ಅಘನಾಶಿನಿ ನದಿ ಜೋಡಣೆ ಯೋಜನೆ ಸ್ಥಗಿತಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿರುವ ಹೋರಾಟಗಾರರು ಅಘನಾಶಿನಿ ನದಿಗೆ ಇಳಿದು ಹೋರಾಟಕ್ಕೆ ಸನ್ನದ್ಧಗೊಂಡಿರುವುದಾಗಿ ಪ್ರತಿಜ್ಞೆ ಮಾಡಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಅಘನಾಶಿನಿ ನದಿ ಜೋಡಣೆ ಯೋಜನೆ ಸ್ಥಗಿತಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿರುವ ಹೋರಾಟಗಾರರು ಅಘನಾಶಿನಿ ನದಿಗೆ ಇಳಿದು ಹೋರಾಟಕ್ಕೆ ಸನ್ನದ್ಧಗೊಂಡಿರುವುದಾಗಿ ಪ್ರತಿಜ್ಞೆ ಮಾಡಿದರು.

ಫೆ.೧ರಿಂದ ವಿರೋಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಅಘನಾಶಿನಿ ನದಿಗೆ ಅಣೆಕಟ್ಟು ಕಟ್ಟುವ ಸ್ಥಳವಾದ ತಾಲೂಕಿನ ಬಾಳೆಕೊಪ್ಪ ಗ್ರಾಮದ ಗೇಜಕಟ್ಟೆ ಸ್ಥಳದಲ್ಲಿನ ಅಘನಾಶಿನಿ ನದಿಪ್ರದೇಶಕ್ಕೆ ರವೀಂದ್ರ ನಾಯ್ಕ ನೇತೃತ್ವದ ಹೋರಾಟಗಾರರ ನಿಯೋಗವು ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಹೋರಾಟದ ರೂಪುರೇಷೆ ರಚಿಸಿತು.

ನದಿ ಜೋಡಣೆಯಿಂದ ನದಿಯ ಪಾವಿತ್ರ್ಯತೆ ಮತ್ತು ಜನ ಸಾಮಾನ್ಯರ ಜೀವನಕ್ಕೆ ಆತಂಕ ಉಂಟಾಗುವುದಲ್ಲದೇ ಪರಿಸರ ನಾಶಕ್ಕೆ ಕಾರಣವಾಗುವುದರಿಂದ ಸರ್ವರೂ ಹೋರಾಟಕ್ಕೆ ಮುಂದಾಗಬೇಕೆಂದು ಸುರೇಶ ಹೆಗಡೆ ಹಸಗೆ ಹೇಳಿದರು.

ಹೋರಾಟಗಾರರಾದ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಹರಿ ನಾಯ್ಕ ಓಂಕಾರ, ಸೀತಾರಾಮ ಗೌಡ ಹುಕ್ಕಳ್ಳಿ, ನಾಗರಾಜ ಹಲಸಿನಮನೆ ಅಭಿಪ್ರಾಯ ಮಂಡಿಸಿದರು. ಜನಾಭಿಪ್ರಾಯ ಸಂಗ್ರಹಿಸದೇ ಪಶ್ಚಿಮದಿಂದ ಪೂರ್ವಕ್ಕೆ ಹರಿಯುವ ನೀರು ಹರಿಸುವ ಯೋಜನೆ ಅವೈಜ್ಞಾನಿಕ. ಪ್ರಬಲ ಹೋರಾಟಕ್ಕೆ ಸನ್ನದ್ಧರಾಗೋಣ ಎಂದು ಹೋರಾಟಗಾರ ನಾಗಪತಿ ಗೌಡ ಹುಕ್ಕಳ್ಳಿ ಹೇಳಿದರು.

ಕೆ.ಟಿ. ನಾಯ್ಕ, ಎಂ.ಪಿ. ಗೌಡ, ರಾಜೇಶ್ ಭಟ್ಟ ಮಕ್ಕಿಗದ್ದೆ, ರಫೀಕ ಗೌಡಳ್ಳಿ, ಅಶೋಕ ನಾಯ್ಕ ಇಟಗಿ, ರಮೇಶ್ ನಾಯ್ಕ, ಮಧುಕೇಶ್ವರ, ವಿನಯ ನಾಯ್ಕ, ಮಾಬ್ಲೇಶ್ವರ ಕೃಷ್ಣಪ್ಪ ನಾಯ್ಕ, ವಿನಯ ತಿಮ್ಮಪ್ಪ ನಾಯ್ಕ, ಮಾದೇವ ನಾಯ್ಕ, ಭದ್ರ ಗೌಡ, ವಿನೋದ ಗೌಡ ಹುಕ್ಕಳ್ಳಿ, ಮಂಜುನಾಥ ನಾಯ್ಕ ಹುತ್ಗಾರ, ಮಾಬ್ಲೇಶ್ವರ ಗೌಡ ಸುಳಗಾರ, ನಾರಾಯಣ ಗೌಡ, ಈಶ್ವರ ನಾಯ್ಕ, ರಾಜು ನಾಯ್ಕ, ಶಿವಾನಂದ, ದಿವಾಕರ್ ಬಾಳೆಜಡ್ಡಿ ಮುಂತಾದವರು ಭಾಗವಹಿಸಿದ್ದರು.ನದಿ ಜೋಡಣೆ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಫೆ. ೨ರಂದು ಗೋಳಿಮಕ್ಕಿಯಲ್ಲಿ ಚಾಲನೆ ನೀಡಿ ಪ್ರಥಮ ಹಂತದ ಪಾದಯಾತ್ರೆಯನ್ನು ಗೋಳಿಮಕ್ಕಿಯಿಂದ ಅಣೆಕಟ್ಟು ಕಟ್ಟುವ ಗೆಜಕಟ್ಟಾಗೆ ಪಾದಯಾತ್ರೆ ಸಂಘಟಿಸಲು ಅಘನಾಶಿನಿ ನದಿಯ ದಡದಲ್ಲಿ ಜರುಗಿಸಿದ ಸಮಾಲೋಚನೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.