ಸಾರಾಂಶ
ದೇವರಾಜ ಅರಸು ರಸ್ತೆಯಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿಗೆ ಕಡೆಗೆ ಹೋಗುತ್ತಿದ್ದಾಗ
ಕನ್ನಡಪ್ರಭ ವಾರ್ತೆ ಮೈಸೂರು
ದ್ವಿಚಕ್ರವಾಹನಕ್ಕೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿಯಾಗಿ ರೈಲ್ವೆ ನೌಕರರೊಬ್ಬರು ಮೃತಪಟ್ಟಿರುವ ಘಟನೆ ಮೈಸೂರಿನ ಜೆ.ಎಲ್.ಬಿ ರಸ್ತೆ- ಡಿ. ದೇವರಾಜ ಅರಸು ರಸ್ತೆ ಸೇರುವ ಮಹಾರಾಣಿ ಕಾಲೇಜು ಜಂಕ್ಷನ್ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.ನಗರದ ಕ್ಯಾತಮಾರನಹಳ್ಳಿಯ ನಿವಾಸಿ ಹಾಗೂ ರೈಲ್ವೆ ನೌಕರ ಶಿವಕುಮಾರ್ (58) ಎಂಬವರೇ ಮೃತಪಟ್ಟವರು. ಇವರು ತಮ್ಮ ಎಲೆಕ್ಟ್ರಿಕಲ್ ದ್ವಿಕ್ರವಾಹನದಲ್ಲಿ ಡಿ. ದೇವರಾಜ ಅರಸು ರಸ್ತೆಯಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿಗೆ ಕಡೆಗೆ ಹೋಗುತ್ತಿದ್ದಾಗ ಜೆಎಲ್ ಬಿ ರಸ್ತೆಯಲ್ಲಿ ರಾಮಸ್ವಾಮಿ ವೃತ್ತದ ಕಡೆಯಿಂದ ಬಂದ ಕೆಎಸ್ಆರ್ ಟಿಸಿ ಬಸ್ ಡಿಕ್ಕಿಯಾಗಿದೆ. ಗಾಯಾಳನ್ನು ತಕ್ಷಣ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ದೇವರಾಜ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ಮಮತಾ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.