ಸಾರಾಂಶ
ಓವರ್ ಸ್ಪೀಡ್‌ನಲ್ಲಿ ಓಡುತ್ತಿರುವ ಅಡಕೆ ಬೆಳೆ ವಿಸ್ತೀರ್ಣ । ನಾಲ್ಕೇ ವರ್ಷದಲ್ಲಿ 21 ಸಾವಿರ ಹೆಕ್ಟೇರ್ ಗೆ ಹೆಚ್ಚಳ
ಆರ್. ತಾರಾನಾಥ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದೇಶಕ್ಕೆ ಅಡಕೆ ರಫ್ತು ಆಗುತ್ತಿರುವುದರಲ್ಲಿ ಕರ್ನಾಟಕದ ಪಾಲು ನಂಬರ್ ಒನ್ ಸ್ಥಾನದಲ್ಲಿದೆ. ಅಡಕೆ ಬೆಳೆಯುವುದರಲ್ಲಿ ರಾಜ್ಯದಲ್ಲಿ ದಾವಣಗೆರೆ ಪ್ರಥಮ ಸ್ಥಾನದಲ್ಲಿದ್ದರೆ, ನೆರೆಯ ಶಿವಮೊಗ್ಗ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಕಾಫಿ ತವರೂರು ಚಿಕ್ಕಮಗಳೂರಿನಲ್ಲಿ ಅಡಕೆ ಬೆಳೆ ವಿಸ್ತೀರ್ಣ ದಿನೇ ದಿನೇ ಹೆಚ್ಚಳವಾಗುತ್ತಿದೆ. ಮುಂದೊಂದು ದಿನ ಬೆಳೆ ವಿಸ್ತೀರ್ಣದಲ್ಲಿ ಕಾಫಿಗೆ ಅಡಕೆ ಫೈಟ್ ಕೊಡುವ ಸಾಧ್ಯತೆ ಕಂಡು ಬರುತ್ತಿದೆ.ಚಿಕ್ಕಮಗಳೂರು ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ 7,22,075 ಹೆಕ್ಟೇರ್, ಇದರಲ್ಲಿ 1,29,080 ಹೆಕ್ಟೇರ್ ಭೂಮಿಯಲ್ಲಿ ಕೃಷಿ ಮಾಡಲಾಗುತ್ತಿದೆ. 1,84,297 ಹೆಕ್ಟೇರ್‌ನಲ್ಲಿ ತೋಟಗಾರಿಕೆ, ರೇಷ್ಮೆ ಹಾಗೂ ಪ್ಲಾಂಟೇಷನ್ ಬೆಳೆ ಇದೆ. ಇದರಲ್ಲಿ ಪ್ರಸಕ್ತ ಸಾಲಿನ ಅಂಕಿ ಅಂಶದ ಪ್ರಕಾರ 84,930 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ.2019- 20 ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದ ಅಡಕೆ ಬೆಳೆ ವಿಸ್ತೀರ್ಣ 63,589.06 ಹೆಕ್ಟೇರ್, ಅಂದರೆ, ಕಳೆದ 4 ವರ್ಷಗಳಲ್ಲಿ 21,341 ಹೆಕ್ಟೇರ್ ಅಡಕೆ ಬೆಳೆ ವಿಸ್ತೀರ್ಣ ಹೆಚ್ಚಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕಾಫಿ ಜತೆಗೆ ಅಡಕೆಗೂ ತವರೂರಿನ ಸ್ಥಾನಮಾನ ಸಿಗುವ ದಿನಗಳು ದೂರ ಇಲ್ಲ ಎಂಬ ಚಿತ್ರಣ ಜಿಲ್ಲೆಯಲ್ಲಿ ಕಂಡು ಬರುತ್ತಿದೆ. ಕಾಫಿ ತೋಟಗಳ ಜತೆ ಜತೆಗೆ ಹೊಸದಾಗಿ ಅಡಕೆ ತೋಟಗಳನ್ನು ಕಟ್ಟಲಾಗುತ್ತಿದೆ. ಕಾರಣಗಳೇನು ?ಜಿಲ್ಲೆಯ ಯಾವುದಾದರೂ ಒಂದು ಭಾಗದ ರೈತರು ಅಡಿಕೆ ಬೆಳೆಯತ್ತ ಮುಖ ಮಾಡಿಲ್ಲ, ಇಲ್ಲಿನ ಎಲ್ಲಾ 9 ತಾಲೂಕು ಗಳಲ್ಲೂ ಅಡಕೆ ಬೆಳೆ ಬೆಳೆವ ವಿಸ್ತೀರ್ಣ ಹೆಚ್ಚಳವಾಗಿದೆ. ಕಾಫಿ, ತೆಂಗು, ಮೆಣಸು, ಭತ್ತ, ಕಬ್ಬು ಸೇರಿದಂತೆ ಇತರೆ ಎಲ್ಲಾ ಕೃಷಿ ಮತ್ತು ತೋಟಗಾರಿಕೆ ಬೆಳೆ ಬೆಳೆಯುವ ರೈತರು ಅಡಕೆ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ.ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲೂಕುಗಳಲ್ಲಿ ಹೆಚ್ಚಿನ ಮಂದಿ ತೆಂಗು ಬೆಳೆಯುತ್ತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ತೆಂಗಿನ ತೋಟಗಳು ಹಲವು ರೋಗ ಬಾಧೆ ಎದುರಿಸುತ್ತಿವೆ. ಜತೆಗೆ ಸರ್ಕಾರದಿಂದ ತೆಂಗಿಗೆ ಬೆಂಬಲ ಬೆಲೆ ಪಡೆದುಕೊಳ್ಳಲು ಕಸರತ್ತು ಮಾಡಬೇಕಾಗಿದೆ. ಒಣ ಕೊಬ್ಬರಿ ಮಾರಾಟ ಮಾಡಲು ಹಗಲು ರಾತ್ರಿ ಎನ್ನದೆ ಎಪಿಎಂಸಿ ಯಲ್ಲಿ ಕಾಯಬೇಕು. ಅದ್ದರಿಂದ ತೆಂಗು ಬೆಳೆಗಾರರು ಅಡಕೆ ಬೆಳೆಯತ್ತಾ ಆಸಕ್ತಿ ತೋರುತ್ತಿದ್ದಾರೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.ಈ ವರ್ಷದಲ್ಲಿ ರೋಬಸ್ಟಾ ಕಾಫಿಗೆ ದಾಖಲೆ ಬೆಲೆ ಬಂದಿತ್ತು. ಇದೇ ಪರಿಸ್ಥಿತಿ ಮುಂದಿನ ವರ್ಷಗಳಲ್ಲೂ ಇರುತ್ತದೆ ಎಂಬುದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮೆಣಸಿನ ಬೆಲೆಯೂ ಕೂಡ ಏರಿಳಿತ ಕಂಡಿದೆ. ಆದರೆ, ಈ ಸಮಸ್ಯೆ ಅಡಕೆಗೆ ಇಲ್ಲ ಎಂದು ಹೇಳಲಾಗುತ್ತಿದೆ.ಒಂದು ಕ್ವಿಂಟಾಲ್ ರಾಶಿ ಇಡಿ ಅಡಕೆಗೆ 50 ಸಾವಿರ ರು. ಕೆಂಪು ಇಡಿ, ಬೆಟ್ಟೆ ಅಡಕೆಗೂ ಕೂಡ ಒಳ್ಳೆಯ ಬೆಲೆ ಇದೆ. 2012-13 ರ ನಂತರ ಅಡಕೆ ಬೆಲೆ ಇಳಿಮುಖವಾಗಿತ್ತು. ಕಳೆದ ವರ್ಷದಿಂದ ಮತ್ತೆ ಏರಿಕೆಯಾಗುತ್ತಿದೆ.ಗುಟ್ಕಾ ಸೇವನೆ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ. ಕಂಪನಿಗಳು ಸಹ ಉತ್ಪಾದನೆ ಹೆಚ್ಚಳ ಮಾಡಿವೆ. ಹೊಸ ಹೊಸ ಕಂಪನಿಗಳು ಸ್ಥಾಪನೆಯಾಗುತ್ತಿವೆ. ಹಾಗಾಗಿ ಅಡಕೆ ಬೇಡಿಕೆ ಹೆಚ್ಚಳವಾಗಿದ್ದರಿಂದ ಬೆಲೆಯೂ ಏರಿಕೆಯಾಗುತ್ತಿದೆ.ಸಕಾಲಕ್ಕೆ ನೀರು, ಗೊಬ್ಬರ ನೀಡಿದರೆ ಸಾಕು, ಕಾಫಿ ತೋಟಗಳಿಗೆ ಬೇಕಾಗುವಷ್ಟು ಕೂಲಿ ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ. ಒಂದು ಅಡಕೆ ಮರದ ಜೀವಿತ ಅವಧಿ 60 ರಿಂದ 100 ವರ್ಷ, ಗಿಡ 6ನೇ ವರ್ಷಕ್ಕೆ ಫಸಲು ಆರಂಭ ವಾಗುತ್ತದೆ, 40 ವರ್ಷದ ವರೆಗೆ ಉತ್ತಮ ಫಸಲು ನಂತರ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ. 80 ವರ್ಷ ಗಳವರೆಗೆ ಫಸಲು ಪಡೆಯಬಹುದು. ಅಷ್ಟರೊಳಗೆ ರೈತರು ಹೊಸದಾಗಿ ಗಿಡಗಳನ್ನು ನೆಡುತ್ತಾರೆ.ದ್ವಂದ್ವ ನಿಲುವುಅಡಕೆ ಬೆಳೆ ವಿಸ್ತೀರ್ಣ ಇದೆ ವೇಗದಲ್ಲಿ ಹೆಚ್ಚಾಗುತ್ತಾ ಹೋದರೆ, ಇತರೆ ಆಹಾರ ಧಾನ್ಯಗಳ ಮೇಲೆ ದುಷ್ಪರಿಣಾಮ ಬೀರಲಿದೆ. ನಿರೀಕ್ಷಿತ ಮಟ್ಟದಲ್ಲಿ ಮಳೆ ಬಾರದೆ ಹೋದರೆ ತೋಟಗಳನ್ನು ಉಳಿಸಿಕೊಳ್ಳಲು ಕಷ್ಟವಾಗಲಿದೆ. ಅದ್ದರಿಂದ ರೈತರು ತೋಟದಲ್ಲಿನ ಬೋರ್‌ವೆಲ್‌ಗಳನ್ನು ಅಳಪಡಿಸಬೇಕಾಗುತ್ತದೆ. ಭವಿಷ್ಯದಲ್ಲಿ ಅಂತರ್ಜಲ ಮಟ್ಟ ಇನ್ನಷ್ಟು ಕುಸಿಯಲಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಗೋರಖ್ ಸಿಂಗ್ ಅವರು ಕೇಂದ್ರ ಸರ್ಕಾರಕ್ಕೆ ಅಡಕೆ ಬೆಳೆ ವಿಸ್ತೀರ್ಣಕ್ಕೆ ಅವಕಾಶ ನೀಡಬೇಡಿ ಎಂಬ ವರದಿ ನೀಡಿದ್ದರು. ಆದರೆ, ಇನ್ನೊಂದೆಡೆ ಅಡಕೆಗೆ ಸರ್ಕಾರಗಳು ಉತ್ತೇಜನ ನೀಡುತ್ತಿವೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಯಲ್ಲಿ ಅಡಕೆ ಬೆಳೆ ವಿಸ್ತೀರ್ಣಕ್ಕೆ ಒಂದು ಎಕರೆಗೆ ಒಂದೂವರೆ ಲಕ್ಷ ರು.ವನ್ನು ತೋಟಗಾರಿಕೆ ಇಲಾಖೆ ಮೂಲಕ ಸಹಾಯಧನ ನೀಡಲಾಗುತ್ತಿದೆ.ಇದರಡಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 16,589 ರೈತರು, 12,113 ಎಕರೆ ಅಡಕೆ ಬೆಳೆ ವಿಸ್ತೀರ್ಣಕ್ಕೆ ಸಹಾಯಧನ ಪಡೆದುಕೊಂಡಿದ್ದಾರೆ.---- ಬಾಕ್ಸ್ ---ಅಡಕೆ ಬೆಳೆ ವಿಸ್ತೀರ್ಣ ಹೆಚ್ಚಳ ಆಗ್ತಾ ಇರೋದು ಬಹಳ ಅಪಾಯಕಾರಿ ಬೆಳವಣಿಗೆ. ಇದಕ್ಕೆ ಕಡಿವಾಣ ಹಾಕಲು ಗೋರಕ್ ಸಿಂಗ್ ನೀಡಿದ್ದ ವರದಿ ಜಾರಿ ಆಗಲೇ ಇಲ್ಲ. ನಿರ್ದಿಷ್ಟವಾದ ಕೃಷಿ ನೀತಿ ಇಲ್ಲ, ಅಡಕೆ ಬೆಳೆಯುವ ಪ್ರದೇಶದ ಬಗ್ಗೆ ಸರ್ಕಾರ ವರದಿ ನೀಡುತ್ತಿದೆ. ಅದರ 2-3 ಪಟ್ಟು ಒತ್ತುವರಿ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಅಡಕೆ ಹೆಚ್ಚು ಲಾಭ ತರುತ್ತಿದೆ ನಿಜ, ಭವಿಷ್ಯದ ಬಗ್ಗೆಯೂ ರೈತರು ಚಿಂತನೆ ಮಾಡಬೇಕು.ಆರ್. ದೇವಾನಂದ್ನಿರ್ದೇಶಕರುಕರ್ನಾಟಕ ಅಡಕೆ ಮಾರಾಟ ಮಹಾಮಂಡಳಪೋಟೋ ಫೈಲ್ ನೇಮ್ 26 ಕೆಸಿಕೆಎಂ 2---- ----- ------- -------- --------- --------ಚಿಕ್ಕಮಗಳೂರು ಜಿಲ್ಲೆಯ ಅಡಿಕೆ ಬೆಳೆಯ ವಿಸ್ತೀರ್ಣ ಹೆಕ್ಟೇರ್‌ಗಳಲ್ಲಿ
---------------------------------------------------------------------ತಾಲೂಕು2019-202023-24 (ವರ್ಷ)
---------------------------------------------------------------------ಚಿಕ್ಕಮಗಳೂರು3165.818495.98
-----------------------------------------------------------------ಕಡೂರು 8593.3013464.18
---------------------------------------------------------------------ಕೊಪ್ಪ9432.09 9774.50
-----------------------------------------------------------------------ಎನ್.ಆರ್.ಪುರ 5959.67 7205.03
----------------------------------------------------------------ಶೃಂಗೇರಿ3438.77 3678.59
--------------------------------------------------------------------ಮೂಡಿಗೆರೆ 7079.16 7927.86
-----------------------------------------------------------------ಕಳಸ 0 0 5974.87
----------------------------------------------------------------ತರೀಕೆರೆ 19981.3621201.04
---------------------------------------------------------ಅಜ್ಜಂಪುರ 5938.9 7208.27
---------------------ಅಡಕೆ ಬೆಳೆ ಪ್ರದೇಶ ವಿಸ್ತೀರ್ಣ (ಎನ್‌ಆರ್‌ಇಜಿ) ಸವಲತ್ತು ಪಡೆದವರು
-------------------------------------------------ವರ್ಷಎಕರೆಫಲಾನುಭವಿಗಳು
--------------------------------------------------2021-222456.41 3487
--------------------------------------------------2022-234642.246839
-------------------------------------------------2023-245015.876263
----------------------------------ಪೋಟೋ ಫೈಲ್ ನೇಮ್ 26 ಕೆಸಿಕೆಎಂ 3ಫಲವತ್ತಾದ ಅಡಕೆ ತೋಟ