ಎತ್ತಿನಬಂಡಿಯಲ್ಲಿ ಮಹಾತ್ಮರ ವೇಷಧಾರಿ ಮಕ್ಕಳ ಮೆರವಣಿಗೆ

| Published : Jun 01 2024, 12:46 AM IST

ಸಾರಾಂಶ

ಕಲಾದಗಿ: ಹೋಬಳಿ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಿರಿಯ, ಹಿರಿಯ, ಪ್ರೌಢಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ನಿಮಿತ್ತ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಕಲಾದಗಿ: ಹೋಬಳಿ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಿರಿಯ, ಹಿರಿಯ, ಪ್ರೌಢಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ನಿಮಿತ್ತ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪುಪ್ಷಗುಚ್ಚ ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಖಜ್ಜಿಡೋಣಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎತ್ತಿನ ಬಂಡಿಯಲ್ಲಿ ಮಹಾತ್ಮರ ವೇಷಧಾರಿ ಮಕ್ಕಳನ್ನು ಮೆರವಣಿಗೆ ಮಾಡಿ ಡೊಳ್ಳು ವಾದನದೊಂದಿಗೆ ಶಾಲೆಗೆ ಕರೆತರಲಾಯಿತು, ಶಾಲಾ ದಾಖಲಾತಿ ಅಂದೋಲನ, ಪುಸ್ತಕ ವಿತರಣೆ, ಮಧ್ಯಾಹ್ನ ಬಿಸಿಊಟಕ್ಕೆ ಶೀರಾ, ಫಲಾವ್‌ ಬಡಿಸಲಾಯಿತು. ೧ನೇ ತರಗತಿಯ ಮಕ್ಕಳಿಗೆ ಅಕ್ಕಿಯಲ್ಲಿ ಅಕ್ಷರ ಬರಹ ಮಾಡಿದರು, ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಪುಷ್ಪಗುಚ್ಚ ನೀಡಿ ಸ್ವಾಗತಿಸಿಕೊಳ್ಳಲಾಯಿತು, ಶಾರದಾಳ, ಉದಗಟ್ಟಿ, ಅಂಕಲಗಿ ಶಾಲೆಯಲ್ಲೂ ಮಕ್ಕಳಿಗೆ ಪುಪ್ಷನೀಡಿ ಸ್ವಾಗತಿಸಿ ಮಧ್ಯಾಹ್ನ ಸಿಹಿ ಊಟ ಬಡಿಸಿದರು.