ಹಸಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಾಲಂಕರದೊಡನೆ

ಕನ್ನಡಪ್ರಭ ವಾರ್ತೆ ಹುಲ್ಲಹಳ್ಳಿ

ದುಗ್ಗಹಳ್ಳಿ ಗ್ರಾಮದಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರ. ಶ್ರೀಗುಂದಿ ಮಹಾದೇಶ್ವರ. ಶ್ರೀ ಸದ್ಗುರು ಮಹಾದೇವತಾರವರ. ಶ್ರೀ ಶಿವಕುಮಾರ ಸ್ವಾಮಿಗಳ ಮತ್ತು ಶ್ರೀ ಆದಿಶಕ್ತಿ ಮಾತೆಗೆ ಕಂತೆ ಮಾದೇಶ್ವರ ಬೆಟ್ಟದ ಶೀಲಾ ಮಠಾಧ್ಯಕ್ಷರಾದ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊರಟ ಮೆರವಣಿಗೆಯಲ್ಲಿ ಶ್ರೀ ಬಸವೇಶ್ವರರ ಪುತ್ತಳಿಕೆ. ಶ್ರೀಗುಂದಿ ಮಹಾದೇಶ್ವರ. ಶ್ರೀ ಸದ್ಗುರು ಮಹದೇವ ತಾತಾ ರವರ, ಶ್ರೀ ಶಿವಕುಮಾರ ಸ್ವಾಮಿಗಳ ಮತ್ತು ಶ್ರೀ ಆದಿಶಕ್ತಿ ದೇವಿಯ ಮೂರ್ತಿಗಳನ್ನು ವಿವಿಧ ಹೂಗಳಿಂದ ಅಲಂಕರಿಸಿ ಗ್ರಾಮದ ರಸ್ತೆಗಳಲ್ಲಿ ವೀರಗಾಸೆ ಕುಣಿತ, ಡೊಳ್ಳು ಕುಣಿತ, ನಂದಿ ಕಂಬ, ನಗಾರಿ ಹಾಗೂ ಮಂಗಳವಾದ್ಯ, ವಿಧ ಹೂಗಳಿಂದ ಅಲಂಕರಿಸಿದ ಜೋಡಿ ಎತ್ತುಗಳು ಹಾಗೂ ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಮೆರವಣಿಗೆ ಸಾಗುವ ರಸ್ತೆಯನ್ನು ಮಹಿಳೆಯರು ಗುಡಿಸಿ ವಿವಿಧ ರಂಗೋಲಿ ಹಾಕಿ ಹಸಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಾಲಂಕರದೊಡನೆ ಅಲಂಕೃತಗೊಂಡಿತು.

ಶ್ರೀ ಗುಂದಿ ಮಹದೇಶ್ವರ. ಶ್ರೀ ಬಸವೇಶ್ವರ. ಶ್ರೀ ಸದ್ಗುರು ಮಾದೇವ ತಾತ, ಹಾಗೂ ಆದಿಶಕ್ತಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಗ್ರಾಮಸ್ಥರು ಭಕ್ತಿ ಸಮ್ಮರ್ಪಿಸಿದರು. ನಂತರ ಸುತ್ತಮುತ್ತಲಿನ ಬರುವ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಿತ್ತು. ಗ್ರಾಮದ ಯಜಮಾನರು, ಮುಖಂಡರು, ಯುವಕರು ಇದ್ದರು.