ಸಾರಾಂಶ
ಕನ್ನಡಪ್ರಭ ವಾರ್ತೆ, ಬಸವಕಲ್ಯಾಣಬಸವಕಲ್ಯಾಣಕ್ಕೊಂದು ಮೇಗಾ ಸಿಟಿ ಯೋಜನೆ ಅವಶ್ಯಕವಾಗಿದೆ ಇದನ್ನು ಮಾಡಲು ಹೋರಾಟ ವಚನ ಸಮೂಹ ಸಂಸ್ಥೆಗೆ ನಮ್ಮ ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ನುಡಿದರು.ತಾಲೂಕಿನ ರಾಜೇಶ್ವರ ಮತ್ತು ತಡೋಳ ರಾಷ್ಟ್ರೀಯ ಹೆದ್ದಾರಿ ಹತ್ತಿರ ನಡೆದ ಬೀದರಿನ ವಚನ ಸಮೂಹ ಸಂಸ್ಥೆ ಹಮ್ಮಿಕೊಂಡಿರುವ ಅನುಭವ ಮೆಗಾಸಿಟಿ ಯೋಜನೆ ಅಡಿಗಲ್ಲು ಹಾಗೂ ವಚನ ಟಿ.ವಿ. ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು ಇಂಥಹ ಒಳ್ಳೆಯ ಯೋಜನೆ ರೂಪಿಸಿ ನಗರದ ಸೌಂದರ್ಯವನ್ನು ಹೆಚ್ಚಿಸುವ ಕಡಿಮೆ ಬೆಲೆಯಲ್ಲಿ ಎಲ್ಲಾ ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಪಡಿಸಿ ಬೆಂಗಳೂರು, ಮುಂಬಯಿ, ಹೈದ್ರಾಬಾದ್ ನಗರದಲ್ಲಿ ಸಿಗುವ ಸೌಲಭ್ಯಗಳು ಈ ಮೆಗಾಸಿಟಿ ಹೊಂದಿರುವುದು ನಮಗೆ ಸಂತೋಷವನ್ನು ಉಂಟುಮಾಡಿದೆ.ಶರಣರ ನಾಡು ಕ್ರಾಂತಿಯ ಭೂಮಿ ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆಕೊಟ್ಟ ಇಲ್ಲಿಯ ಅನುಭವ ಮಂಟಪವಾಗಿದೆ ಈ ಭೂಮಿ ವಿಶ್ವದ ಧಾರ್ಮಿಕ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಜಗತ್ತಿನ ಮೂಲೆ ಮೂಲೆಯಿಂದ ಪ್ರವಾಸಿಗರು ಆಗಮಿಸುವ ಕಾಲ ಬಂದಿದೆ. ಇಂಥಹ ಕೆಲಸಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಸರ್ಕಾರವು ಸಹ ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿ ಪ್ರೋತ್ಸಾಹಿಸಿದಾಗ ಮಾತ್ರ ಒಳ್ಳೆ ಬಿಲ್ಡರ್‌ಗಳು ಕೆಲಸ ನಿರ್ಮಿಸಲು ಅನೂಕೂಲವಾಗುತ್ತದೆ ಎಂದರು.
ಶಾಸಕ ಶರಣು ಸಲಗರ ಮಾತನಾಡಿ, ನಮ್ಮ ತಾಲೂಕಿಗೆ ಒಳ್ಳೆಯ ಯೋಜನೆ ಬಂದಿದೆ. ಈ ವಚನ ಸಮೂಹ ಸಂಸ್ಥೆಯೂ 100 ಎಕರೆ ಜಮೀನು ಖರೀದಿಸಿ ಇಲ್ಲಿ ಮೇಗಾ ಸಿಟಿ ಕಲ್ಪನೆ ಜಾರಿ ಯೋಜನೆ ರೂಪಿಸಿ ಅದರಲ್ಲಿ ಈಜುಕೋಳ, ರಂಗಮಂದಿರ, ಕೌಶಲ್ಯ ಅಭಿವೃದ್ಧಿ ಕೇಂದ್ರ, ವೃದ್ಧಾಶ್ರಮ, 3 ಸ್ಟಾರ್ ರೆಸ್ಟೂರೆಂಟ್, ಉದ್ಯಾನವನ, ವಿಲ್ಲಾ, ಗ್ರಂಥಾಲಯ, ಮುಂತಾದವುಗಳು ನಿರ್ಮಿಸುತ್ತಿರುವುದು ನಮಗೆ ಬಹಳ ಸಂತೋಷದ ವಿಷಯ, ಇದರಿಂದ ಬಸವಕಲ್ಯಾಣ ನಗರದ ಬೆಳವಣಿಗೆಗೆ ಪೂರಕ ಕೆಲಸವಾಗಿದೆ, ನಾನು ಈ ಸಂಸ್ಥೆಯ ಎಲ್ಲಾ ಕೆಲಸಕ್ಕೆ ಸಹಕರಿಸುವುದಾಗಿ ಹೇಳಿದರು.ಹುಮನಾಬಾದ್ ಕ್ಷೇತ್ರದ ಶಾಸಕ ಡಾ.ಸಿದ್ದು ಪಾಟೀಲ ಮಾತನಾಡಿ, ಈ ಯೋಜನೆ ಬಸವಕಲ್ಯಾಣ ತಾಲೂಕಿನಲ್ಲಿದ್ದರೂ ನನ್ನ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿ ಇದೊಂದು ಉತ್ತಮ ಕಾರ್ಯವಾಗಿದೆ ಎಂದರು.ಜಗದ್ಗುರು ಡಾ.ಮನ್ನಿಂರಜನ ತೋಂಟದ ಸಿದ್ಧರಾಮ ಮಹಾಸ್ವಾಮೀ, ಜಗದ್ಗುರು ಡಾ. ಗಂಗಾದೇವಿ ಮಾತಾಜಿ, ನಾಡೋಜ ಡಾ.ಬಸವಲಿಂಗ ಪಟ್ಟದೇವರು, ಡಾ.ಚೆನ್ನವೀರ ಶಿವಚಾರ್ಯರು, ಗುರುಮಹಾಂತ ಸ್ವಾಮೀಗಳು ಇಳಕಲ, ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಗಳು ಬೈಲೂರು, ಡಾ.ಶಿವಾನಂದ ಮಹಾಸ್ವಾಮೀಗಳು, ಡಾ.ಸಿದ್ಧರಾಮ ಶರಣರು ಬೆಲ್ದಾಳ, ಡಾ.ಗಂಗಾಬಿಕಾ ಪಾಟೀಲ ಮುಂತಾದ ಹರಗುರು ಚರ ಮೂರ್ತಿಗಳು ಭಾಗವಹಿಸಿ ಆಶಿರ್ವದಿಸಿದರು. ಇದೇ ಸಂದರ್ಭದಲ್ಲಿ ಬಸವ ಟಿವಿಯ ಈ.ಕೃಷ್ಣಪ್ಪ, ಚಲನಚಿತ್ರ ನಟಿ ಭವ್ಯ, ನಟ ನವೀನ ಶಂಕರ, ಪ್ರದೀಪ ವಾತಾಡೆ ಮುಂತಾದವರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕ ನುಡಿಯನ್ನು ಪ್ರಕಾಶ ಗಂಧಿಗುಡಿ, ವಚನ ಟಿವಿ ಉದ್ದೇಶಗಳ ಬಗ್ಗೆ ಪ್ರೊ.ಸಿದ್ದು ಯಾಪಲಪರವಿ ವಿವರಣೆ ನೀಡಿದರು. ವಿಧಾನಪರಿಷತ ಸದಸ್ಯ ಎಂ.ಜಿ ಮೂಳೆ, ಬಸವರಾಜ ಪಾಟೀಲ ಸೇಡಂ, ಧನರಾಜ ತಾಳಂಪಳ್ಳಿ, ಬಾಬು ವಾಲಿ, ಸತ್ಯಕ್ಕ ತಾಯಿ, ಗಾಯತ್ರಿ ತಾಯಿ, ಕಲ್ಯಾಣಮ್ಮ ಮುಂತಾದವರು ಉಪಸ್ಥಿತರಿದ್ದರು.ವಚನ ಸಮೂಹ ಸಂಸ್ಥೆಯ ನಿರ್ದೇಶಕರಾದ ಅಲ್ಲಮಪ್ರಭು ನಾವದಗೇರೆ ಯೋಜನೆಯ ಮಾಹಿತಿ ನೀಡಿದರು. ಶಿವಶಂಕರ ಟೋಕರೆ ಸ್ವಾಗತಿಸಿದರು. ವೈಜಿನಾಥ ಸಜ್ಜನಶೇಟ್ಟಿ ನಿರೂಪಿಸಿದರು. ಶ್ವೇತಾ ಮಠಪತಿ ವಂದಿಸಿದರು.