ಸುಗಮ ಸಂಗೀತ ಪರಿಷತ್ ನಿಂದ 44 ಗಾಯಕರ ಆಯ್ಕೆ

| Published : Aug 12 2024, 12:46 AM IST

ಸಾರಾಂಶ

118 ಹವ್ಯಾಸಿ ಗಾಯಕರು ಭಾಗವಹಿಸಿದ್ದರು. 44 ಗಾಯಕರನ್ನು ಅಯ್ಕೆ ಮಾಡಲಾಯಿತು

ಕನ್ನಡಪ್ರಭ ವಾರ್ತೆ ಮೈಸೂರುನಗರದ ವಸ್ತು ಪ್ರದರ್ಶನ ಆವರಣದಲ್ಲಿ ಆಯೋಜಿಸಿದ್ದ ಹಾಡುಗಾರರ ಆಯ್ಕೆಯ ವೇಳೆ 44 ಗಾಯಕರನ್ನು ಆಯ್ಕೆ ಮಾಡಲಾಯಿತು.ಕರ್ನಾಟಕ 50ರ ಸಂಭ್ರಮ ಸಾಂಸ್ಕೃತಿಕ ವೇದಿಕೆಯಲ್ಲಿ ಆ. 17 ಮತ್ತು 18 ರಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮೈಸೂರು ಘಟಕದ ಅಧ್ಯಕ್ಷ ಡಾ. ನಾಗರಾಜ್ ವಿ. ಭೈರಿ ಅವರ ನೇತೃತ್ವದಲ್ಲಿ ಆಯೋಜಿಸಿರುವ ಗೀತಧಾರೆ ಸುಗಮಸಂಗೀತ ಕಾರ್ಯಕ್ರಮಕ್ಕೆ ಕೆ.ಎಚ್.ಬಿ ಕಾಲೋನಿಯ ಅನಂತೇಶ್ವರ ಭವನದಲ್ಲಿ ಹಾಡುಗಾರರ ಆಯ್ಕೆಯ ಆಡಿಷನ್ ನಡೆಯಿತು.ಅದರಲ್ಲಿ 118 ಹವ್ಯಾಸಿ ಗಾಯಕರು ಭಾಗವಹಿಸಿದ್ದರು. 44 ಗಾಯಕರನ್ನು ಅಯ್ಕೆ ಮಾಡಲಾಯಿತು, ಕವಿ ಜಯಪ್ಪ ಹೊನ್ನಾಳಿ, ಉಪಾಧ್ಯಕ್ಷ ಗಂಗಾಧರಪ್ಪ, ಕಾರ್ಯದರ್ಶಿ ಸಿರಿಬಾಲು, ಪಿ.ಆರ್.ಓ ಬೆಟ್ಟೆಗೌಡ, ತೀರ್ಪುಗಾರರಾಗಿ ಇಂದ್ರಾಣಿ ಅನಂತರಾಮ್, ಡೇವಿಡ್, ರಶ್ಮಿ ಚಿಕ್ಕಮಗಳೂರು, ಎ.ಡಿ. ಶ್ರೀನಿವಾಸ್, ರಾಜೇಶ್ ಪಡಿಯಾರ್, ಸಂಗೀತ ಪಕ್ಕವಾದ್ಯದಲ್ಲಿ ತಬಲವಾದಕ ಇಂಧೂ ಶೇಖರ್, ಕೀಬೋರ್ಡ್ ವಾದಕ ಗಣೇಶ್ ಭಟ್, ರಿದಂಪ್ಯಾಡ್ ನಲ್ಲಿ ಕಿರಣ್, ನಿರೂಪಕ ಅಜಯ್ ಶಾಸ್ತ್ರಿ ಇದ್ದರು.