ಮುಟ್ಟಿನ ರಜೆ ಬಗ್ಗೆ ಸಭೆ ಕರೆದು ತೀರ್ಮಾನ: ಸಂತೋಷ್‌ ಲಾಡ್‌

| Published : Sep 23 2024, 01:24 AM IST

ಮುಟ್ಟಿನ ರಜೆ ಬಗ್ಗೆ ಸಭೆ ಕರೆದು ತೀರ್ಮಾನ: ಸಂತೋಷ್‌ ಲಾಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಮುಟ್ಟಿನ ರಜೆ ನೀಡಬೇಕೆಂಬ ಪ್ರಸ್ತಾವನೆ ಇದ್ದು, ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಹಾಗೂ ಕೈಗಾರಿಕೆಗಳ ಸಭೆ ಕರೆದು ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್‌ ಹೇಳಿದರು.

ಧಾರವಾಡ: ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವ ಎಲ್ಲ ಮಹಿಳೆಯರಿಗೆ ವರ್ಷಕ್ಕೆ ಆರು ದಿನ ಮುಟ್ಟಿನ ರಜೆ ನೀಡಬೇಕೆಂಬ ಪ್ರಸ್ತಾವನೆ ಇದ್ದು, ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಹಾಗೂ ಕೈಗಾರಿಕೆಗಳ ಸಭೆ ಕರೆದು ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್‌ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಎಲ್ಲ ಇಲಾಖೆಗಳ ಹಾಗೂ ಕೈಗಾರಿಕೆಗಳ ಸಭೆ ಕರೆಯಲಿದ್ದೇವೆ. ಸಭೆಯಲ್ಲಿ ಎಲ್ಲರಿಂದ ಅಭಿಪ್ರಾಯಗಳನ್ನು ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಹೋಗುತ್ತೇವೆ. ಅವರು ಏನು ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡೋಣ ಎಂದು ಹೇಳಿದರು.