ಸಾರಾಂಶ
ಭದ್ರ ಅಭಯಾರಣ್ಯದಲ್ಲಿ ಆನೆ ಕಾರಿಡಾರ್ ನಿರ್ಮಿಸಿದರೆ ಪ್ರಾಣಿಗಳಿಗೆ ವಾಸ ಸ್ಥಾನಅಭಾವ
ಕನ್ನಡಪ್ರಭ ವಾರ್ತೆ, ತರೀಕೆರೆಭದ್ರ ಹುಲಿ ಸಂರಕ್ಷಿತ ಪ್ರದೇಶದಿಂದ ಲಿಂಗದಹಳ್ಳಿ ಹೋಬಳಿಯ ಹಲವಾರು ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿ ಮಿತಿ ಮೀರಲು ಮುಖ್ಯ ಕಾರಣ ವನ್ಯ ಪ್ರಾಣಿಗಳ ಸಂಖ್ಯೆ ಹೆಚ್ಚಳ ಮತ್ತು ಭದ್ರ ಅಭಯಾರಣ್ಯದ ವಿಸ್ತೀರ್ಣ ಪ್ರಾಣಿಗಳಿಗೆ ಸಾಕಾಗದೆ ನಾಡಿನತ್ತ ಮುಖ ಮಾಡುತ್ತಿವೆ. ಈ ನಡುವೆ ಭದ್ರ ಅಭಯಾರಣ್ಯದ 1 ಸಾವಿರ ಎಕರೆಯನ್ನು ಆನೆ ಕಾರಿಡಾರ್ ಗೆ ಬಳಸಿದರೆ ಮುಂದೆ ವನ್ಯ ಪ್ರಾಣಿಗಳಿಗೆ ಸ್ಥಳ ಅಭಾವ ಉಂಟಾಗಲಿದೆ ಹೀಗಾಗಿ ಆನೆ ಕಾರಿಡಾರ್ ನಿರ್ಮಿಸಲು ಬಿಡುವುದಿಲ್ಲ ಎಂದು ನಂದಿಬಟ್ಟಲು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಪಿ.ಕೃಷ್ಣೇಗೌಡ ಹೇಳಿದರು.
ಆನೆ ಕಾರಿಡಾರ್ ನಿರ್ಮಾಣ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿ ನಂದಿಬಟ್ಟಲು ಮುಂತಾದ ಗ್ರಾಮಗಳ ನೂರಾರು ರೈತರು ತಣಿಗೆಬೈಲು ಭದ್ರ ವಲಯಾರಣ್ಯದ ಕಚೇರಿ ಬಳಿ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ತಣಿಗೆ ಬೈಲು, ತಿಮ್ಮನ ಬೈಲು, ಹುಣಸೆಬೈಲು, ನಂದಿಬಟ್ಟಲು, ಜೈಪುರ, ದೂಪದಖಾನ್, ಹುಲಿತಿಮ್ಮಾಪುರ, ಮಲ್ಲಿಗೇನ ಹಳ್ಳಿ, ತ್ಯಾಗದಬಾಗಿ, ಸಿದ್ದರಹಳ್ಳಿ, ಜಮ್ಮಾಪುರ, ಗುಳ್ಳದ ಮನೆ, ಮುಂತಾದ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಗಳ ಹಾವಳಿ ಮಿತಿ ಮೀರಿ ಈ ಭಾಗದ ಗ್ರಾಮಗಳ ರೈತರು ಬೆಳೆ ಮತ್ತು ಜೀವ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ರೈತರು ಕೊಳವೆ ಬಾವಿ, ಪಂಪ್ ಸೆಟ್‌ಗಳಗೆ ಅಳವಡಿಸಿರುವ ವಿದ್ಯುತ್ ಸ್ಪರ್ಶದಿಂದ ಹತ್ತಾರು ಆನೆಗಳು ಸಹ ಸಾವನ್ನಪ್ಪಿವೆ ಎಂದು ವಿಷಾಧಿಸಿದರು.ವನ್ಯ ಜೀವಿಗಳಿಂದ ಈ ಭಾಗದ ಗ್ರಾಮಸ್ಥರು ಜೀವನ ನಡೆಸುವುದೇ ದುಸ್ತರವಾಗಿದ್ದು ವರ್ಷದಿಂದ ವರ್ಷಕ್ಕೆ ಪ್ರಾಣಿಗಳ ಸಂಖ್ಯೆ ಹೆಚ್ಚಿ ಭದ್ರ ಅಭಯಾರಣ್ಯ ಈ ಪ್ರಾಣಿಗಳೀಗೆ ಸಾಲದೆ ಕಾಡನೆ, ಹುಲಿ, ಚಿರತೆ, ಜಿಂಕೆ, ಕಾಡು ಹಂದಿ ಮುಂತಾದವು ಗ್ರಾಮಗಳತ್ತ ಬರುತ್ತಿವೆ. ಈ ಮಧ್ಯೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಭದ್ರ ಅಭಯಾರಣ್ಯ ವ್ಯಾಪ್ತಿಯ 1 ಸಾವಿರ ಎಕರೆ ವಿಸ್ತೀರ್ಣದಲ್ಲಿ ಆನೆ ಕಾರಿಡಾರ್ ಗೆ ಅನುಮೋದನೆ ನೀಡಿದ್ದಾರೆ. ಈಗಿರುವ ಅರಣ್ಯದಲ್ಲಿ ಆನೆ ಕಾರಿಡರ್‌ಗೆ ಹೋದರೆ ಪ್ರಾಣಿ ಗಳಿಗೆ ಸ್ಥಳ ಅಭಾವ ಉಂಟಾಗಲಿದೆ ಎಂದು ವಿವರಿಸಿದರು. ಭದ್ರ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾಧಿ ಕಾರಿ ಮತ್ತು ಡಿಎಫ್ಓ ರವರ ತಂಡ, ತಣಿಗೆಬೈಲು ಭದ್ರ ಅಭಯಾರಣ್ಯದ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ ಗೆ ಸ್ಥಳ ಪರಿಶೀಲನೆಗೆ ಆಗಮಿಸುತ್ತಿ ರುವುದನ್ನು ತಿಳಿದು ಈ ಭಾಗದ ನೂರಾರು ರೈತರು ತಣಿಗೆಬೈಲಿನ ಭದ್ರ ವನ್ಯಜೀವಿ ವಲಯಾ ರಣ್ಯಾಧಿಕಾರಿಗಳ ಕಚೇರಿ ಬಳಿ ಮನವಿ ಸಲ್ಲಿಸಲು ಬಂದಿದ್ದರು. ಇದನ್ನು ಅರಿತ ಅರಣ್ಯಾಧಿಕಾರಿಗಳ ತಂಡ ತಣಿಗೆಬೈಲಿಗೆ ಬಾರದೇ ಹುಣಸೆಬೈಲು, ಜೈಪುರ ಮಾರ್ಗವಾಗಿ, ಚಿಕ್ಕಮಗಳೂರಿಗೆ ಹೋದ ವಿಷಯ ತಿಳಿದ ರೈತರು-ಗ್ರಾಮಸ್ಥರು ತಮ್ಮ ಮನವಿ ಪತ್ರ ಸ್ವೀಕರಿಸದೇ ತೆರಳಿದ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತ ಪಡಿಸಿ ಮುಂದಿನ ದಿನಗಳಲ್ಲಿ ಆನೆ ಕಾರಿಡಾರ್ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲು ತೀರ್ಮಾನಿಸಿ ರುವುದಾಗಿ ನಂದಿಬಟ್ಟಲು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಜೆ. ಭದ್ರೇಗೌಡ ತಿಳಿಸಿದರು. ರೈತರು ತೊಟದ ಬೆಳೆ, ಅಲ್ಪ ಕಾಲದ ಬೆಳೆ ಹಾಗೂ ತರಕಾರಿ ಬೆಳೆಗಳ ಜೊತೆಗೆ ಈ ಎಲ್ಲಾ ಬೆಳೆಗಳ ನೀರು ಸರಬರಾಜಿಗೆ ಕೊಳವೆ ಬಾವಿಗಳಿಗೆ ಅಳವಡಿಸಿರುವ ಪಂಪ್‌ಸೆಟ್, ಪೈಪ್ ಗಳನ್ನು ಕಿತ್ತು, ತುಳಿದು ಹಾಕಿ ಪಂಪ್‌ಸೆಟ್‌ಗಳಿಗೆ ಬಳಸುವ ವಿದ್ಯುತ್‌ಗೆ ಸಿಲುಕಿ 10 ರಿಂದ 11 ಆನೆಗಳು ಸಾವನ್ನಪ್ಪಿವೆ. ಇದಕ್ಕೆಅರಣ್ಯ ಇಲಾಖೆ ನೂರಾರು ರೈತರ ಮೇಲೆ ದೂರು ದಾಖಲಿಸಿದ್ದು ತಮ್ಮದಲ್ಲದ ತಪ್ಪಿಗೆ ರೈತರು ವಿನಾ ಕಾರಣ ಕೋರ್ಟು ಕಚೇರಿಗೆ ಅಲೆದಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ನಂದಿಬಟ್ಟಲು ಗ್ರಾಪಂ ಸದಸ್ಯರು, ಗ್ರಾಮಸ್ಥರಾದ ರಾಮೇಗೌಡ, ರಂಗನಾಥ, ಜಗದೀಶ, ನಾರಾಯಣಗೌಡ, ಕೆಂಚಪ್ಪಗೌಡ, ಎನ್.ಜೆ. ಭದ್ರೇಗೌಡ, ಎನ್.ಪಿ.ಕೃಷ್ಣೇಗೌಡ ಅವರು ಭದ್ರ ಅಭಯಾರಣ್ಯ ತಣಿಗೆಬೈಲು ವಲಯದ ಕಚೇರಿ ಸಿಬ್ಬಂದಿ ಅಮಿತ, ರವಿ ಮೂಲಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. -
31ಕೆಟಿಆರ್.ಕೆ.1ಃ ಭದ್ರ ಅಭಯಾರಣ್ಯದ ತಣಿಗೆಬೈಲು ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ ನಿರ್ಮಾಣ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿ ನಂದಿಬಟ್ಟಲು ಮುಂತಾದ ಗ್ರಾಮಗಳ ನೂರಾರು ರೈತರು ತಣಿಗೆಬೈಲು ವಲಯಾರಣ್ಯ ಕಚೇರಿ ಅರಣ್ಯಾಧಿಕಾರಿ ಗೆ ಮನವಿ ಸಲ್ಲಿಸಿದರು.