ಜೀವನಕ್ಕೆ ಹೊಸ ಆಯಾಮ: ಕಿಡ್ನಿ ಕಸಿ ಪ್ರಕ್ರಿಯೆ ರೋಗಿಗಳಿಗೆ ಆಶಾಕಿರಣ

| Published : Jul 02 2025, 12:20 AM IST

ಜೀವನಕ್ಕೆ ಹೊಸ ಆಯಾಮ: ಕಿಡ್ನಿ ಕಸಿ ಪ್ರಕ್ರಿಯೆ ರೋಗಿಗಳಿಗೆ ಆಶಾಕಿರಣ
Share this Article
  • FB
  • TW
  • Linkdin
  • Email

ಸಾರಾಂಶ

ಕಿಡ್ನಿ ಕಸಿ ಪ್ರಕ್ರಿಯೆಗೆ ಇಂಡಿಯಾನ ಆಸ್ಪತ್ರೆಯಲ್ಲಿ ಈಗ ಡಿಜಿಟಲ್ ಫಾಲೋ-ಅಪ್ ವ್ಯವಸ್ಥೆಯನ್ನೂ ರೂಪಿಸುತ್ತಿದ್ದೇವೆ, ದೂರದ ರಾಜ್ಯಗಳಿಂದ ಬಂದ ರೋಗಿಗಳಿಗೂ ಉತ್ತಮದ ರೀತಿಯಲ್ಲಿ ಸಂಪರ್ಕ ಇರಿಸುವ ಉದ್ದೇಶ ಇದರ ಹಿಂದಿದೆ ಎಂದು ಇಂಡಿಯಾನ ಆಸ್ಪತ್ರೆಯ ಕನ್ಸಲ್ಟಂಟ್ಟ್‌ ನೆಫ್ರೋಲಾಜಿಸ್ಟ್ಸ್ಟ್‌ ಡಾ. ಪ್ರದೀಪ್ ಕೆ.ಜೆ. ಮಾಹಿತಿ ನೀಡಿದ್ದಾರೆ.

ವೈದ್ಯರ ದಿನ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ನಾವೆಲ್ಲರೂ ಒಂದು ಕ್ಷಣ ತಡೆದು, ಚಿಂತನೆ ಮಾಡೋಣ ಮತ್ತು ವೈದ್ಯಕೀಯ ವಿಜ್ಞಾನವಲ್ಲದೆ ಅದರ ಮಹತ್ವ ನೆನಪಿಸಿಕೊಳ್ಳೋಣ. ವಿಜ್ಞಾನ ಮತ್ತು ಮಾನವೀಯತೆ ಇವೆರಡನ್ನೂ ಒಗ್ಗೂಡಿಸುವ ಕ್ಷೇತ್ರಗಳಲ್ಲಿ ಪ್ರಮುಖವಾದದ್ದು ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌. ಇದು ಕೇವಲ ಶಸ್ತ್ರಚಿಕಿತ್ಸೆಯೇ ಅಲ್ಲ. ಡಯಾಲಿಸೀಸ್‌ಗೆ ಬಂಧಿಯಾಗಿದ್ದ, ಅನಿಶ್ಚಿತ ಭವಿಷ್ಯದೊಂದಿಗೆ ಬದುಕುತ್ತಿದ್ದ ರೋಗಿಗೆ ಹೊಸ ಜೀವ ನೀಡುವ ಪುನರ್ಜನ್ಮವಾಗಿದೆ.

ಭಾರತವು ಕಳೆದ ಕೆಲ ದಶಕಗಳಲ್ಲಿ ನೆಫ್ರೋಲಾಜಿ ಮತ್ತು ಟ್ರಾನ್ಸ್‌ಪ್ಲಾಂಟೇಶನ್‌ ವೈದ್ಯಕೀಯದಲ್ಲಿ ಅಪಾರ ಪ್ರಗತಿ ಸಾಧಿಸಿದೆ. ಇತರರೊಂದಿಗೆ ಹೋಲಿಸಿದರೆ ನಾವು ಇಂದು ಕಡಿಮೆ ವೆಚ್ಚದಲ್ಲಿ, ಉತ್ತಮ ಗುಣಮಟ್ಟದ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ ಮಾಡುವ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ. ಈ ಸಾಧನೆಯ ಹಿಂದಿರುವ ಶಕ್ತಿಗಳು ನಮ್ಮ ವೈದ್ಯರು, ನರ್ಸ್‌ಗಳು, ತಾಂತ್ರಿಕ ಸಿಬ್ಬಂದಿ ಮತ್ತು ಬೆಂಬಲ ಸಿಬ್ಬಂದಿ.

ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ ಕೇವಲ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಯಲ್ಲ, ಸಾವಿರಾರು ಕುಟುಂಬಗಳ ಬದುಕಿಗೆ ಬದಲಾವಣೆಯ ಸಂಕೇತವೂ ಹೌದು.

ಕಿಡ್ನಿ ವೈಫಲ್ಯ-ಒಂದು ಕಠೋರ ಸತ್ಯ:

ವಿಶ್ವದಾದ್ಯಂತ ಕ್ರೋನಿಕ್‌ ಕಿಡ್ನಿ ಡಿಸೀಸ್ಅ ಗ್ರದರ್ಜೆಯ ಮರಣ ಕಾರಕ ವಿಚಾರವಾಗಿದೆ. ಭಾರತದಲ್ಲಿ ಪ್ರತಿದಿನವೂ ಹತ್ತರಲ್ಲಿ ಒಬ್ಬರ ಮೇಲೆ ಇದು ಪ್ರಭಾವ ಬೀರುತ್ತಿದೆ. ಡಯಾಬಿಟಿಸ್, ಹೈಪರ್‌ಟೆನ್ಷನ್, ಹಾಗೂ ಜನಸಂಖ್ಯೆಯ ವೃದ್ಧಿಯಿಂದ ಇದರ ಪ್ರಮಾಣ ಇನ್ನೂ ಹೆಚ್ಚುತ್ತಿದೆ. ಬಹುತೇಕರಿಗೆ ಡಯಾಲಿಸಿಸ್ ಒಂದು ನಿತ್ಯದ ಅಂಶವಾಗಿ ಬಿಟ್ಟಿದೆ. ಆದರೆ ಇದು ಜೀವ ಉಳಿಸಬಹುದು, ಜೀವನದ ಗುಣಮಟ್ಟವನ್ನಷ್ಟೆ ಮರಳಿ ನೀಡಲಾಗದು. ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್‌ ಮಾತ್ರ ಅಂತಿಮ ಪರಿಹಾರವಾಗಿದೆ.ಯಶಸ್ವಿ ಕಿಡ್ನಿ ಕಸಿಯೊಂದಿಗೆ, ರೋಗಿಗಳು ಡಯಾಲಿಸೀಸ್ ಬಂಧನದಿಂದ ಮುಕ್ತರಾಗುತ್ತಾರೆ, ಕೆಲಸಕ್ಕೆ ಮರಳುವುದು, ಕುಟುಂಬ ಆರಂಭಿಸುವುದು, ಪ್ರವಾಸ ಮಾಡುವುದು, ಇವೆಲ್ಲವೂ ಮತ್ತೆ ಸಾಧ್ಯವಾಗುತ್ತದೆ. ಶಕ್ತಿ, ಆತ್ಮವಿಶ್ವಾಸ, ಗೌರವಎಲ್ಲವೂ ಮರಳಿ ಬರುತ್ತದೆ. ಜೀವಂತ ಸಂಬಂಧಿಯಿಂದ ಅಥವಾ ಬ್ರೈನ್‌ ಡೆಡ್‌ ದಾನಿಯಿಂದ ಲಭಿಸಿದ ಕಿಡ್ನಿ, ಬೇರೊಬ್ಬರ ಬದುಕಿಗೆ ಜೀವ ನೀಡುವ ನಿಸ್ವಾರ್ಥ ಪ್ರೀತಿಯ ಸಂಕೇತವಾಗುತ್ತದೆ.ಕಿಡ್ನಿ ಕಸಿ ಪ್ರಕ್ರಿಯೆ ಸುಲಭ ಯಾನವಲ್ಲ. ಶಸ್ತ್ರಚಿಕಿತ್ಸಾ ನಿಖರತೆ, ನೈತಿಕ ಸ್ಪಷ್ಟತೆ, ರೋಗ ನಿರೋಧಕ ತಂತ್ರಜ್ಞಾನ ಹಾಗೂ ಹಲವು ಕ್ಷೇತ್ರಗಳ ಸಾಮೂಹಿಕ ಪ್ರಯತ್ನ ಬೇಕಾಗುತ್ತದೆ.

ಇಂಡಿಯಾನ ಆಸ್ಪತ್ರೆ ಆಶಾಕಿರಣ: ಮಂಗಳೂರಿನ ಇಂಡಿಯಾನ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯ ಕಿಡ್ನಿ ಕಸಿ ಕೇಂದ್ರ ಈ ಕ್ಷೇತ್ರದಲ್ಲಿ ಮಾದರಿಯಾಗಿ ಬೆಳೆದಿದೆ. ಹಲವು ಯಶಸ್ವಿ ಶಸ್ತ್ರಚಿಕಿತ್ಸೆಗಳು ನೈತಿಕ ಆಧಾರಿತ ಕ್ರಮಗಳು, ತಾಂತ್ರಿ ಕಕೌಶಲ್ಯ ಮತ್ತು ಕಾಳಜಿಯೊಂದಿಗೆ ನಡೆದ ಮತ್ತು ನಂತರದ ಪಾಲನೆ ಇದನ್ನು ಹೆಗ್ಗಳಿಕೆಯ ಸಂಸ್ಥೆಯಾಗಿಸಿದೆ.ದ.ಕ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಇಂಡಿಯಾನಾದಲ್ಲಿ ವಿದೇಶಿ ರೋಗಿಗೆ ಕಿಡ್ನಿ ಕಸಿ ಮಾಡಿದ ದಾಖಲೆ ಮಾಡಲಾಗಿದೆ. ಈ ಯಶಸ್ಸು ನಮ್ಮ ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ವಿಶ್ವಮಟ್ಟದ ನಂಬಿಕೆ ತರಿಸಲು ಕಾರಣವಾಯಿತು. ಕೇವಲ ಕರ್ನಾಟಕದವರಿಗಲ್ಲ, ಭಾರತೀಯ ವೈದ್ಯಕೀಯ ಸೇವೆಯ ಪ್ರಾಮಾಣಿಕತೆ, ಗುಣಮಟ್ಟ ಮತ್ತುಕಡಿಮೆ ವೆಚ್ಚದ ಪರಂಪರೆಯನ್ನು ಆಸ್ಪತ್ರೆ ಮುಂದುವರಿಸುತ್ತಿದೆ.

ಸವಾಲಿನ ಕ್ಷೇತ್ರ: ಭಾರತದಲ್ಲಿ ಅಂಗಾಂಗ ದಾನ ಕುರಿತು ಅರಿವು ಇನ್ನೂ ಕಡಿಮೆಯಾಗಿದೆ. ಭಯ, ಅಂಧಶ್ರದ್ಧೆ ಮತ್ತು ತಿಳಿವಳಿಕೆಯ ಕೊರತೆಯು ದಾನ ಕಾರ್ಯವನ್ನು ಹಿಮ್ಮೆಟ್ಟಿಸುತ್ತಿವೆ. ವೈದ್ಯರು, ಮಾಧ್ಯಮಗಳು, ನೀತಿ ನಿರ್ಮಾಪಕರು ಮತ್ತು ಸಮಾಜಎಲ್ಲರೂ ಅಂಗಾಂಗ ದಾನದ ಬಗ್ಗೆ ಸಂವಾದ ಮಾಡಬೇಕು.ಕಿಡ್ನಿ ಕಸಿ ಪ್ರಕ್ರಿಯೆಗೆ ಇಂಡಿಯಾನ ಆಸ್ಪತ್ರೆಯಲ್ಲಿ ಈಗ ಡಿಜಿಟಲ್ ಫಾಲೋ-ಅಪ್ ವ್ಯವಸ್ಥೆಯನ್ನೂ ರೂಪಿಸುತ್ತಿದ್ದೇವೆ, ದೂರದ ರಾಜ್ಯಗಳಿಂದ ಬಂದ ರೋಗಿಗಳಿಗೂ ಉತ್ತಮದ ರೀತಿಯಲ್ಲಿ ಸಂಪರ್ಕ ಇರಿಸುವ ಉದ್ದೇಶ ಇದರ ಹಿಂದಿದೆ.-ಡಾ. ಪ್ರದೀಪ್‌ ಕೆ.ಜೆ. ಕನ್ಸಲ್ಟಂಟ್ ನೆಫ್ರೋಲಾಜಿಸ್ಟ್, ಇಂಡಿಯಾನ ಆಸ್ಪತ್ರೆ, ಮಂಗಳೂರು.