ಸಾರಾಂಶ
ಮೈಸೂರಿನ ವಿವಿಧ ತಾಲೂಕುಗಳಿಂದ ಉಪನ್ಯಾಸಕರ ಪ್ರತಿನಿಧಿಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಮುರುಳಿ, ಪೂರ್ಣಿಮ, ನಂದೀಶ್ಕುಮಾರ್, ಡಾ.ಟಿ.ಕೆ. ರವಿ, ಮಹೇಶ್, ರಾಮಕೃಷ್ಣೇಗೌಡ ಅವರು ವಿಧಾನ ಪರಿಷತ್ ಸದಸ್ಯರಾದ ಕೆ ವಿವೇಕಾನಂದ ಅವರನ್ನು ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾ ಸರ್ಕಾರಿ, ಅನುದಾನಿತ ಮತ್ತು ದೈಹಿಕ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳೆಲ್ಲರೂ ಅವರು ಪದವಿ ಪೂರ್ವ ಕಾಲೇಜುಗಳನ್ನು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ವಿಲೀನಗೊಳಿಸಿದ ಬಳಿಕ ಉಪನ್ಯಾಸಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ ಅವರಿಗೆ ಮನವಿ ಸಲ್ಲಿಸಿದರು.ಅನುದಾನಿತ ಉಪನ್ಯಾಸಕರ ನಿಯೋಜನೆ ಸಮಸ್ಯೆ, ಪಿಂಚಣಿ ಸಮಸ್ಯೆ, ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜುಗಳಿಗೆ ಭರ್ತಿ ಹೊಂದಿರುವ ಉಪನ್ಯಾಸಕರ ಕಾಲಮಿತಿ ವೇತನ ಬಡ್ತಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತಿನ ಸದಸ್ಯರ ಗಮನ ಸೆಳೆಯಲಾಯಿತು. ಈ ಸಮಸ್ಯೆಗಳಿಗೆ ಸ್ಪಂದಿಸಿದ ಮಾನ್ಯ ವಿಧಾನ ಪರಿಷತ್ ಸದಸ್ಯರು ಸದನದಲ್ಲಿ ಈ ವಿಷಯಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದರು.
ಮೈಸೂರಿನ ವಿವಿಧ ತಾಲೂಕುಗಳಿಂದ ಉಪನ್ಯಾಸಕರ ಪ್ರತಿನಿಧಿಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಮುರುಳಿ, ಪೂರ್ಣಿಮ, ನಂದೀಶ್ಕುಮಾರ್, ಡಾ.ಟಿ.ಕೆ. ರವಿ, ಮಹೇಶ್, ರಾಮಕೃಷ್ಣೇಗೌಡ ಅವರು ವಿಧಾನ ಪರಿಷತ್ ಸದಸ್ಯರಾದ ಕೆ ವಿವೇಕಾನಂದ ಅವರನ್ನು ಸನ್ಮಾನಿಸಿದರು.ಮೈಸೂರು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಎಂ. ಮಹದೇವ, ಖಜಾಂಚಿ ಜಿ.ಬಿ. ಮಹೇಶ್, ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಎಂ.ಸಿ. ಗಿರೀಶ್, ಎಂ. ಮಹೇಶ್, ಪಿ.ಎಲ್. ಶಿವಕುಮಾರ್, ವಿನೇಶ್, ಪ್ರಸನ್ನ, ಆಲೂರು ಬಸವರಾಜು, ಹೇಮಚಂದ್ರ, ಅಶ್ವಿನಿ, ಹೇಮಾವತಿ, ಸುಮಂಗಳ ಹಕ್ಕಿ, ದಕ್ಷಿಣಮೂರ್ತಿ ಹಾಗೂ ಪ್ರಮುಖರು ಇದ್ದರು.