ಸಾರಾಂಶ
ಕನಕಪುರ: ಅಯೋಧ್ಯೆ ರಾಮಮಂದಿರದಲ್ಲಿ ಜ.22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಸವಿ ನೆನಪಿಗಾಗಿ ಅಂಬೇಡ್ಕರ್ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ವಿ.ಬಾಬು ಅವರ ಮನೆಯ ಗೋಡೆಗೆ ಪ್ರಭು ಶ್ರೀರಾಮಚಂದ್ರನ ಚಿತ್ರ ಸೇರಿದಂತೆ ರಘು ಪತಿ ರಾಘವ ರಾಜಾರಾಮ್ ಸಾಲುಗಳನ್ನು ಬರೆಸಿರುವುದು ಶ್ರೀರಾಮ ಭಕರನ್ನು ಆಕರ್ಷಿಸುತ್ತಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಾಬು, ಧರ್ಮ ಜಾಗೃತಿಗಾಗಿ ಈ ಚಿತ್ರ ಬರೆಸಿದ್ದು ಇಂದಿಗೂ ನಮ್ಮ ಜನರಿಗೆ ಭಗವದ್ಗೀತೆ, ಸಂಪೂರ್ಣ ರಾಮಾಯಣ, ವೇದ ಉಪನಿಷತ್ತುಗಳು, ದೇವತೆಗಳ ಅವತಾರಗಳ ಬಗ್ಗೆ ಹಾಗೂ ಧರ್ಮದ ಆಚಾರ ವಿಚಾರಗಳ ಬಗ್ಗೆ ತಿಳಿಯದಿರುವುದು ವಿಪರ್ಯಾಸ. ಸಿನಿಮಾ ನಟನಟಿಯರ ಬಗ್ಗೆ ವ್ಯಕ್ತಪಡಿಸುವ ಒಲವು ಮತ್ತು ಸಂಗ್ರಹಿಸುವ ಮಾಹಿತಿಯ ಶೇ.10ರಷ್ಟಾದರೂ ಧರ್ಮ ಜಾಗೃತಿಗಾಗಿ ಸಮಯ ಮೀಸಲಿಡಬೇಕೆಂದು ವಿನಂತಿಸಿದರು.ಕೆಲವರು ಹಿಂದೂ ಧರ್ಮವನ್ನು ವಿರೋಧಿಸುವುದಕ್ಕಾಗಿಯೇ ಇರುವುದರಿಂದ ಅಂತಹ ಜನರ ಟೀಕೆ ಟಿಪ್ಪಣಿಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಈ ಚಿತ್ರ ಬಿಡಿಸಿದ ಕಲಾವಿದ ಸಿದ್ದರಾಜು ನನ್ನ ಸ್ನೇಹಿತ. ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ನಾವಿಬ್ಬರು ತೇರಿನ ದೊಡ್ಡಿಯ ಸಿದ್ದಪ್ಪ ಬಳಿ ಕೆಲಸ ಮಾಡುತ್ತಿದ್ದೆವು. ಅದೇ ವಿಶ್ವಾಸದ ಮೇಲೆ ಮತ್ತು ಸಿದ್ದರಾಜು ಸಹ ಹಿಂದುತ್ವದ ಪ್ರತಿಪಾದಕನಾಗಿದ್ದು ಈ ಚಿತ್ರ ಅವರ ಕೈಯಲ್ಲಿ ಇಷ್ಟು ಅದ್ಭುತವಾಗಿ ಮೂಡಿಬರಲು ಸಹಕಾರಿಯಾಗಿದೆ. ಅವರಿಗೆ ಕಲಾವಿದ ಮೋಹನ್ ಸಾಥ್ ನೀಡಿದರು. ಇವರಿಬ್ಬರಿಗೂ ಪ್ರಭು ಶ್ರೀರಾಮಚಂದ್ರ ಒಳಿತನ್ನು ಮಾಡಲಿ ಎಂದು ಆಶಿಸುತ್ತೇನೆ ಎಂದರು.ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಎಲ್ಲಾ ವರ್ಗದವರು ದೇಣಿಗೆ ನೀಡಿದ್ದು, ಈ ಭವ್ಯವಾದ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದು ಈ ಸವಿನೆನಪು ನಮ್ಮ ನಗರ ಹಾಗೂ ತಾಲ್ಲೂಕಿನ ಜನತೆಗೆ ಚಿರಕಾಲ ಇರಲೆಂಬ ಆಶಯದಿಂದ ಈ ಚಿತ್ರ ಬರೆಸಿದ್ದು ಧರ್ಮೋ ರಕ್ಷತಿ ರಕ್ಷಿತಃ ಎಂದಾಗಲೀ ಎಂದು ಹಾರೈಸಿದ್ದಾರೆ.
ಕೆ ಕೆ ಪಿ ಸುದ್ದಿ 01:ಕನಕಪುರದ ಇಂದಿರಾನಗರದ ನಿವಾಸಿ ಅಂಬೇಡ್ಕರ್ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ವಿ. ಬಾಬು ಅವರ ಮನೆಯ ಮೇಲೆ ಪ್ರಭು ಶ್ರೀ ರಾಮಚಂದ್ರನ ಭಾವಚಿತ್ರ ಬಿಡಿಸಿರುವುದು.
;Resize=(128,128))
;Resize=(128,128))
;Resize=(128,128))
;Resize=(128,128))