ಸಾರಾಂಶ
ಕನ್ನಡಪ್ರಭ ವಾರ್ತೆ ಬೈಂದೂರುಭಾರತ ದೇಶದ ಭದ್ರತೆ, ಆರ್ಥಿಕ ಸಬಲೀಕರಣ, ಭಯೋತ್ಪಾದನೆ ನಿವಾರಣೆಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಬಹುಮತದಿಂದ ಗೆಲ್ಲಿಸಿ, ರಾಷ್ಟ್ರಭಕ್ತ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ತಿರುಗಾಲು, ಬಿಜೂರು, ಶಿರೂರು, ಎಳಜಿ ಮುಂತಾದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರಾರ್ಥ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿ ಮತದಾರರಿಗೆ ಮನವಿ ಮಾಡಿದರು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಬಡವರ ಮನೆಗಳಲ್ಲಿ ಗ್ಯಾಸ್ ಮೂಲಕ ಅಡುಗೆ ಮಾಡಲು ಅವಕಾಶವಾಯಿತು. 11.50 ಕೋಟಿ ಶೌಚಾಲಯ ಭಾರತದಲ್ಲಿ ನಿರ್ಮಾಣವಾಯಿತು. ದೀನದಯಾಳ್ ಯೋಜನೆಯ ಮೂಲಕ ಕಡು ಬಡವರ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಯಿತು. ಇದೆಲ್ಲದಕ್ಕಿಂತ ದೇಶದ 146 ಕೋಟಿ ಜನರಿಗೆ ಪ್ರಧಾನಿ ಮೋದಿ ಬದುಕಿನ ಗ್ಯಾರಂಟಿ ಕಟ್ಟಿಕೊಟ್ಟರು. ವಿಶ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವನ್ನಾಗಿ ಮೂಡಿಬರುತ್ತದೆ. ದೇಶದ ಮುಂದಿನ ಜನಾಂಗ ನೆಮ್ಮದಿಯಿಂದ ಬದುಕಲು ಬಿಜೆಪಿಗೆ ಮತ ನೀಡಿ ಎಂದು ಕೋಟ ವಿವಿಧಡೆಯಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಗುರುರಾಜ ಗಂಟೆ ಹೊಳೆ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷರಾದ ದೀಪಕ್ ಶೆಟ್ಟಿ ಮತ್ತು ಉಡುಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾದ ಪೃಥ್ವಿರಾಜ ಶೆಟ್ಟಿ ಬಿಲ್ಲಾಡಿ ಮತ್ತು ಮುಂತಾದ ಮುಖಂಡರು ಉಪಸ್ಥಿತರಿದ್ದರು.