ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾ ಬಂಧನವು ವಿಶೇಷ ಮಹತ್ವವಿದ್ದು, ಸಹೋದರ-ಸಹೋದರಿಯರ ಪ್ರೀತಿ, ವಾತ್ಸಲ್ಯವನ್ನು ಬಿಂಬಿಸುವ ಹಬ್ಬವಾಗಿದೆ ಎಂದು ಅರಬಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾ ಬಂಧನವು ವಿಶೇಷ ಮಹತ್ವವಿದ್ದು, ಸಹೋದರ-ಸಹೋದರಿಯರ ಪ್ರೀತಿ, ವಾತ್ಸಲ್ಯವನ್ನು ಬಿಂಬಿಸುವ ಹಬ್ಬವಾಗಿದೆ ಎಂದು ಅರಬಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ನಗರದ ಹೊಸಪೇಟೆ ರಸ್ತೆಯಲ್ಲಿರುವ ತಮ್ಮ ಸಹೋದರಿ ಲಕ್ಷ್ಮೀ ಅವರ ನಿವಾಸದಲ್ಲಿ ಸೋಮವಾರ ರಕ್ಷಾ ಬಂಧನ ಹಬ್ಬದ ನಿಮಿತ್ತ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಮಾತನಾಡಿದ ಅವರು, ಪ್ರತಿ ವರ್ಷವೂ ಈ ರಾಖಿ ಹಬ್ಬವನ್ನು ನಾವೆಲ್ಲ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಸಹೋದರಿ ಲಕ್ಷ್ಮೀ ಅವರು ಬಾಲಚಂದ್ರ ಜಾರಕಿಹೊಳಿ ಅವರಿಗೆ ಹಣೆಗೆ ತಿಲಕವನ್ನಿಟ್ಟು ಆರತಿಯನ್ನು ಬೆಳಗಿ ರಾಖಿಯನ್ನು ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬದ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮೀ ನಾಯಕ ಅವರ ಪುತ್ರ ಅಭಿಷೇಕ ಮತ್ತು ಪುತ್ರಿ ಅರುಣಾ ಉಪಸ್ಥಿತರಿದ್ದರು.ಕೋಟ್..ಪ್ರತಿಯೊಬ್ಬ ಸಹೋದರಿಯರು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸಲೆಂದು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಪ್ರತಿಯಾಗಿ ಸಹೋದರರು ಕೂಡ ತಮ್ಮ ಭಾತೃತ್ವ ಪ್ರೀತಿಯನ್ನು ಉಜ್ವಲಗೊಳಿಸಲು ಸಹೋದರಿಯರಿಗೆ ಬೆನ್ನೆಲುಬು ನಿಲ್ಲುತ್ತಾರೆ. ಪ್ರಾಚೀನ ಕಾಲದಿಂದಲೂ ಶ್ರಾವಣ ಮಾಸದಲ್ಲಿ ಆಚರಿಸುವ ರಕ್ಷಾ ಬಂಧನವು ಒಡಹುಟ್ಟಿದವರ ನಡುವಿನ ವಾತ್ಸಲ್ಯವನ್ನು ಬಿಂಬಿಸುವ ಹಬ್ಬವೇ ಈ ರಕ್ಷಾ ಬಂಧನವಾಗಿದೆ.-ಬಾಲಚಂದ್ರ ಜಾರಕಿಹೊಳಿ, ಅರಬಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷರು.