ಸಾರಾಂಶ
ಚಳ್ಳಕೆರೆ: ತಾಲೂಕಿನ ಯಲಗಟ್ಟೆಯಲ್ಲಿ ಗೃಹಿಣಿಯೋರ್ವಳು ತನ್ನ ಎರಡು ಮಕ್ಕಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ, ನಂತರ ತಾನೂ ಬಚ್ಚಲು ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಯಲಗಟ್ಟೆಯಲ್ಲಿ ಹಾಡಹಗಲೇ ಹೃದಯವಿದ್ರಾವಕ ಘಟನೆ
ಚಳ್ಳಕೆರೆ: ತಾಲೂಕಿನ ಯಲಗಟ್ಟೆಯಲ್ಲಿ ಗೃಹಿಣಿಯೋರ್ವಳು ತನ್ನ ಎರಡು ಮಕ್ಕಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ, ನಂತರ ತಾನೂ ಬಚ್ಚಲು ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.ಯಲಗಟ್ಟೆ ಗ್ರಾಮದ ತಿಪ್ಪೇಸ್ವಾಮಿ ಎಂಬುವವರ ಪತ್ನಿ ಲತಾ (೨೫), ತನ್ನ ಮಕ್ಕಳಾದ ಪ್ರಣೀತಾ (೫), ಒಂದೂವರೆ ವರ್ಷ ಹಸುಗೂಸು ಜ್ಞಾನೇಶ್ವರನನ್ನು ಮನೆಯ ಬಚ್ಚಲಿನಲ್ಲಿದ್ದ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದು, ನಂತರ ತಾನು ನೇಣುಹಾಕಿಕೊಂಡು ಮೃತಪಟ್ಟಿದ್ದಾಳೆ. ಈ ಸಂದರ್ಭದಲ್ಲಿ ಗಂಡ ತಿಪ್ಪೇಸ್ವಾಮಿ ತೋಟಕ್ಕೆ ಹೋಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ತಂದು ದಾಖಲಿಸಿದಾಗ ಪರೀಕ್ಷೆ ನಡೆಸಿದ ವೈದ್ಯರು ಮಕ್ಕಳು ಹಾಗೂ ಪತ್ನಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಲತಾ ಹಾಗೂ ಮಕ್ಕಳ ಸಾವಿನ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.