳಿಗೆ ಕೈತುತ್ತು ಉಣಿಸುವ ಮೂಲಕ ಜಾತ್ಯತೀತತೆಯನ್ನು ಮೆರೆದಿದ್ದಾರೆ ಇದೇ ಮಾತೃ ಭೋಜನದ ಪ್ರಮುಖ ಆಶಯವಾಗಿದೆ ಎಂದರು.
ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಾತೃ ಭೋಜನ ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಮಕ್ಕಳಿಗಾಗಿ ಫಲಾವ್, ಕೇಸರಿ ಬಾತ್ ಸೇರಿದಂತೆ ವಿವಿಧ ರೀತಿಯ ಅಡುಗೆ ಸಿದ್ದಪಡಿಸಿಕೊಂಡು ಬಂದಿದ್ದ ಊಟವನ್ನು ತಮ್ಮ ಮಕ್ಕಳಿಗೆ ಮಾತ್ರವಲ್ಲದೆ ಶಾಲೆಯ ಎಲ್ಲಾ ಮಕ್ಕಳಿಗೆ ಊಟವನ್ನು ಸವಿದರು. ಮಕ್ಕಳು ತಾಯಂದಿರು ಕೈತುತ್ತು ಸವಿದು ಸಂಭ್ರಮಿಸಿದರು. ಸ್ವಾಮೀಜಿ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಸಹ ಪಂಕ್ತಿಯಲ್ಲಿ ಊಟ ಸವಿದರು.ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ನಾಟಕ, ನೃತ್ಯ ಇತ್ಯಾಧಿ ಸಾಂಕೃತಿಕ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ನಡಸಿಕೊಟ್ಟರು. ಈ ಸಂದರ್ಭದಲ್ಲಿ ಅದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖೆಯ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಶಿವರಾಮರೆಡ್ಡಿ, ಬಿಇಒ ವೆಂಕಟೇಶಪ್ಪ, ಟಿಹೆಚ್‍ಓ ಡಾ.ಸತ್ಯನಾರಾಯಣರೆಡ್ಡಿ, ಪುರಸಭೆ ಸದಸ್ಯ ನರಸಿಂಹಮೂರ್ತಿ ಹಾಗೂ ಪೋಷಕರು ಇದ್ದರು.