ವರದಿ ಓದುವುದು, ಕೇಳುವುದಕ್ಕೆ ಸೀಮಿತವಾದ ತಾಪಂ ಸಭೆ

| Published : Oct 31 2025, 02:45 AM IST

ಸಾರಾಂಶ

ಸಭೆಯಲ್ಲಿ ಬರೆದ ವರದಿ ಓದುವುದು, ಕೇಳುವುದು, ಸಿದ್ಧಪಡಿಸಿದ ವರದಿಯನ್ನು ಅಧಿಕಾರಿಗಳು ಸಭೆಗೆ ಒಪ್ಪಿಸುವ ಕೆಲಸವಷ್ಟೇ ನಡೆದ ತಾಲೂಕು ಪಂಚಾಯಿತಿ ಸಭೆಯಲ್ಲಿ ನಡೆಯಿತು, ತಾಲೂಕಿನಲ್ಲಿ ವಿವಿಧ ಇಲಾಖಾವಾರು ಅಭಿವೃದ್ಧಿಗಳ ಪ್ರಗತಿ ಪರಿಶೀಲನೆ ಕುರಿತು ನಡೆಯಬೇಕಾದ ಸಭೆ ಶಿಗ್ಗಾಂವಿ ತಾಲೂಕಿನ ಸಮಗ್ರ ಅಭಿವೃದ್ಧಿಯ ಪರ ಯಾವುದು ಕಾಣಸಿಗದಂತೆ ಮಾಯವಾಯಿತು. ಕೇವಲ ಸ್ಥಗಿತಗೊಂಡ ಅಭಿವೃದ್ಧಿಗಳನ್ನು ಪೂರ್ಣಗೊಳಿಸಿ ಎಂಬ ಪ್ರತ್ಯುತ್ತರಗಳ ಸಲಹೆ ಅಧಿಕಾರಿಗಳಿಂದ ಕೇಳಿ ಬಂದಿತು.

ಶಿಗ್ಗಾಂವಿ: ಸಭೆಯಲ್ಲಿ ಬರೆದ ವರದಿ ಓದುವುದು, ಕೇಳುವುದು, ಸಿದ್ಧಪಡಿಸಿದ ವರದಿಯನ್ನು ಅಧಿಕಾರಿಗಳು ಸಭೆಗೆ ಒಪ್ಪಿಸುವ ಕೆಲಸವಷ್ಟೇ ನಡೆದ ತಾಲೂಕು ಪಂಚಾಯಿತಿ ಸಭೆಯಲ್ಲಿ ನಡೆಯಿತು, ತಾಲೂಕಿನಲ್ಲಿ ವಿವಿಧ ಇಲಾಖಾವಾರು ಅಭಿವೃದ್ಧಿಗಳ ಪ್ರಗತಿ ಪರಿಶೀಲನೆ ಕುರಿತು ನಡೆಯಬೇಕಾದ ಸಭೆ ಶಿಗ್ಗಾಂವಿ ತಾಲೂಕಿನ ಸಮಗ್ರ ಅಭಿವೃದ್ಧಿಯ ಪರ ಯಾವುದು ಕಾಣಸಿಗದಂತೆ ಮಾಯವಾಯಿತು. ಕೇವಲ ಸ್ಥಗಿತಗೊಂಡ ಅಭಿವೃದ್ಧಿಗಳನ್ನು ಪೂರ್ಣಗೊಳಿಸಿ ಎಂಬ ಪ್ರತ್ಯುತ್ತರಗಳ ಸಲಹೆ ಅಧಿಕಾರಿಗಳಿಂದ ಕೇಳಿ ಬಂದಿತು.ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖಾವಾರು ಅಧಿಕಾರಿಗಳು ಬೆರಳಣಿಕೆಯಷ್ಟು ಹಾಜರಿದ್ದರು. ಕೆಲವು ಇಲಾಖೆಗಳ ಅಧಿಕಾರಿಗಳು ತಮ್ಮ ಸಹಾಯಕ ಅಧಿಕಾರಿಗಳನ್ನು ಸಭೆಗೆ ಕಳುಹಿಸಿದ್ದರು.ಸಭೆಯಲ್ಲಿ ಸೂಚಿಸಿದ ವಿಷಯಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ. ಅಭಿವೃದ್ಧಿ ಪಡಿಸುತ್ತೇವೆ. ಕೆಲವು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂಬ ಉತ್ತರ ನೀಡುತ್ತಿದ್ದರು. ಇನ್ನು ಕೆಲವು ವಿಷಯಗಳ ಬಗ್ಗೆ ನಮಗೆ ಗೊತ್ತಿಲ್ಲ ನಮ್ಮ ಅಧಿಕಾರಿಗಳು ತಿಳಿಸುತ್ತಾರೆ. ಕೇಳಿ ಹೇಳುತ್ತೇವೆ ಎಂಬ ಮನವಿ ಮಾಡುತ್ತಿರುವದು ಸಾಮಾನ್ಯವಾಗಿತ್ತು.ಸಭೆಗೆ ಹಾಜರಿದ್ದ ಕೆಲವು ಇಲಾಖಾವಾರು ಅಧಿಕಾರಿಗಳು ಸಭೆಗೆ ತಂದಿರುವ ಸಂಪೂರ್ಣ ವರದಿಗಳನ್ನು ಯಥಾವತ್ತಾಗಿ ಮಂಡಿಸಿದರು. ಕಥೆ ಕೇಳಿದಂತೆ ಹೇಳಿದರು.ಕೆಲವು ಸಣ್ಣಪುಟ್ಟ ತಪ್ಪುಗಳನ್ನು ತಿದ್ದಿಕೊಳ್ಳಬೇಕು, ಸಭೆಗೆ ಬರುವಾಗ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡು ಬಂದು ಹಾಜರಾಗಬೇಕು. ಮುಂದಿನ ಸಭೆಗೆ ಕಡ್ಡಾಯವಾಗಿ ಬರುವಂತೆ ನಿಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿ ಮಂಜುನಾಥ ಅಂತರವಳ್ಳಿ ಅವರಿಗೆ ತಾಪಂ ತಾಪಂ ಕಾರ್ಯನಿರ್ವಾಹಕ ಮಂಜುನಾಥ ಸಾಳೊಂಕೆ ಸೂಚನೆ ನೀಡಿದರು.ಸಿಡಿಪಿಒ, ಸಮಾಜ ಕಲ್ಯಾಣ ಇಲಾಖೆ, ಹೆಸ್ಕಾಂ, ಲೋಕೋಪಯೋಗಿ ಇಲಾಖೆ, ಅಲ್ಪ ಸಂಖ್ಯಾತರ ಇಲಾಖೆ, ಶಿಕ್ಷಣ ಇಲಾಖೆ, ಜೆಜೆಎಂ, ಕೃಷಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಜಿಲ್ಲಾ ಪಂಚಾಯಿತಿ ಎಂಜಿನಿಯರ್, ಅರಣ್ಯ, ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಚರ್ಚಿಸಲಾಯಿತು.ಜಿಲ್ಲಾ ಕೃಷಿ ಇಲಾಖೆ ಅಧಿಕಾರಿ ಮಂಜುನಾಥ ಅಂತರವಳ್ಳಿ, ತಾ.ಪಂ. ಇಒ ಮಂಜುನಾಥ ಸಾಳೊಂಕೆ, ಯೋಜನಾಧಿಕಾರಿ ಶಿವಾನಂದ ಸಣ್ಣಕ್ಕಿ, ತಾ.ಪಂ. ಅಧಿಕಾರಿ ಪ್ರಕಾಶ ಔದಕರ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.