ಸಾರಾಂಶ
ಕಳೆದ 10 ವರ್ಷಗಳ ಹಿಂದೆ ಹಲವು ಕಂಪನಿಗಳಿಗೆ ನೀಡಿದ ಹಣ ಇನ್ನು ಮರಳಿ ಬಂದಿಲ್ಲ. ಆದ್ದರಿಂದ ಬಡ್ಸ್ ಆಕ್ಟ್ -2019ರ ಅಡಿಯಲ್ಲಿ ಠೇವಣಿದಾರರ ಮರುಪಾವತಿಗಾಗಿ ಟಿಪಿಜೆಪಿ ಸಂಘಟನೆಯ ಹಾಗೂ ಹೂಡಿಕೆದಾರರ ಅರ್ಜಿಯನ್ನು ಸ್ವೀಕರಿಸುವಂತೆ ಒತ್ತಾಯಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹೂಡಿಕೆದಾರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿಕಳೆದ 10 ವರ್ಷಗಳ ಹಿಂದೆ ಹಲವು ಕಂಪನಿಗಳಿಗೆ ನೀಡಿದ ಹಣ ಇನ್ನು ಮರಳಿ ಬಂದಿಲ್ಲ. ಆದ್ದರಿಂದ ಬಡ್ಸ್ ಆಕ್ಟ್ -2019ರ ಅಡಿಯಲ್ಲಿ ಠೇವಣಿದಾರರ ಮರುಪಾವತಿಗಾಗಿ ಟಿಪಿಜೆಪಿ ಸಂಘಟನೆಯ ಹಾಗೂ ಹೂಡಿಕೆದಾರರ ಅರ್ಜಿಯನ್ನು ಸ್ವೀಕರಿಸುವಂತೆ ಒತ್ತಾಯಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹೂಡಿಕೆದಾರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಹಣ ವಂಚಿತ ಠೇವಣಿದಾರರ ಕುಟುಂಬ ಹಾಗೂ ಹಲವಾರು ಕಂಪನಿಗಳಲ್ಲಿ, ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿದ ಎಲ್ಲ ಹೂಡಿಕೆದಾರರು ಬೀದಿಗಿಳಿದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬಡ್ಸ್ ಆಕ್ಟ್ 2019ರ ಅಡಿಯಲ್ಲಿ 5ರಿಂದ 6 ಸಾವಿರ ಅರ್ಜಿಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವೀಕರಿಸಿದ್ದಾರೆ. ತದ ನಂತರ ಅವರು ಬೇರೆ ಅರ್ಜಿ ನಮೂನೆಯಲ್ಲಿ ಕೊಡುವಂತೆ ತಿಳಿಸಿರುವುದು ಸರಿಯಲ್ಲ. ಈ ಹಿಂದೆ ಜಿಲ್ಲಾಧಿಕಾರಿ ವಿಚಾರಿಸಿದಾಗ ಸಂಘಟನೆಯ ಅರ್ಜಿ ಮುಖಾಂತರ ಹಣ ಮಾಡುತ್ತಿದ್ದೀರಿ ಎಂದು ಆಪಾದನೆ ಮಾಡಿದ್ದಾರೆ. ಆದರೆ ಸಂಘಟನೆಯ ಆ ರೀತಿ ಅರ್ಜಿಯಲ್ಲಿ ಹಣದ ವ್ಯವಹಾರ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಸಂಘಟನೆಯ ಹೆಸರು ಕೆಡಿಸಲು ಹೂಡಿಕೆದಾರರಿಗೆ ತೊಂದರೆ ಕೊಡಲು ಈ ರೀತಿ ಮಾಡಿರಬಹುದು. ಅದನ್ನು ಗಣನೆಗೆ ತೆಗೆದುಕೊಂಡು ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಈ ಪ್ರತಿಭಟನೆಯಲ್ಲಿ ಚುನ್ನಪ್ಪ ಪೂಜೇರಿ, ರಾಘವೇಂದ್ರ ನಾಯಕ, ಎಂ ಎಂ ಖುದಾವಂದ, ಶಿವಕುಮಾರ ಗಿರೋಜಿ, ರಾಜೇಂದ್ರಬಾಬು ಹಾಲಗಿ ಸೇರಿದಂತೆ ಇನ್ನು ಅನೇಕರು ಪ್ರಭಾಗಿಯಾಗಿದ್ದರು.