ಲೇಖನಿ ಖಡ್ಗಕ್ಕಿಂತ ಹರಿತಾಗಿದ್ದು ಎನ್ನುವುದು ಸತ್ಯವಾದ ಮಾತು. ಹಾಗಾಗಿ ಪತ್ರಕರ್ತರು ಸಮಾಜಕ್ಕೆ ಸತ್ಯವನ್ನು ತಿಳಿಸುವ ಕೆಲಸ ಮಾಡಬೇಕು. ಅಂತಹ ಕೆಲಸವನ್ನು ಶಿಗ್ಗಾಂವಿ ತಾಲೂಕಿನ ಪತ್ರಕರ್ತರು ಮಾಡ್ತಾ ಇರೋದು ನಿಜಕ್ಕೂ ಸಂತೋಷದ ವಿಷಯ ಎಂದು ಸದ್ಗುರು ಸಮರ್ಥ ಡಾ.ಎ.ಸಿ. ವಾಲಿ ಹೇಳಿದರು.

ಶಿಗ್ಗಾಂವಿ:ಲೇಖನಿ ಖಡ್ಗಕ್ಕಿಂತ ಹರಿತಾಗಿದ್ದು ಎನ್ನುವುದು ಸತ್ಯವಾದ ಮಾತು. ಹಾಗಾಗಿ ಪತ್ರಕರ್ತರು ಸಮಾಜಕ್ಕೆ ಸತ್ಯವನ್ನು ತಿಳಿಸುವ ಕೆಲಸ ಮಾಡಬೇಕು. ಅಂತಹ ಕೆಲಸವನ್ನು ಶಿಗ್ಗಾಂವಿ ತಾಲೂಕಿನ ಪತ್ರಕರ್ತರು ಮಾಡ್ತಾ ಇರೋದು ನಿಜಕ್ಕೂ ಸಂತೋಷದ ವಿಷಯ ಎಂದು ಸದ್ಗುರು ಸಮರ್ಥ ಡಾ.ಎ.ಸಿ. ವಾಲಿ ಹೇಳಿದರು.ತಾಲೂಕಿನ ಗೊಟಗೋಡಿ ರಾಕ್ ಗಾರ್ಡನಲ್ಲಿ ಏರ್ಪಡಿಸಿದ ಉತ್ಸವ್ ರಾಕ್ ಗಾರ್ಡನ್ ಕ್ಯಾಲೆಂಡರ್ ಬಿಡುಗಡೆ ಮತ್ತು ಶಿಗ್ಗಾಂವಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪತ್ರಕರ್ತರು ಯಾವುದೇ ಒತ್ತಡಕ್ಕೆ ಸಿಲುಕದೆ ಸಮಾಜದ ಒಳಿತಿಗಾಗಿ ನಿರ್ಭಯದಿಂದ ಕಾರ್ಯ ಮಾಡಬೇಕು. ಇಂದಿನ ದಿನಮಾನಗಳಲ್ಲಿ ಪತ್ರಕರ್ತರ ಮೇಲೆ ಹಲ್ಲೆಯಾಗುತ್ತಿರುವುದು ಖೇದದ ಸಂಗತಿಯಾಗಿದೆ ಎಂದರು. ಶಿಗ್ಗಾಂವಿ ತಾಲೂಕು ಕಲೆಗೆ ಹೆಸರುವಾಸಿಯಾಗಿದೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಗೊಟಗೋಡಿಯಲ್ಲಿ ಅರಳಿದ ಈ ಕಲೆಗಳೇ ಜೀವಂತ ಸಾಕ್ಷಿ, ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ರಾಕ್ ಗಾರ್ಡನ್ ಮಾಡುತ್ತಿದೆ ಎಂದರು.ಶಿಗ್ಗಾಂವಿ ವಿರಕ್ತ ಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಕ್ ಗಾರ್ಡನ್ ಕ್ಯೂರೇಟರ್ ಹಾಗೂ ಸಾಹಿತಿ ಡಾ. ವೇದಾರಾಣಿ ಪ್ರಕಾಶ ದಾಸನೂರ್ ಅವರು ಮಾತನಾಡಿ, ಕ್ಯಾಲೆಂಡರ್ ಬರುವುದಕ್ಕಿಂತ ಮುಂಚೆಯೇ ಭಾರತೀಯರಿಗೆ ಪಂಚಾಂಗವೇ ಎಲ್ಲವನ್ನು ತಿಳಿಸುವ ದಾಖಲೆಯಾಗಿತ್ತು. ಆ ಹಿನ್ನೆಲೆಯಲ್ಲಿ ನಾವು ಸಹ ಇಂದು ನಮ್ಮ ರಾಕ್ ಗಾರ್ಡನ್ ವತಿಯಿಂದ ಕ್ಯಾಲೆಂಡರ್ ಸಿದ್ಧಪಡಿಸಿದ್ದು, ಇದರಲ್ಲಿ ಪ್ರತಿಯೊಂದು ಮಾಹಿತಿಯನ್ನು ಒಳಗೊಂಡಿದ್ದು ಜನರಿಗೆ ಒಳ್ಳೆ ದಿನದರ್ಶಿಕೆ ಆಗಬಲ್ಲದು ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿವಾನಂದ ಮ್ಯಾಗೇರಿ, ಪತ್ರಕರ್ತರಾದ ದೇವರಾಜ ಸುಣಗಾರ, ಎಂ.ವಿ. ಗಾಡದ ಸೇರಿದಂತೆ ಹಲವರು ಮಾತನಾಡಿದರು.ಕೆ.ಎಮ್.ಎಫ್.ನಿರ್ದೇಶಕ ತಿಪ್ಪಣ್ಣ ಸಾತಣ್ಣವರ, ಉತ್ಸವ ರಾಕ್ ಗಾರ್ಡನ್ ಕಾರ್ಯದರ್ಶಿ ಪ್ರಕಾಶ ದಾಸನೂರ, ಗ್ರಾ.ಪಂ. ಅಧ್ಯಕ್ಷ ಕೃಷ್ಣಾ ಪಡವಳ್ಳಿ, ಸದಸ್ಯರಾದ ಯಲ್ಲಪ್ಪ ಶಿಂದೆ, ಶಾರವ್ವ ವಾಲೀಕಾರ, ನಿವೃತ್ತ ಪ್ರಾಚಾರ್ಯ ಜಿ.ಎನ್. ಯಲಿಗಾರ, ವಿ.ಎಸ್. ಹಿರೇಮಠ, ಶಾರವ್ವ, ಉದ್ಯಮಿ ನರಹರಿ ಕಟ್ಟಿ, ಕಲಾವಿದ ಬಸವರಾಜ ಶಿಗ್ಗಾಂವಿ. ಬಸವರಾಜ ಮಡಿವಾಳರ, ಆನಂದ ಪಾಟೀಲ ಸೇರಿದಂತೆ ಇತರರಿದ್ದರು.ಅಲ್ತಾಫ ಯತ್ತಿನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.