ಸಾರಾಂಶ
ಚಾಮರಾಜನಗರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಪಥ ಸಂಚಲನ ಮೆರವಣಿಗೆ ಬಹಳ ಯಶಸ್ವಿಯಾಗಿ ನಡೆಯಿತು.
ಚಾಮರಾಜನಗರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಪಥ ಸಂಚಲನ ಮೆರವಣಿಗೆ ಬಹಳ ಯಶಸ್ವಿಯಾಗಿ ನಡೆಯಿತು.
ನಗರದ ಮಾರಮ್ಮ ದೇವಸ್ಥಾನ ಮುಂಭಾಗದಿಂದ ಹೊರಟ ಮೆರವಣಿಗೆಯು ರಥದ ಬೀದಿ, ಮಹಾವೀರ ವೃತ್ತ, ದೊಡ್ಡಂಗಡಿ ಬೀದಿ, ವಾಣಿಯಾರ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ, ಭುವನೇಶ್ವರಿ ವೃತ್ತ, ಸಂತೇಮರಹಳ್ಳಿ ವೃತ್ತ ಚಿಕ್ಕಂಗಡಿ ಬೀದಿ ಮಾರ್ಗವಾಗಿ ಮತ್ತೇ ಮಾರಮ್ಮ ಗುಡಿಯಲ್ಲಿ ಪಥ ಸಂಚಲನ ಅಂತ್ಯಗೊಂಡಿತು. ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಗಣವೇಷಧಾರಿಗಳು ಶಿಸ್ತು ಬದ್ಧವಾಗಿ ಮೆರವಣಿಗೆಯಲ್ಲಿ ಸಾಗಿದರು. ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರು ಗಣವೇಷಧಾರಿಗಳಿಗೆ ಪುಷ್ಪವೃಷ್ಠಿ ಮಾಡಿದರು. ಭಾರತ ಮಾತಾಕೀ ಜಯ್ ಎಂದು ಘೋಷಣೆ ಮೊಳಗಿಸಿದರು.ಸಾಯಂಕಾಲ ೪.೩೦ಕ್ಕೆ ಆರಂಭವಾದ ಮೆರವಣಿಗೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ವಿಜಯದಶಮಿ ಇನ್ನೂ ಒಂದು ವಾರ ಮುಂಚಿತವಾಗಿ ವಿಜದಶಮಿ ನಡೆಗೆ ವಿಜಯದಕಡೆಗೆ ಎಂಬ ಘೋಷಣೆಯೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಮೆರವಣಿಗೆಯಲ್ಲಿ ವಿಭಾಗೀಯ ಕಾರ್ಯವಾಹ ಮಹೇಶ್, ಜಿಲ್ಲಾ ಕಾರ್ಯವಾಹ ಚಂದ್ರಪ್ಪ, ಶಿವಕುಮಾರ್, ಸಂಘಚಾಲಕ ಕೆ.ವಿ.ರಾಜಣ್ಣ, ನಗರಸಭೆ ಅಧ್ಯಕ್ಷ ಸುರೇಶ್‌ನಾಯಕ, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಚುಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ, ಕೆ.ವೀರಭದ್ರಸ್ವಾಮಿ, ಎಸ್. ಬಾಲಸುಬ್ರಮಣ್ಯ, ಕಾಡಹಳ್ಳಿ ಕುಮಾರ್, ಚಿಕ್ಕರಾಜು, ಶಿವಣ್ಣ, ಶಿವಕುಮಾರಸ್ವಾಮಿ, ಶ್ರೀಕಾಂತ್ ಮೊದಲಾದವರು ಇದ್ದರು. ಡಿವೈಎಸ್ಪಿ ಲಕ್ಷ್ಮಯ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.