ಅನುದಾನ ತರದ ಸಂಸದರ ಸಭೆ ಬಹಿಷ್ಕರಿಸಲು ಮನವಿ

| Published : Aug 09 2024, 12:32 AM IST

ಸಾರಾಂಶ

A request to boycott the meeting of parliamentarians who do not bring grants

ಕನ್ನಡಪ್ರಭ ವಾರ್ತೆ ಹಿರಿಯೂರು: ಭದ್ರಾ ಯೋಜನೆಗೆ ಅನುದಾನ ತರದ ಸಂಸದ ಗೋವಿಂದ ಕಾರಜೋಳ ಅವರ ಸಭೆ ಸಮಾರಂಭಗಳನ್ನು ರೈತರು ಬಹಿಷ್ಕರಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಎಸ್.ಎಲ್.ಮೋಹನ್ ಮನವಿ ಮಾಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಸಂಸದ ಗೋವಿಂದ ಕಾರಜೋಳ ಈ ಭಾಗದ ಜೀವನಾಡಿ ನೀರಾವರಿ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ತರಲು ವಿಫಲರಾಗಿದ್ದು, ರೈತರು, ಪ್ರಜ್ಞಾವಂತರು ಅವರ ಸಭೆ ಸಮಾರಂಭಗಳಿಗೆ ಬಹಿಷ್ಕಾರ ಹಾಕಬೇಕು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕದ ಬಗ್ಗೆ ತಾರತಮ್ಯ ಮಾಡುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯು ಈ ಭಾಗದ ಮಹತ್ವಾಕಾಂಕ್ಷೆ ಯೋಜನೆಯಾಗಿರುವುದರಿಂದ ಇದನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಪರಿಗಣಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ 5300 ಕೋಟಿ ರು. ಅನುದಾನವನ್ನು ಪ್ರಥಮ ಆದ್ಯತೆ ಎಂದು ಪರಿಗಣಿಸಿ ಬಿಡುಗಡೆ ಮಾಡಬೇಕು. ಅನುದಾನ ಬಿಡುಗಡೆ ಮಾಡುವವರೆಗೆ ಸಂಸದ ಗೋವಿಂದ ಕಾರಜೋಳ ಅವರ ಸಭೆ, ಸಮಾರಂಭಗಳನ್ನು ಈ ಭಾಗದ ರೈತರು ಹಾಗೂ ಪ್ರಜ್ಞಾವಂತ ನಾಗರಿಕರು ಬಹಿಷ್ಕಾರ ಹಾಕಬೇಕು ಎಂದು ಅವರು ಕೋರಿದ್ದಾರೆ.

------

ಫೋಟೊ: ಚಿತ್ರ 1 ಎಸ್.ಎಲ್.ಮೋಹನ್, ನಿವೃತ್ತ ಪ್ರಾಧ್ಯಾಪಕ, ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಬೆಂಗಳೂರು.