ಪ್ರತ್ಯೇಕ ಪ್ರಕರಣ: ಇಬ್ಬರು ರೈತರ ಆತ್ಮಹತ್ಯೆ

| Published : May 01 2024, 01:16 AM IST

ಸಾರಾಂಶ

ಪ್ರಕರಣ ದಾಖಲಿಸಿಕೊಂಡ ಬನವಾಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶಿರಸಿ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಅಂಡಗಿಯ ಮಲ್ಲಿಕಾರ್ಜುನ ನಿಂಗಪ್ಪ ಗೌಡ (೩೦) ಸಾಲಬಾಧೆಯಿಂದ ಕಳೆನಾಶಕ ಸೇವಿಸಿದ ತಾಲೂಕಿನ ಅಂಡಗಿಯ ರೈತ ಚಿಕಿತ್ಸೆ ಫಲಕಾರಿಯಾಗದೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಇವರು ಬನವಾಸಿ ಕ್ಯಾದಗಿಕೊಪ್ಪ ಗ್ರಾಮದಲ್ಲಿ ೪ ಎಕರೆ ಜಮೀನಿನಲ್ಲಿ ಅಡಕೆ, ಬಾಳೆ ಭತ್ತ ಬೆಳೆದಿದ್ದು, ಕೊರ್ಲಕಟ್ಟಾ ಸೊಸೈಟಿಯಲ್ಲಿ ₹೩ ಲಕ್ಷ ಬೆಳೆಸಾಲ ಮಾಡಿದ್ದರು. ಅಲ್ಲದೇ, ವಿವಿಧೆಡೆ ₹೩.೧೦ ಲಕ್ಷ ಸಾಲವನ್ನು ಮಾಡಿದ್ದರು. ಸಾಲವನ್ನು ತೀರಿಸಲಾಗದೇ, ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಏ. ೨೩ರಂದು ರಾತ್ರಿ ೧೦ ಗಂಟೆಗೆ ಮನೆಯಲ್ಲಿ ಕಳೆನಾಶಕ ಕುಡಿದು ಅಸ್ವಸ್ಥನಾಗಿದ್ದರು. ನಂತರ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಸಿಟಿ ಸ್ಕ್ಯಾನ್‌ಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಏ. ೨೯ರಂದು ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬನವಾಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನರೂರಿನಲ್ಲಿ ಆತ್ಯಹತ್ಯೆ: ಅಡಕೆ ಸಸಿಗಳು ಒಣಗುತ್ತಿರುವುದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ತಾಲೂಕಿನ ನರೂರಿನ ಪುಟ್ಟಪ್ಪ ಬಸಪ್ಪ ನಾಯ್ಕ(೬೫) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ರೈತ. ಅವರು ಆರು ವರ್ಷಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಮನೆಯ ಹಿಂದೆ ಅರಣ್ಯ ಅತಿಕ್ರಮಣ ಜಾಗದಲ್ಲಿ ಅಡಕೆ ಸಸಿಗಳನ್ನು ನೆಟ್ಟು ಸಾಗುವಳಿ ಮಾಡುತ್ತಿದ್ದರು. ಮಳೆಯಾಗದ ಹಿನ್ನೆಲೆ ಸಸಿಗಳೆಲ್ಲವೂ ಒಣಗುತ್ತಿರುವುದನ್ನು ಮನಸ್ಸಿಗೆ ಹಚ್ಚಿಕೊಂಡು ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪತ್ನಿ ಪಾರ್ವತಿ ಪುಟ್ಟಪ್ಪ ನಾಯ್ಕ ಬನವಾಸಿ ಠಾಣೆಯಲ್ಲಿ ದೂರು ನೀಡಿದ್ದಾರೆ.